ಹೆಸರಿಗೆ ಪ್ರಾಚೀನ ರಾಜಧಾನಿ ಸ್ವಚ್ಚತೆ ಮರೀಚಿಕೆ ಅಭಿವೃದ್ಧಿ ಕುಂಠಿತ!ಕಕ ಅಭಿವೃದ್ಧಿ ಮಂಡಳಿಯಿಂದ 500 ಕೋಟಿ ನಿರೀಕ್ಷೆ!

ಬಿಜನಳ್ಳಿ ಸುರೇಶ್
ಸೇಡಂ,ಮಾ,01: ಗ್ರಾಮಾಭಿವೃದ್ಧಿಗೆ ಸರ್ಕಾರವು ಪ್ರತಿ ಪಂಚಾಯತ್ಗೆ ಒಬ್ಬ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ ಅದ್ರೆ ತಾಲೂಕಿನಲ್ಲಿ ಪಿಡಿಓಗಳ ಕೊರತೆಯಿಂದ ಗ್ರಾಮಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ ಎಂದರೆ ತಪ್ಪಾಗಲಾರದು.ಆದರೆ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಒಬ್ಬರಿಗೆ ಒಂದೆರಡು ಪಂಚಾಯತಿ ಪ್ರಭಾರಿ ನೀಡುತ್ತಿರುವುದರಿಂದ ಎಲ್ಲಾ ಪಂಚಾಯತ್ಗೆ ಬೇಟಿ ನೀಡಿ ಜನರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲು ಸಾಧ್ಯವಾಗದೆ, ಜನರ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದಿಸುವ ಸಮಯ ದೊರೆಯದಂತೆ ಆಗುತ್ತಿದೆ ಎಂದು ಮೇಲ್ನೋಟಕ್ಕೆ ಅಧಿಕಾರಿಗಳ ಮುಖದಲ್ಲಿ ಕಂಡುಬರುತ್ತಿದೆ ಎಂದು ಗ್ರಾಮೀಣ ಪ್ರದೇಶದ ಜನರು ಬೇಸರದಿಂದ ಅಭಿಪ್ರಾಯ ವ್ಯಕ್ತಪಡಿಸುತಿರುವುದು ಸತ್ಯಸಂಗತಿ.
ತಾಲೂಕಿನ ಮಳಖೇಡ(ಒಂದು ಕಾಲದಲ್ಲಿ ವೈಭವದಿಂದ ಮೆರೆದು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಂಡ ಪ್ರದೇಶ) ರಾಜ್ಯದಲ್ಲಿಯೇ ಎರಡನೇ ದೊಡ್ಡ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಾಚೀನ ಕಾಲದಲ್ಲಿ ರಾಷ್ಟ್ರಕೂಟರ ರಾಜಧಾನಿ ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ನಾಲ್ಕನೇ ಸಾಮ್ರಾಜ್ಯ, ರಾಷ್ಟ್ರಕೂಟರ ಅರಸ ಅಮೋಘ ವರ್ಷ ನೃಪತುಂಗ ಚಕ್ರವರ್ತಿಯ ಅವಧಿಯಲ್ಲಿ ಕಲೆ, ಸಂಸ್ಕøತಿ, ಸಾಹಿತ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿರುವ ಕಾಲವಾಗಿತ್ತು. ಕನ್ನಡದ ಮೊಟ್ಟಮೊದಲ ಉಪಲಬ್ಧ ಕೃತಿ ಹುಟ್ಟಿದಂತಹ ಪುಣ್ಯದ ನೆಲವಿರುವ ಕ್ಷೇತ್ರ, ಆದರೆ ಇಲ್ಲಿನ ಚುನಾಯಿತ ಜನಪ್ರತಿನಿಧಿಗಳು ದಿಟ್ಟ ಹೆಜ್ಜೆ ಇಟ್ಟರು, ಮತ್ತೆ ತಕ್ಷಣ ಹಿಂದಕ್ಕೆ ಸರಿಯುವಂತವರೆ ಹೆಚ್ಚಾಗಿದ್ದಾರೆ ಎಂದರೆ ತಪ್ಪೇನಿಲ್ಲ,

