ಹೆಳವ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಿ

ತಾಳಿಕೋಟೆ:ನ.8: ಅಲೆಮಾರಿ ಹೆಳವ ಸಮುದಾಯವನ್ನು ಪರಿಶೀಷ್ಟ ಪಂಗಡ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರಿಗೆ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜದ ನೇತೃತ್ವದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಮನವಿಯನ್ನು ಸಲ್ಲಿಸಲಾಯಿತು.

ಹೆಳವ ಜನಾಂಗದವರು ತಮ್ಮ ಹೋಟ್ಟೆಪಾಡಿಗಾಗಿ ಒಕ್ಕಲು ಮನೆತನದವರ ವಂಶಾವಳಿಯನ್ನು ಹೇಳುತ್ತಾ ಊರುರು ಅಲೆದಾಡುತ್ತ ಬೀದಿ ಬಿದಿಗಳಲ್ಲಿ ಟೆಂಟ ಹಾಕಿಕೊಂಡು ಶಾಶ್ವತ ನೆಲೆ ಇಲ್ಲದೆ ತಿರುಗಾಡುತ್ತಾರೆ. ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದವರಾಗಿದ್ದು ಶಿಕ್ಷಣದಲ್ಲಿಯಂತು ತೀರಾ ಹಿಂದೂಳಿದವರಾಗಿದ್ದಾರೆ. ರಾಜ್ಯಾದ್ಯಂತ ಸಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಸಣ್ಣ ಸಮುದಾಯ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಹೆಳವ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಲು ಈಗಾಗಲೇ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಮಾನವ ಶಾಸ್ತ್ರದ ಸಹಾಯಕ ಪ್ರಾಧ್ಯಪಕರಾದ ಡಾಯಲ್ ಶ್ರೀನಿವಾಸ ಕುಲ ಶಾಸ್ತ್ರಿ ಅಧ್ಯಾಯನ ಪೂರ್ಣಗೊಂಡು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರ ಮೂಲಕ ಯೋಜನಾ ವರದಿಯನ್ನು ಸಿದ್ಧಪಡಿಸಿ 2018ರಲ್ಲಿ ಸರಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದ್ದು ಕಡತವು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಚಿವಾಲಯದಲ್ಲಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟದದಲ್ಲಿ ಅನುಮೂದನೆ ಮಾಡಿಸಿ ಕೇಂದ್ರ ಸರ್ಕಾದ ಅನುಮೋದನೆಗಾಗಿ ಶಿಫಾರಸ್ಸು ಮಾಡಲು ರಾಜ್ಯ ಸರಕಾರದ ಮೇಲೆ ಒತ್ತಡವನ್ನು ಹಾಕುವಂತೆ ಮನವಿಯನ್ನು ಸಲ್ಲಿಸಿದರು. ಮನವಿಯನ್ನು ಆಲಿಸಿದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಮುಖ್ಯಮಂತ್ರಿಗಳನ್ನು ಬೇಟಿಯಾಗಿ ತಮ್ಮ ಬೇಡಿಕೆಯನ್ನು ಶೀಘ್ರವಾಗಿ ಪರಿಶಿಲಿಸುವಂತೆ ಒತ್ತಡ ಹೇರಲಾಗುವದು ಎಂದರು.

   ಈ ಸಂದರ್ಭದಲ್ಲಿ ತಾಲೂಕು ಹೆಳವ ಸಮಾಜದ ಅಧ್ಯಕ್ಷ ಪ್ರಶಾಂತ ಹೆಳವರ, ಉಪಾಧ್ಯಕ್ಷ ಹಣಮಂತ್ರಾಯ ಕುಚಬಾಳ, ಕಾರ್ಯದರ್ಶಿ ಕಾಶಿನಾಥ ಹೆಳವರ, ಸಹ ಕಾರ್ಯದರ್ಶಿ ಶಿವಶರಣ ಹೆಳವರ, ಸಾಬಣ್ಣ ಹೆಳವರ, ಸಿದ್ದಪ್ಪ ಹೆಳವರ, ಚಂದಪ್ಪ ಹೆಳವರ ಸೇರಿದಂತೆ ಸಮಾಜದ ಮುಖಂಡರು ಇದ್ದರು.