ಹೆಲೆನ್ ಎಂಬ ಕ್ಯಾಬರೆ ಕ್ವೀನ್ ಬರ್ತ್ ಡೇ

ಐವತ್ತರಿಂದ ಎಪ್ಪತ್ತರ ದಶಕದ ತನಕ ಹಿಂದಿ ಸಿನಿಮಾದಲ್ಲಿ ಬಹಳಷ್ಟು ಧಮಾಕಾ ಹುಟ್ಟಿಸಿದ ಕ್ಯಾಬರೆ ಕ್ವೀನ್ ಹೆಲೆನ್ ಗೆ ನವಂಬರ್ ೨೧ಕ್ಕೆ ೮೨ ತುಂಬಿತು. ಹಿಂದಿ ಸಿನಿಮಾದಲ್ಲಿ ಎಲ್ಲಕ್ಕಿಂತ ಜನಪ್ರಿಯ ಕ್ಯಾಬರೆ ಕ್ವೀನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಹೆಲೆನ್ ರ. ಡ್ಯಾನ್ಸ್ ಗೆ ಪ್ರೇಕ್ಷಕರು ಮಾತ್ರವಲ್ಲ ಪ್ರಖ್ಯಾತ ಲೇಖಕ ಸಲೀಂ ಖಾನ್ ಕೂಡ ಬೋಲ್ಡ್ ಆಗಿದ್ದರು. ತಾನು ವಿವಾಹವಾಗಿದ್ದರೂ ಕೂಡಾ ತಲಾಖ್ ನೀಡದೆ ಸಲೀಂ ಖಾನ್ ಹೆಲೆನ್ ರನ್ನು ಮದುವೆಯಾದರು.


ಸಲೀಂ ಖಾನ್ ಐದು ವರ್ಷದ ತನಕ ಸುಶೀಲಾ ಚರಕ್ ಎಂಬವಳನ್ನು ಪ್ರೀತಿ ಮಾಡುತ್ತಾ ಕೊನೆಗೆ ೧೯೬೪ ರಲ್ಲಿ ವಿವಾಹವಾದರು. ವಿವಾಹದ ನಂತರ ಸುಶೀಲಾ ಚರಕ್ ತನ್ನ ಹೆಸರನ್ನು ಬದಲಿಸಿ ಸಲ್ಮಾ ಖಾನ್ ಇರಿಸಿದ್ದರು. ಸಲೀಂ ಖಾನ್ ಮತ್ತು ಸಲ್ಮಾ ಖಾನ್ ಗೆ ಮೂವರು ಮಕ್ಕಳು. ಸಲ್ಮಾನ್, ಅರ್ಬಾಜ್, ಮತ್ತು ಸೊಹೇಲ್. ಮತ್ತೊಬ್ಬಳು ಮಗಳು ಅಲವಿರಾ.
ಹಾಗಿದ್ದೂ ಹೆಲೆನ್ ರ ಪ್ರೀತಿಯಲ್ಲಿ ಸಲೀಂ ಖಾನ್ ಬಂಧಿಯಾಗಿದ್ದರು. ನಂತರ ಇಬ್ಬರೂ ೧೯೮೦ ರಲ್ಲಿ ವಿವಾಹವಾದರು. ವಿವಾಹದ ನಂತರ ಖಾನ್ ಪರಿವಾರದಲ್ಲಿ ಒಂದಿಷ್ಟು ವಿವಾದಗಳು ಕಾಣಿಸಿತ್ತು. ಸಲ್ಮಾನ್ ಸಹಿತ ಮೂವರು ಸಹೋದರರೂ ಹೆಲೆನ್ ರ ವಿರುದ್ಧ ನಿಂತರು.ಮೊದಲ ಪತ್ನಿ ಸಲ್ಮಾ ಖಾನ್ ಕೂಡ ಈ ವಿವಾಹದಿಂದ ದುಖಿತರಾಗಿದ್ದರು. ಆಕೆ ಈ ವಿವಾಹದಿಂದ ಡಿಪ್ರೆಶನ್ ಗೆ ಹೋಗಿದ್ದರು. ಮೂವರು ಮಕ್ಕಳೂ ಹೆಲೆನ್ ಜೊತೆಗೆ ಮಾತಾಡುತ್ತಿ ರಲಿಲ್ಲ.
ಕ್ರಮೇಣ ಹೆಲೆನ್ ವಿಷಯದಲ್ಲಿ ಮೂವರು ಮಕ್ಕಳು ಹಾಗೂ ಮೊದಲ ಪತ್ನಿ ಸಲ್ಮಾ ಕೂಡ ಬದಲಾದರು. ಹೆಲೆನ್ ರನ್ನು ತಾವು ತಿಳಿದಷ್ಟು ಕೆಟ್ಟವಳಲ್ಲ ಎಂದು ತಿಳಿದರು. ನಂತರ ಹೆಲೆನ್ ರನ್ನು ಕುಟುಂಬದ ಸದಸ್ಯರಾಗಿ ಸ್ವೀಕರಿಸಿ ಇಡೀ ಪರಿವಾರ ಏಕತೆಯನ್ನು ಕಾಣಿಸಿದರು. ಹಬ್ಬ ಸಮಾರಂಭಗಳನ್ನು ಜೊತೆಯಾಗಿ ಆಚರಿಸಿದರು. ಹೆಲೆನ್ ರ ಕಷ್ಟದ ದಿನಗಳಲ್ಲಿ ಸಲೀಂ ಖಾನ್ ಸಹಾಯ ಮಾಡಿದ್ದರು.


ವಿವಾಹದ ನಂತರ ಹೆಲೆನ್ ಮತ್ತು ಸಲೀಂ ಖಾನ್ ಅವರಿಗೆ ಮಕ್ಕಳಾಗಲಿಲ್ಲ. ಹಾಗಾಗಿ ಅರ್ಪಿತಾಳನ್ನು ದತ್ತು ಪಡೆದರು. ಮೂವರು ಮಕ್ಕಳು ಸಹ ಅರ್ಪಿತಾಳನ್ನು ಪ್ರೀತಿಯಿಂದ ನೋಡಿಕೊಂಡರು. ಸಲ್ಮಾನ್ ಖಾನ್ ತಂಗಿಯನ್ನು ಬಹಳಷ್ಟು ಹಚ್ಚಿಕೊಂಡಿದ್ದ.
೮ ನವೆಂಬರ್ ೨೦೧೪ ರಂದು ಅರ್ಪಿತಾ ಆಯುಷ್ ಶರ್ಮನನ್ನು ಹೈದರಾಬಾದಿನ ಹೋಟೆಲ್ ಫಲಕನುಮಾ ಪ್ಯಾಲೇಸ್ನಲ್ಲಿ ವಿವಾಹವಾದಳು.
ಮಾರ್ಚ್ ೨೦೧೬ರಲ್ಲಿ ಪುತ್ರ ಆಹಿಲ್ ಗೆ ಜನ್ಮ ನೀಡಿದರೆ,೨೦೧೯ ರಲ್ಲಿ ಮಗಳು ಆಯತಾಳಿಗೆ ಜನ್ಮ ನೀಡಿದ್ದಳು. ಈ ಅರ್ಪಿತಾ ಒಂದೊಮ್ಮೆ ಅರ್ಜುನ್ ಕಪೂರ್ ಜೊತೆಗೂ ಸುದ್ದಿ ಮಾಡಿದ್ದಳು.