ದೇಶದ ನಂಬರ್ ಒನ್ ಅಲ್ಟ್ರಾಟೆಕ್ ಸಿಮೆಂಟ್ ಸಿಮೆಂಟ್ ಕಂಪನಿ (ರಾಜಶ್ರೀ ಘಟಕ1 ರಿಂದ 5 ನೇ ಘಟಕ ಸ್ಥಾಪಿಸುವುದಕ್ಕೆ ಸಂತಸ ಸುದ್ದಿ) ಆದರೆ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉದ್ಯೋಗ ದೊರೆತರು ಸಿಎಸ್‍ರ್ ಅನುದಾನದಿಂದ ಅಭಿವೃದ್ಧಿಗೆ ಮಹತ್ವ ನೀಡಿದರು ಬಾಳಿಕೆ ಬರುವಂತಹ ಕಾಮಗಾರಿಗಳು ಆಗುತ್ತಿಲ್ಲ ಎಂಬುವುದು ಇಲ್ಲಿನ ಜನರ ಅಭಿಪ್ರಾಯ.ಸರಿಯಾಗಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಕೊರತೆಯಿಂದ ಮಹಿಳೆಯರು ಇನ್ನೂ ಬಹಿರ್ದೆಸೆ ಶೌಚಾಲಯಕ್ಕೆ ತೆರಳುತ್ತಿದ್ದಾರೆ, ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿವೆ.
ಪ್ರತಿ ನಿತ್ಯ ಕಸ ವಿಲೇವಾರಿ ಆಗದೆ ಅ ಸ್ವಚ್ಛತೆಯಿಂದ ಎಲ್ಲೆಂದರಲ್ಲಿ ಗ್ರಾಮದ ರಸ್ತೆ ಬದಿಗಳಲ್ಲಿ ಕಾಣಸಿಗುತ್ತದೆ. ಕಸ ವಿಲೇವಾರಿ ಮಾಡಿದರು ಘನ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೆ ಇರುವುದರಿಂದ ರಾಜ್ಯ ಹೆದ್ದಾರಿಯ ಸೇಡಂ ರಸ್ತೆ, ಚಿತ್ತಾಪುರ ರಸ್ತೆ ಅಕ್ಕಪಕ್ಕದಲ್ಲಿ ಬಿಸಾಕಿ ಹೋಗುವ ಪರಿಸ್ಥಿತಿ ಮಳಖೇಡ ಗ್ರಾಪಂ ಇದೆ.
ಇಲ್ಲಿನ ಸರ್ಕಾರಿ ಆಸ್ಪತ್ರೆ: ಈ ಆಸ್ಪತ್ರೆಯ ಸುತ್ತಮುತ್ತ ಕಾಂಪೌಂಡ್ ಇಲ್ಲದೆ ಹಂದಿಗಳು ದನ ಕರುಗಳು ಒಳಗೆ ತಿರುಗಾಡುವುದು ಹಾಗೆ ಬರುವಂತ ರೋಗಗಳಿಗೆ ಒಳ್ಳೆಯ ವಾತಾವರಣವಿಲ್ಲದೆ ಇರುವುದು ಕಂಡುಬರುತ್ತದೆ.
ಸೇಡಂ ಕಲಬುರ್ಗಿ ರಸ್ತೆಯಲ್ಲಿರುವ ಬಾಲಕರ ಪ್ರೌಢಶಾಲೆ: ಈ ಶಾಲೆಯಲ್ಲಿ ಸುಮಾರು ವರ್ಷಗಳಿಂದೆ ಆವರಣದಲ್ಲಿ ಶಿಕ್ಷಕರಿಗೆ ಉಳಿಯಲು ನಿವೇಶನ ನಿರ್ಮಿಸಲಾಗಿದ್ದು, ಉದ್ಘಾಟನೆ ಆಗದೆ ಪಾಳು ಬಿದ್ದ ಅಪಾಟ್ಮೆರ್ಂಟ್ ಆಗಿದ್ದು, ಸ್ಥಳೀಯರು ಶೌಚಾಲಯ ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ ಎಂದರೆ ತಪ್ಪೇನಿಲ್ಲ, ಗಾಳಿ ಬೀಸಿದಾಗ ಆ ಕಟ್ಟಡದಿಂದ ದುರ್ನಾಥ ಮಕ್ಕಳು ಶಿಕ್ಷಕರು ಸೇವಿಸಿ ಅನುರೋಗಕ್ಕೆ ತುತ್ತಾಗುವ ಪರಿಸ್ಥಿತಿ ಇದ್ದು, ಗ್ರಾಪಂ ಅಧಿಕಾರಿಗಳು ಅಧ್ಯಕ್ಷರು ಸದಸ್ಯರು ಇತ್ತ ಮುಖ ಮಾಡುವುದು ತೀರ ವಿರಳ, ತಾಲೂಕ ಆಡಳಿತ ಇಲ್ಲಿನ ಸಚಿವರು ಇತ್ತ ಗಮನಹರಿಸಿ ಒಳ್ಳೆಯ ವಾತಾವರಣ ನಿರ್ಮಾಣಕ್ಕೆ ಮುಂದಾಗ ಬೇಕಿದೆ,
ತೋಟಗಾರಿಕೆ ಇಲಾಖೆ: ಬಾಲಕರು ಪ್ರೌಢಶಾಲೆ ಪಕ್ಕದಲ್ಲಿರುವ ಸೇಡಂ ಕಲಬುರ್ಗಿ ರಸ್ತೆಯ ಮಾರ್ಗದಲ್ಲಿ ತೋಟಗಾರಿಕೆ ಇಲಾಖೆಯ ಕಟ್ಟಡ ಸ್ಥಳವಿದ್ದರೂ ಸರಿಯಾಗಿ ಸದುಪಯೋಗದ ಬಾಳು ಬಿದ್ದಂತಾಗಿದೆ.
ಪ್ರವಾಸ ಮಂದಿರ: ಬಿಜನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಎದುರುಗಡೆ ಈ ಪ್ರವಾಸ ಮಂದಿರ ಇದ್ದು ಸುಮಾರು ಮೂರ್ನಾಲ್ಕು ವರ್ಷಗಳಿಂದ ಮುಳ್ಳು ಗಂಟೆಗಳಿಂದ ಅಸಹ್ಯವಾಗಿ ಭೂತ ಬಂಗಲೆಯಂತೆ ಎದುರುಗಡೆನೇ ಎದ್ದು ಕಾಣುತ್ತಿರುವ ನೋಡಬಹುದಾಗಿದ್ಧು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ವಚ್ಛ ಸುಂದರ ಪ್ರವಾಸ ಮಂದಿರ ಮಾಡಲು ಮುಂದಾಗಬೇಕಿದೆ..
ಚರಂಡಿ ತುಂಬಿದ ನೀರು: ಎಲ್ಲೊಂದರಲ್ಲಿ ಚರಂಡಿ ತುಂಬಿ ರಸ್ತೆ ಬದಿಯಲ್ಲಿ ನೀರು ಹರಿಯುತ್ತಿರುವುದರಿಂದ ಕುಡಿಯುವ ನೀರಿನ ಪೈಪಿಗೆ, ಸಾರ್ವಜನಿಕರಿಗೆ ತಿರುಗಾಡಲು ತೊಂದರೆ ಜೊತೆಗೆ ಅಸಚ್ಚತೆಯಿಂದ ಎದ್ದು ಕಾಣುತ್ತಿರುವುದು.
ರಸ್ತೆ ಅಕ್ಕ ಪಕ್ಕ ಲಾರಿಗಳು: ಜಯತೀರ್ಥ ಬೃಂದಾವನದಿಂದ, ಬಾಲಕಿಯರ ವಸತಿ ನಿಲಯದವರೆಗೆ (ರಾಜ್ಯ ಹೆದ್ದಾರಿ ಇದರು) ಸ್ಥಳೀಯ ಲಾರಿ ಮಾಲೀಕರು ರಸ್ತೆಯ ಅಕ್ಕಪಕ್ಕ ಲಾರಿಗಳು ನಿಲ್ಲಿಸುವುದರ ಮೂಲಕ ರಸ್ತೆ ಅಪಘಾತಕ್ಕೆ ಆಹ್ವಾನ ಮಾಡಿದಂತಿದೆ ಇಲ್ಲಿನ ಪರಿಸ್ಥಿತಿ, ಸ್ಥಳೀಯ ಪೆÇಲೀಸ್ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ತೆಗೆಸುವಲ್ಲಿ ವಿಫಲರಾಗಿದ್ದು ಕಂಡುಬರುತ್ತದೆ. ಕಲಬುರ್ಗಿ ಮೀಟಿಂಗ್ ಗೆ ಹಾದುಹೋಗುವ ತಾಲೂಕ ಆಡಳಿತ ಅಧಿಕಾರಿಗಳು ವಿಫಲತೆ ಎದ್ದು ತೋರುತ್ತದೆ.
