ಹೇಟ್ಮಯರ್ ಅಬ್ಬರ: ರಾಜಸ್ಥಾನಕ್ಕೆ ರೋಚಕ ಜಯ

ಮೊಹಾಲಿ:ಶಿಮ್ರಾನ್ ಹೇಟ್ಮಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ಆತಿಥೇಯ ಪಂಜಾಬ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಇಲ್ಲಿನ ಮುಲಾನ್ ಪುರದ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಕಲೆ ಹಾಕಿತು. ರಾಜಸ್ಥಾನ ರಾಯಲ್ಸ್ 19.5 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಕಲೆ ಹಾಕಿತು.
148 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ರಾಜಸ್ಥಾನ ತಂಡ ರನ್ ಗಳಿಸಲು ಪರದಾಡಿತು. ಓಪನರ್ಗಳಾದ ಯಶಸ್ವಿ ಜೈಸ್ವಾಲ್ (39 ರನ್) ಮತ್ತು ತನುಶ್ ಕೋಟ್ಯಾನ್ (24 ರನ್) ಮೊದಲ ವಿಕೆಟ್‌ಗೆ 56 ರನ್ ಸೇರಿಸಿದರು. ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ (18ರನ್), ರಿಯಾನ್ ಪರಾಗ್ (23 ರನ್), ಧ್ರುವ ಜುರೆಲ್ 6, ರೊವ್ ಮನ್ ಪೊವೆಲ್ 11, ಶಿಮ್ರಾನ್ ಹೇಟ್ಮಯರ್ ಕೊನೆಯ ಓವರ್ ನಲ್ಲಿ 2 ಭರ್ಜರಿ ಸಿಕ್ಸರ್ ಹೊಡೆದು ಒಂದು ಎಸೆತ ಬಾಕಿ ಇರುವಂತೆ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಪಂಜಾಬ್ ಪರ ರಬಾಡ 18ಕ್ಕೆ 2, ಕರ್ರನ್ 25ಕ್ಕೆ 2, ಅರ್ಷದೀಪ್ 45ಕ್ಕೆ 1, ಲಿವಿಂಗ್ ಸ್ಟೊನ್ ಮತ್ತು ಹರ್ಷಲ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಪಂಜಾಬ್ ತಂಡದ ಪರ ಅಥರ್ವ ತೈದೆ 15, ಬೇರ್ ಸ್ಟೊ 15, ಪ್ರಭಾಸಿಮ್ರಾನ್ 10,
ಸ್ಯಾಮ್ ಕರ್ರನ್ 6, ಜಿತೇಶ್ ಶರ್ಮಾ 29, ಲಿವೀಂಗ್ ಸ್ಟೋನ್ 21 ಮತ್ತು ಅಶುತೋಷ್ ಶರ್ಮಾ 31 ರನ್ ಹೊಡೆದರು.
ಆವೇಶ್ ಖಾನ್ 34 ಕ್ಕೆ 2, ಕೇಶವ್ ಮಹರಾಜ್ 23ಕ್ಕೆ 2, ಬೌಲ್ಟ್ ಮತ್ತು ಕುಲ್ದೀಪ್ ಸೇನ್ ತಲಾ 1 ವಿಕೆಟ್ ಪಡೆದರು