ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ದಂಡದ ಬಿಸಿ

ಚಾಮರಾಜನಗರ, ನ.20- ಸಂಚಾರ ನಿಯಮಗಳನ್ನು ಪಾಲಿಸಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸಾಕಷ್ಟು ಜಾಗೃತಿ ಮೂಡಿಸಿದ್ದಾಗಿಯೂ ಸಹ ಅದನ್ನು ಪಾಲಿಸದ ವಾಹನ ಸವಾರರಿಗೆ ಪೆÇಲೀಸರು ಪಟ್ಟಣದಲ್ಲಿ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ನಗರದ ಜನನಿಬಿಡ ಪ್ರದೇಶವಾದ ದೊಡ್ಡಂಗಡಿ ಬೀದಿ,ಚಿಕ್ಕಂಗಡಿ ಬೀದಿ, ಹಾಗೂ ನಗರಸಭೆ ಕಚೇರಿ ವೃತ್ತದಲ್ಲಿ ಪಟ್ಟಣ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ಎಂ.ಸಿದ್ದರಾಜನಾಯಕ ಅವರ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನದವರೆಗೆ 25 ಜನರಿಗೆ ತಲಾ 500 ರೂ.ನಂತೆ 12,500 ರೂ. ದಂಡ ವಿಧಿಸಿದ್ದಾರೆ.
ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಿದ್ದರಾಜನಾಯಕ ಅವರು ಹೆಲ್ಮೆಟ್ ಜಾಗೃತಿ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆಯೂ ಸಹ ಅರಿವು ಮೂಡಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಮುಖ್ಯ ಪೇದೆ ಶಂಕರ್, ಪೇದೆ ರಾಜು ಇದ್ದರು.