ಬಾಲಕಿರ ಪ್ರೌಢಶಾಲೆ: ಸರಿಯಾದ ಮೈದಾನದ ವ್ಯವಸ್ಥೆ ಇಲ್ಲ ಸುತ್ತಮುತ್ತ ಚರಂಡಿ ತುಂಬಿ, ದುರ್ನಾಥದ ಮಧ್ಯೆ ಶಿಕ್ಷಣ ಪಡೆಯುವ ಪರಿಸ್ಥಿತಿ ಸುತ್ತಮುತ್ತಲಿ ಗ್ರಾಮದಿಂದ ಬರುವ ಬಾಲಕಿಯರು ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಪೆÇಲೀಸ್ ಠಾಣೆ: ತಗ್ಗಿನಲ್ಲಿ ಬಿದ್ದಂತಿರುವ ಬಾಸವಾಗುತ್ತಿರುವ ಪೆÇಲೀಸ್ ಠಾಣೆ ಅಪಘಾತವಾದ ವಾಹನಗಳು ಇನ್ನಿತರ ವಾಹನಗಳು ನಿಲ್ಲಿಸಲು ಸ್ಥಳವಿಲ್ಲದೆ ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲಿಸುವಂತಹ ಪರಿಸ್ಥಿತಿ ಠಾಣೆಯ ಅಧಿಕಾರಿಗಳಿಗೆ ಇದೆ.
ಗ್ರಾಮ ಲೆಕ್ಕಾಧಿಕಾರಿ ಇಲಾಖೆ: ಸರ್ಕಾರಿ ಹಳೆ ಕಚೇರಿ, ಇಲಿ, ಹೆಗ್ಗಣಗಳ ವಾಸಿಸುವ ಭೂತ ಬಂಗಲೆ ಅಂತಿರುವ ಸ್ಥಳ, ಮಳೆಗಾಲ ಬಂದರೆ ಯಮರಾಯ ಯಾವಾಗ ಬರುತ್ತಾನೋ ಎಂಬ ಆತಂಕದಲ್ಲಿ ಅಧಿಕಾರಿಗಳು ರೈತರು!
ಕೋಟೆ: ಕೋಟೆಯೊಳಗೆ ಸ್ಥಳೀಯರು ಶೌಚಾಲಯಕ್ಕೆ ಉಪಯೋಗಿಸುವ ಸ್ಥಳವಾಗಿದೆ, ಎಲ್ಲೊಂದರಲ್ಲಿ ಆ ಸ್ವಚ್ಛತೆಯಿಂದ ಕಂಡುಬರುತ್ತದೆ.
ತರಕಾರಿ ಮಾರುಕಟ್ಟೆ ಜಾನುವಾರುಗಳ ಸಂತೆ: ಪ್ರತಿ ಮಂಗಳವಾರ ಪೆÇಲೀಸ್ ಠಾಣೆ ಎದುರುಗಡೆ ತರಕಾರಿ ಮಾರುಕಟ್ಟೆ ನಡೆಯುತ್ತೆ, ಆದರೆ ಮಧ್ಯದಲ್ಲಿ ದ್ವಿಚಕ್ರ ತ್ರಿಚಕ್ರ ಫೆÇೀರ್ ವೀಲರ್ ವಾಹನಗಳು ತಿರುಗುವುದರಿಂದ ಸುತ್ತಮುತ್ತಲಿನಿಂದ ಬರುವ ವ್ಯಾಪಾರಸ್ಥರಿಗೆ ತೊಂದರೆ ಅದರಂತೆ ಜಾನುವಾರುಗಳ ಸಂತೆಯಲ್ಲಿ ಕೂಡ ವಾಹನಗಳ ತಿರುಗಾಟದಿಂದ ತೊಂದರೆ ಹೆಚ್ಚು ತಡೆಗಟ್ಟುವಂತ ಪ್ರಯತ್ನ ಎಪಿಎಂಸಿಯ ಅಧಿಕಾರಿಗಳು ಮಾಡಬೇಕಿದೆ.

