ಮಾನ್ವಿ ಜು ೨೭ :- ರಾಯಚೂರು ಜಿಲ್ಲೆಯಲ್ಲಿ ಎಲ್ಲಾ ಸಮಾಜದ ಏಳಿಗೆಗಾಗಿ ಹಾಗೂ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹಗಲಿರುಳು ಶ್ರಮಿಸಿರುವ ಹಿರಿಯ ದಲಿತ ಹೋರಾಟಗಾರ ಹೇಮರಾಜ್ ಅಸ್ಕಿಹಾಳ ಇವರಿಗೆ ಕಾಂಗ್ರೆಸ್ ಪಕ್ಷದ ಸರ್ಕಾರದ ಅವಧಿಯಲ್ಲಿ ಒಂದು ನಿಗಮ ಮಂಡಳಿ ಸ್ಥಾನವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮಾದಿಗ ದಂಡೋರ ತಾಲೂಕ ಅಧ್ಯಕ್ಷ ರವಿಕುಮಾರ್ ಮದ್ಲಾಪೂರು ಇವರು ಪತ್ರಿಕೆ ಹೇಳಿಕೆ ನೀಡಿದ್ದಾರೆ..
ನಂತರ ಮಾತಾನಾಡಿದ ಅವರು ಹೇಮರಾಜ ಅಸ್ಕಿಹಾಳ ಇವರು ದಲಿತ ನಾಯಕನಾಗಿ ಗುರುತಿಸಿಕೊಂಡಿದ್ದರು ಕೂಡ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ ಹೋರಾಟದಲ್ಲಿ ಭಾಗಿಯಾಗಿ ಎಲ್ಲಾ ಸಮುದಾಯದಲ್ಲಿರುವ ಬಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅನೇಕ ಹೋರಾಟವನ್ನು ಮಾಡಿದ್ದಾರೆ ಹಾಗೂ ಪ್ರಮುಖವಾಗಿ ಅವರಿಗೆ ಸಾಮಾಜಿಕ ಜವಾಬ್ದಾರಿಯ ಅನುಭವದ ಅರಿವು ಇರುವುದರ ಜೊತೆಗೆ ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಇವರ ಪಾತ್ರ ಬಹುದೊಡ್ಡದಾಗಿದನ್ನು ಪರಿಗಣಿಸಿ ರಾಜ್ಯ ಸರ್ಕಾರ ಇವರಿಗೆ ಸೂಕ್ತ ಸ್ಥಾನಮಾನವನ್ನು ನೀಡುವುದರ ಜೊತೆಗೆ ಸಾಮಾಜಿಕ ಸೇವೆ ಮಾಡುವುದಕ್ಕೆ ಅನುಕೂಲ ಮಾಡುವಂತೆ ನಮ್ಮ ಮಾದಿಗ ದಂಡೋರ ಸಂಘಟನೆ ಹಾಗೂ ಆತ್ಮೀಯ ಒಡನಾಡಿಗಳ ಜೊತೆಗೆ ಶಾಸಕ ಜಿ ಹಂಪಯ್ಯ ನಾಯಕ ಇವರಿಗೆ ಹಾಗೂ ತಾಲೂಕ ಆಡಳಿತ ಕಛೇರಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.