ಹೆಲ್ಮೆಟ ಧಾರಣೆಗೆ ವಿನಾಯತಿ ನೀಡುವದಕ್ಕೆ ಮನವಿ

(ಸಂಜೆವಾಣಿ ವಾರ್ತೆ)
ವಿಜಯಪುರ :ಸೆ.5:ಜಿಲ್ಹೆಯಲ್ಲಿ ದಿನಾಂಕ 05-09-2023 ರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ ಧರಿಸುವದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧವಾಗಿ ಮಾನ್ಯರಲ್ಲಿ ನಿವೇದಿಸುವದೆನೆಂದರೆ ವಿಜಯಪುರ, ಕಲಬುರ್ಗಿ, ರಾಯಚೂರ ಹಾಗೂ ಬಳ್ಳಾರಿ ಜಿಲ್ಹೆಗಳಲ್ಲಿ ವಿಪರೀತ ಬಿಸಿಲು ಇದ್ದು ಉಷ್ಣತಾಪಮಾನವಿದ್ದು ಸರಾಸರಿ 4ನ ಡಿಗ್ರಿ ಸೆಲ್ಸಿಯಸ್ ವರೆಗೆ ಇರುವದಲ್ಲದೆ ಮುಂದೆ 45-46 ಡಿಗ್ರಿವರೆಗೆ ಹೋಗುವದರಲ್ಲಿ ಅನುಮಾನವಿಲ್ಲ.
ಇಂತಹÀ ಬಿಸಿಲಿನ ಪ್ರಖರತೆಯಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ ಧರಿಸುವದರಿಂದ ಅನೇಕ ಚರ್ಮರೋಗಗಳು ತಲೆಯಲ್ಲಿ ಹುಟ್ಟಿಕೊಂಡು ದೇಹದ ಮೇಲೆ ದುಷ್ಪರಿಣಾಮ ಬೀರುವದಲ್ಲದೆ ಕೂದಲು ಉದುರುವದು ಹಾಗೂ ತಲೆಯಲ್ಲಿ ಬೊಕ್ಕೆಗಳಾಗುತ್ತವೆ. ಕಲಬುರ್ಗಿ ಜಿಲ್ಹೆಯಲ್ಲಿ ಹೆಲ್ಮೆಟ ಧರಿಸುವದು ದ್ವಿಚಕ್ರ ವಾಹನ ಸವಾರರಿಗೆ ಐಚ್ಛಿಕವಾಗಿರುವದು. ಇದಲ್ಲದೆ ವಿಜಯಪುರ ಶಹರದಲ್ಲಿ ಇಕ್ಕಾಟ್ಟಾದ ರಸ್ತೆಗಳಿದ್ದು ಜನ ಸಂದಣಿಯಲ್ಲಿ ದ್ವಿಚಕ್ರ ವಾಹನ ಚಾಲಕರು ವೇಗದಿಂದ ವಾಹನ ಚಾಲನೆ ಮಾಡುವದು ಅಸಾಧ್ಯವಾಗಿರುದರಿಂದ ಅಪಘಾತಗಳಾಗುವದು ವಿರಳವಾಗಿದೆ. ವಿಜಯಪುರ ನಗರವು ಟ್ರಾಫಿಕ ತೊಂದರೆಯಿಂದ ಬಳಲುತ್ತಿದ್ದು ವೇಗವಾಗಿ ಹೋಗುವುದೆ ಅಸಾಧ್ಯ ಮೇಲೆ ನಮೂದಿಸಿದ ದ್ವಿಚಕ್ರ ವಾಹನ ಸವಾರರ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮ ಹಾಗೂ ಟ್ರಾಫಿಕ ಮತ್ತು ಜನಸಂದನಿಯನ್ನು ಪರಿಗಣಿಸಿ ವಿಜಯಪುರ ನಗರದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹಿಂಬದಿ ಸವಾರರರಿಗೆ ಹೆಲ್ಮೆಟ ಧರಿಸುವಿಕೆಯಿಂದ ವಿನಾಯತಿ ನೀಡಲು ಹಾಗೂ ಐಚ್ಛಿಕವಾಗಿಡಲು ವಿನಂತಿಸಿ ಮರ್ಚಂಟ್ಸ ಅಸೋಸಿಯೇಶನದ ಅಧ್ಯಕ್ಷರಾದ ಶ್ರೀ ರವೀಂದ್ರ ಎಸ್ ಬಿಜ್ಜರಗಿ ಇವರ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳಾದ ನಿಲೇಶ ಶಹಾ, ಜಯಾನಂದ ತಾಳಿಕೋಟಿ, ರಮೇಶ ನಿಡೋಣಿ, ಪ್ರವೀಣ ವಾರದ, ಮನೋಜ ಬಗಲಿ, ಮತ್ತು ಸಿದ್ಧಪ್ಪ ಸಜ್ಜನ, ಹಾಗೂ ವಿವಿಧ ವ್ಯಾಪಾರ ಸಂಘಟನೆಗಳ ಪದಾಧಿಕಾರಿಗಳಾದ ಸಂಗಪ್ಪ ಹೇರಲಗಿ, ಪಪ್ಪುಸೇಠ, ಅಮುಲ ತೋಶನಿವಾಲ, ಗೋಕುಲ ಮಹೀಂದ್ರಕರ, ಬಾಪೂಜಿ ನಿಕ್ಕಂ, ಲಾಲುಸೇಠ, ಕುಮಾರ ಹಕ್ಕಾಪಕ್ಕಿ, ರವೀಂದ್ರ ಕುಲಕರ್ಣಿ ಮತ್ತು ಅಕ್ರಂ ಮಾಶಾಳಕರ, ಇವರು ಉಪಸ್ಥಿತರಿದ್ದರು.