ಒಟ್ಟಾರೆಯಾಗಿ ಮಳಖೇಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಳಗಳಲ್ಲಿ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಹ ಮನಸ್ಥಿತಿ ಇಲ್ಲಿನ ಪ್ರಜ್ಞಾವಂತ ಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಬಹುಬೇಗ ಒದಗಿ ಬರಲಿ, ಸ್ವಚ್ಛ ಸುಂದರವಾಗಿ ಸ್ಥಳೀಯರಿಗೆ ಹಾಗೂ ಬೇರೆಯವರಿಗೆ ಹೊರಹೊಮ್ಮಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.

ಪ್ರತ್ಯೇಕ ಮಳಕೇಡಕ್ಕೆ ಸೀಮಿತವಾದ ತ್ಯಾಜ್ಯ ವಿಲೇವಾರಿ ಘಟಕವಿಲ್ಲದೆ ಬಳಲುತ್ತಿದ್ದು ನೂತನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದಕ್ಕೆ ಪಂಚಾಯತಿ ಮುಂದಾಗ ಬೇಕಿದೆ.


ನಾನು ಕಳೆದ ಬಾರಿ ಈ ಗ್ರಾಪಂ ಸದಸ್ಯನಾಗಿದ್ದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಯಲ್ಲಿ ಇರುತ್ತಿರಲಿಲ್ಲ ಇವಾಗ ಬಂದಿರುವ ರವಿಕುಮಾರ್ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ದಿನ ನಿತ್ಯ ಪಂಚಾಯಿತಿಯಲ್ಲಿದು ಜನರ ಸಮಸ್ಯೆಗೆ ಸ್ಪಂದಿಸುವ ಮನೋಭಾವನೆ ಅಧಿಕಾರಿಗಳು ಬಂದಿರುವುದು ಸಂತಸ ತಂದಿದೆ.
ಮಲ್ಲಿಕಾರ್ಜುನ್

ಮಾಜಿ ಗ್ರಾಪಂ ಸದಸ್ಯರು ಹೂಡಾ ಬಿ.

ಹೈಸ್ಕೂಲ್ನಲ್ಲಿರುವ ಅನಗತ್ಯ ಕಟ್ಟಡವು ಡೆಮೋಲಿಸ್ ಮಾಡಿ ಅಲ್ಲೇ ಪೆÇಲೀಸ್ ಕ್ವಾಟ್ರಸ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ, ಈಗಾಗಲೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ವಿವಿಧ ಕಾಮಗಾರಿಗಳಿಗೆ ಎಸ್ಟಿಮೇಟ್ ಮಾಡಿಕೊಂಡು ಹೋಗಲಾಗಿದೆ.
ಚನ್ನಯ್ಯ ವಿ ಪುರಾಣಿಕ್
ಅಧ್ಯಕ್ಷರು

ಗ್ರಾಮ ಪಂಚಾಯತ್ ಮಳಖೇಡ

ಪಂಚಾಯತಿ ಸೇರಿದಂತೆ ಅದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಬರದ ಹಾಗೆ ಮುಂದಾಲೋಚನೆ ಮಾಡಲಾಗಿದೆ.

ರವಿ ಎಮ್ ಸಂದಾನಿ ಗ್ರಾಮೀಣ ಅಧಿಕಾರಿಗಳು ಗ್ರಾಮ ಪಂಚಾಯತ್ ಮಳಖೇಡ

ತಾಲೂಕು ಮಟ್ಟದ ಎಸಿ, ತಹಸಿಲ್ದಾರ್, ಸಿಡಿಪಿಓ, ಮತ್ತು ಸಿಪಿಐ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಕೆಳಮಟ್ಟದ ಇಲಾಖೆಗಳು ಪರಿಶೀಲಿಸಲು ಮಳಖೇಡಕ್ಕೆ ಬಂದು ಸಮಸ್ಯೆ ಅರಿತು ಪರಿಹಾರ ಕಲ್ಪಿಸಬೇಕಿದೆ.

ರಾಜಶ್ರೀ ಸಿಮೆಂಟ್ ಕಂಪನಿಯಿಂದ ಪ್ರತಿ ವರ್ಷ ಬರುವಂತಹ ತೆರಿಗೆಯಲ್ಲಿ ಮೂಲಭೂತ ಸೌಕರ್ಯಗಳ ಮುಕ್ತಾ ಪಂಚಾಯಿತಿಯ ಆಗಿ ಮಾಡಬಹುದಿತ್ತು, ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಸರಿಯಾಗಿ ಉಪಯೋಗಿಸಿದರೆ ರಾಜ್ಯದಲ್ಲಿಯೇ ಸ್ವಚ್ಛ ಸುಂದರ ಅಭಿವೃದ್ಧಿ ಹೊಂದಿದ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆ (ಮಾನ್ಯಖೆಟ್ಟ) ಮಳಖೇಡ ಗ್ರಾಪಂ ಪಡೆಯುತ್ತಿತ್ತು. ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಯ ಅಧ್ಯಕ್ಷರು ಸರಿಯಾದ ತೆರಿಗೆ ಪಡೆಯದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂದಿದೆ, ಮೂಲಭೂತ ಸೌಕರ್ಯಗಳಿಂದ ಪಂಚಾಯತಿ ಕೊರಗುತ್ತಿದೆ.

ಮಳಖೇಡ ಗ್ರಾಪಂ ಸಂಪೂರ್ಣ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 500 ಕೋಟಿ ಮೀಸಲಿಟ್ಟಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯವಿದೆ ಎನ್ನಲಾಗುತ್ತಿದೆ. ಮಾನ್ಯ ಸಚಿವರು ಇತ್ತ ಕಾಳಜಿ ವಹಿಸಬೇಕಾಗುತ್ತದೆ.