ಹೇಮರಡ್ಡಿ ಮಲ್ಲಮಾಂಬೆ ಮಹಾ ಪುರಾಣ ಪ್ರಾರಂಭ

ಕಲಬುರಗಿ,ಆ.1-ಸುಕ್ಷೇತ್ರ ಹಲಕರ್ಟಿ ಕಟ್ಟಿಮನಿ ಹಿರೇಮಠ ಸಂಸ್ಥಾನದಲ್ಲಿ ಪ್ರತಿ ವರ್ಷದ ಪದ್ದತಿಯಂತೆ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳು ಪಯರ್ಂತ ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ಉಪವಾಸ ಅನುಷ್ಠಾನ ಕಾರ್ಯಕ್ರಮ ಮತ್ತು ಸಂಜೆಯ ಮಹಾರುದ್ರಾಭಿಷೇಕ ಹಾಗೂ ಪೂಜ್ಯ ಗುರುಗಳ ಪಾದ ಪೂಜೆ ಮಹಾಮಂಗಳಾರುತಿ ಕಾರ್ಯಕ್ರಮ ಜರುಗಿತು.
ನಂತರ ಲಿಂ.ಮುನೀಂದ್ರ ಶಿವಯೋಗಿಗಳವರ ಕರ್ತೃ ಗದ್ದುಗೆಗೆ ಬಿಲ್ವಪುಷ್ಪಗಳಿಂದ ಪೂಜೆ ಜರುಗಿತು.
ರಾತ್ರಿ 9 ಗಂಟೆಗೆ ಸುಕ್ಷೇತ್ರ ಹಲಕರ್ಟಿಯ ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳು ಪಯರ್ಂತ ಹೇಮರಡ್ಡಿ ಮಲ್ಲಮಾಂಬೆ ಮಹಾಪುರಾಣವನ್ನು ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಹಾಗೂ ಪುರಾಣಿಕರಾದ ಬಂಡಯ್ಯ ಸ್ವಾಮಿಜೀ ಸುಂಟನೂರ ದೇವಸ್ಥಾನದ ಕಮಿಟಿಯ ಸದಸ್ಯರು ದೇವಸ್ಥಾನದ ಆರ್ಚಕರು ಮತ್ತು ಗ್ರಾಮಸ್ಥರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಹೇಮರಡ್ಡಿ ಮಲ್ಲಮಾಂಬೆ ಮಹಾಪುರಾಣ ಪುರಾಣಿಕಾರದ ವೇ.ಮೂ ಬಂಡಯ್ಯ ಶಾಸ್ತ್ರೀಗಳು ಸುಂಟನೂರು, ಸಂಗೀತಗಾರದ ವೇ.ಮೂ ವೀರಭದ್ರಯ್ಯ ಗವಾಯಿಗಳು, ತಬಲವಾದಕರಾದ ಸಂತೋಷ ಕುಮಾರ ಕೋಡ್ಲಿ ಅವರಿದ ಸಂಗೀತ ಜರುಗಿತು. ಕಾರ್ಯಕ್ರಮದಲ್ಲಿ ಪುರಾಣದ ನಂದಿಯಾಗಿ ಬಸಯ್ಯ ಸ್ವಾಮಿ ಹಾಗೂ ಸಕಲ ಗ್ರಾಮದವರು ಭಾಗವಹಿಸಿದ್ದರು.