
ಸಂಜೆವಾಣಿ ವಾರ್ತೆ
ಮಂಡ್ಯ: ಜು.09:- ಸಂಚಾರ ನಿಯಮ ಪಾಲಿಸದ ವಾಹನ ಸವಾರರಿಗೆ ದಂಡ ಹಾಕುತ್ತಿರುವುದಕ್ಕೆ ಅಡ್ಡಿಪಡಿಸಿ ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆಗೆ ಮುಂದಾದ ಯುವಕರಿಗೆ ಪೆÇಲೀಸರು ಲಾಠಿ ರುಚಿ ತೋರಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಬಿ.ಜಿ. ದಾಸೇಗೌಡ ವೃತ್ತ (ಮೈ ಶುಗರ್ ವೃತ)ದಲ್ಲಿ ಯುವಕರು ಸಂಚಾರಿ ಪೆÇಲೀಸರನ್ನು ಪ್ರಶ್ನಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಇದರಿಂದ ಅಸಮಾಧಾನಗೊಂಡ ಪೆÇಲೀಸರು ಲಾಠಿ ಬಿಸಿ ಯುವಕರನ್ನು ಚದುರಿಸಿದ್ದಾರೆ.
ಸಂಚಾರಿ ಪೆÇಲೀಸರು ಶನಿವಾರ ಮಧ್ಯಾಹ್ನ ಮೈಶುಗರ್ ವೃತದಲ್ಲಿ ವಾಹನಗಳ ತಪಾಸಣೆ ನಡೆಸಿ, ಹೆಲ್ಮೆಟ್ ಧರಿಸದ ವಾಹನ ಸವಾರರನ್ನು ತಡೆದು ದಂಡ ಹಾಕುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಯುವಕರನ್ನು ತಡೆದು ಪ್ರಶ್ನಿಸಿದಾಗ ರಂಪಾಟ ನಡೆದಿದ್ದು, ಇಲ್ಲಿ ಸವಾರರಿಗೆ ಏಕೆ ದಂಡ ಹಾಕುತ್ತಿದ್ದೀರಿ. ಎಲ್ಲೆಂದರಲ್ಲಿ ಬೈಕ್‍ಗಳನ್ನು ತಡೆದು ತೊಂದರೆ ಮಾಡುತ್ತಿದ್ದೀರಿ ಎಂದು ಪೆÇಲೀಸರನ್ನು ಪ್ರಶ್ನಿಸಿದ್ದಾರೆ.
ಇದೇ ವೇಳೆ ಪೆÇಲೀಸರ ಕಾರ್ಯವೈಖರಿ ವಿರುದ್ಧ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಪ್ರತಿಭಟನೆಗೆ ಮುಂದಾಗಿ ಘೋಷಣೆಗಳನ್ನ ಕೂಗಿದ್ದಾರೆ. ಜನರ ಗುಂಪು ಹೆಚ್ಚಾಗಿ ಸ್ಥಳದಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬಗ್ಗೆ ಸಂಚಾರಿ ಪೆÇಲೀಸರು ಹಿರಿಯ ಪೆÇಲೀಸ್ ಅಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಿದ್ದು, ಹೆಚ್ಚಿನ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಹೆದ್ದಾರಿಯಲ್ಲಿ ವಾಹನ ತಡೆದಿದ್ದ ಯುವಕರ ಗುಂಪಿಗೆ ಲಾಠಿ ರುಚಿ ತೋರಿಸಿ ಚದುರುಸಿದ್ದಾರೆ.