ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯ :ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರ ಸಾವು

ಅಥಣಿ : ನ.13:ಹೆಸ್ಕಾಂ ನ ಲಿಂಕ್ ಲೈನ್ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ಮೃತಪಟ್ಟ ದುರ್ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಹೆಸ್ಕಾಂ ಇಲಾಖೆಯ ಲಿಂಕ್ ಲೈನ್ ಜೋಡಿಸುವ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಹುಬ್ಬಳ್ಳಿಯ ಸಮರ್ಥ ಎಲೆಕ್ಟ್ರಿಕಲ್ಸ್ ನ ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಬಂದಿದ್ದ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಹಣಮಂತ ಹಾಲಪ್ಪ ಮಗದುಮ್(30) ಹಾಗೂ ಅಶೋಕ ಮಲ್ಲಪ್ಪ ಮಾಳಿ (32) ಎಂಬ ಇಬ್ಬರು ಮೃತಪಟ್ಟ ಕಾರ್ಮಿಕರಾಗಿದ್ದಾರೆ

ಕೆಲಸ ಪ್ರಾರಂಭಿಸುವ ಮುಂಚೆ ಹೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ ಸಹ ಈ ರೀತಿ ವಿದ್ಯುತ್ ಪ್ರವಹಿಸಿ ಮರಣ ಹೊಂದಿರುವುದು ನೋಡಿದರೆ ಇಲಾಖೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ, ಇದಕ್ಕೆಲ್ಲ ನೇರ ಹೊಣೆ ವಿದ್ಯುತ್ ಇಲಾಖೆ ಅಧಿಕಾರಿಗಳೇ ಅಥವಾ ಗುತ್ತಿಗೆದಾರರೇ ಎಂದು ಸಾರ್ವಜನಿಕರು ಮತ್ತು ಮೃತ ಕುಟುಂಬಸ್ಥರು ಆಕ್ರೋಶ
ವ್ಯಕ್ತಪಡಿಸುತ್ತಿದ್ದರು, ಈ ದುರ್ಘಟನೆಗೆ ಸಂಬಂಧಿಸಿದಂತೆ ಹೆಸ್ಕಾಂ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು, ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ,
ಈ ದುರ್ಘಟನೆ ಮಧ್ಯಾಹ್ನ 2 ಗಂಟೆಗೆ ನಡೆದರೂ ಸಂಜೆ 6 ಗಂಟೆಯವರೆಗೆ ಯಾವ ಹೆಸ್ಕಾಂ ಅಧಿಕಾರಿಗಳು ಆಗಮಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಸ್ಥಳಕ್ಕೆ ಅಥಣಿ ಪೆÇಲೀಸರು ಭೇಟಿ ನೀಡಿ ಇಬ್ಬರು ಕಾರ್ಮಿಕರ ಸಾವು ಸಂಭವಿಸಲು ನಿರ್ಲಕ್ಷ ವಹಿಸಿದ ಗುತ್ತಿಗೆದಾರ ಮತ್ತು ಹೆಸ್ಕಾಂ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ,