ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ

Oplus_131072

ಬೀದರ್:ಮೇ.12: ಇಲ್ಲಿನ ಸಿದ್ಧಾರೂಢ ಸ್ವಾಮಿ ಗುಂಪಾ ಬಳಿಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಆಚರಿಸಲಾಯಿತು.
ಬೆಳಗ್ಗೆ ವಿಶೇಷ ಪೂಜೆ, ತೊಟ್ಟಿಲು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಯಿತು. ವಿವಿಧ ತಂಡಗಳಿಂದ ಭಜನೆ ಕಾರ್ಯಕ್ರಮ ಜರುಗಿತು.
ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ ಮಾತನಾಡಿದರು. ಕಾರ್ಯದರ್ಶಿ ಗೋಪಾಲರಡ್ಡಿ, ಗೌರವಾಧ್ಯಕ್ಷ ಸಂಗ್ರಾಮರಡ್ಡಿ, ಉಪಾಧ್ಯಕ್ಷ ಚಂದ್ರಶೇಖರ ರಡ್ಡಿ, ಸದಸ್ಯರಾದ ಬಲವಂತರಡ್ಡಿ, ರಾಜರಡ್ಡಿ, ಬಾಬುರಡ್ಡಿ, ರಾಜರಡ್ಡಿ ಚನ್ನರಡ್ಡಿ, ಅಶೋಕರಡ್ಡಿ, ವಿಜಯರಡ್ಡಿ, ಗೋಪಾಲರಡ್ಡಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.