ಹೆಲ್ಮೆಟ್ ಧರಿಸಿದ ಸಾರಿಗೆ ಚಾಲಕರು…!

ಬಾದಾಮಿ,ಏ19: ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯ ಬಸ್ ಮೇಲಿನ ಕಲ್ಲು ತೂರಾಟ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ರಕ್ಷಣೆಗಾಗಿ ಸಾರಿಗೆ ಇಲಾಖೆಯ ಬಸ್ ಚಾಲಕರಿಗೂ ಸಹಿತ ಹೆಲ್ಮೆಟ್ ಹಾಕಿ ಬಸ್ ಚಲಾವಣೆ ಮಾಡುತ್ತ್ತಿದ್ದಾರೆ.
ಕಲ್ಲು ತೂರಾಟ ಪ್ರಕರಣದ ಬೆನ್ನ ಹಿಂದೆಯೇ ಹೆಲ್ಮೆಟ್ ಧರಿಸಿಯೇ ಬಸ್ ಚಲಾಯಿಸಲು ಸರ್ಕಾರಿ ಸಾರಿಗೆ ಬಸ್ ಚಾಲಕರು ಮುಂದಾಗಿದ್ದಾರೆ.ಜಿಲ್ಲೆಯ ಜಮಖಂಡಿ ಘಟಕದ ಚಾಲಕ ಎನ್.ಎಂ.ಅವಟಿ ಬಸ್ ಮೇಲೆ ಕಲ್ಲು ತೂರಾಟದಿಂದ ಸಾವನ್ನಪ್ಪಿದ್ದು, ಇದು ಚಾಲಕರ ಆತಂಕದ ಕಾರಣ ಹೆಲ್ಮೇಟ್ ಧರಿಸುತ್ತಿದ್ದಾರೆ. ನಿನ್ನೆಯೂ ಸಹ ಬಸ್ ವೊಂದರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ರವಿವಾರ ಬಾದಾಮಿಯಲ್ಲಿ ತಲೆಯ ಮೇಲೆ ಹೆಲ್ಮೆಟ್ ಹಾಕಿ ಚಾಲಕರು ಬಸ್ ಚಲಾಯಿಸಿದರು. ರವಿವಾರ ಒಂದು ಸರಕಾರಿ ಬಸ್ ಬಾದಾಮಿಯಿಂದ ಕೆರೂರಗೆ ತೆರಳಿತು. ಅತ್ತ ಹೆಲ್ಮೆಟ್ ಹಾಕಿದ ಚಾಲಕ ಇತ್ತ ಬಸ್ ನಲ್ಲಿ ರಕ್ಷಣೆಗಾಗಿ ಓರ್ವ ಪೆÇೀಲಿಸ್ ಸಿಬ್ಬಂದಿ ನೇಮಕ ಮಾಡಲಾಗಿದೆ.