ಹೇಮನಾಳ, ಶಾವಂತಗೇರಾ ಗ್ರಾಪಂ ಚುನಾವಣೆ ನಡೆಸಲು ಒತ್ತಾಯ

ರಾಯಚೂರು,ಡಿ.೧೭- ದೇವದುರ್ಗ ತಾಲ್ಲೂಕಿನ ಹೆಮನಾಳ ಮತ್ತು ಶಾವಂತಗೇರಾ ಗ್ರಾಮ ಪಂಚಾಯತ್ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದಿರು.
ದೇವದುರ್ಗ ತಾಲ್ಲೂಕಿನ ಹೆಮನಾಳ ಮತ್ತು ಶಾವಂತಗೇರಾ ಈ ಎರಡು ಗ್ರಾಮ ಪಂಚಯತಿಗಳಿಗೆ ಕಳೆದ ೫ ವರ್ಷಗಳಿಂದ ಚುನಾವಣೆ ನಡೆಯದೇ, ಅಭಿವೃದ್ಧಿ ಕೆಲಸಗಳು ಹಾಗೂ ಮೂಲಭೂತ ಸೌಕರ್ಯಗಳು ಸ್ಥಗಿತಗೊಂಡಿವೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ೫ ವರ್ಷಕ್ಕೆ ಒಂದು ಗ್ರಾಮ ಪಂಚಾಯತ್ ಚುನಾವಣೆ, ಚುನಾಯಿತ ಪ್ರತಿನಿಧಿಗಳು ಇಲ್ಲದೇ ಇರುವುದು ಗ್ರಾಮ ಸ್ವರಾಜ್ ವ್ಯವಸ್ಥೆಗೆ ವಿರೋಧಿ ಕ್ರಮವಾಗಿದೆ. ಹೇಮನಾಳ ಗ್ರಾಮ ಪಂಚಾಯತಿಗೆ ಮದರಕಲ್ ಗ್ರಾಮವನ್ನು ಸೇರ್ಪಡೆ ಮಾಡುವ ಕುರಿತು ಹೈಕೋರ್ಟ್‌ನಲ್ಲಿ ಇರುವ ತಡೆಯಾಜ್ಞೆ ಶೀಘ್ರವೇ ತೆರವುಗೊಳಿಸಿ ಎರುಡು ಗ್ರಾಮ ಪಂಚಯತಿಗಳಿಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವೇಂದ್ರಪ್ಪ ಗೌಡ ಹಂಚಿನಾಳ, ರಾಜಶೇಖರ ಪಾಟೀಲ್ ಬಸವಂತಪುರ, ಕೆ.ಎಂ. ಪಾಟೀಲ್ ಶಾವಂತಗೇರಾ, ಪರ್ವತರೆಡ್ಡಿ ಗೌಡ ಶಾವಂತಗೇರಾ, ಸೂಗಪ್ಪಗೌಡ ಹೊನ್ನಟಿಗಿ, ಮೈಷಾಲರೆಡ್ಡಿಗೌಡ ಕೋಳೂರು, ನಾಗಪ್ಪ ಹೇಮನಾಳ, ತಮ್ಮಣ್ಣ ಬೊಮ್ಮನಾಳ, ವಿಜಯ ಬಂಡಾರಿ ಶಾವಂತಗೇರಾ, ರೂಬಿನ್ ಬೊಮ್ಮನಾಳ, ಬಸವರಾಜ ಬೊಮ್ಮನಾಳ, ಮಾಂತಪ್ಪ ಸಾಹುಕಾರ ಹೇಮನಾಳ, ಅಮರೇಶ ಗೌಡ ಹೊನ್ನಟಗಿ, ಶಾಂತ ಕುಮಾರ ಹೊನ್ನಟಗಿ, ಸತ್ಯನಾರಾಯಣ ಸಿಂಗ್ ಬೊಮ್ಮನಾಳ, ರಂಗಪ್ಪ ಹೇಮನಾಳ, ನಾಗರಾಜ ಶಾವತಗೇರಾ, ಸಿದ್ದಪ್ಪ ಸಾಹುಕಾರ ಹೇಮನಾಳ, ಬಸವರಾಜ ರಾಯಕುಂಪಿ, ಮಲ್ಲಯ್ಯ ಪೂಜಾರಿ ಇಂಗಳದಾಳ, ಮಲ್ಲಯ್ಯ ಖಾನಾಪುರ, ಹಂಪಣ್ಣ ಅಪ್ರಾಳ, ರಡ್ಡೆಪ್ಪ ಗೌಡ ಹೊನ್ನಟಗಿ, ಹನುಮಂತ್ರಾಯ ಕೂಡ್ಲಗಿ, ಪ್ರಭಾಕರ ಪಾಟೀಲ್ ಇಂಗಳದಾಳ, ಮಸ್ತಾನಿ ನಾಯಕ ಖಾನಾಪುರ, ಮೂರ್ತಿ ಹೇಮನಾಳ, ರಾಜು ಬೊಮ್ಮನಾಳ, ಸ್ಯಾಮುವೆಲ್ ಖಾವಂತಗೇರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.