ಹೆಲಿಕಾಪ್ಟರ್ ಪತನ: ಇರಾನ್ ಅಧ್ಯಕ್ಷ ರೈಸಿ ಸಾವು

ತೆಹ್ರಾನ್ (ಇರಾನ್), ಮೇ ೧೭- ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶ ಸಚಿವ ಹುಸೇನ್ ಅಮೀರಬ್ದೊಲ್ಲಾಹಿಯಾನ್ ಅವರು ವಾಯುವ್ಯ ಇರಾನ್‌ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ ಸರ್ಕಾರಿ ಮಾಧ್ಯಮ ಸೇರಿದಂತೆ ೯ ಮಂದಿ ಅಧಿಕಾರಿಗಳು ವರದಿ ಮಾಡಿದೆ. ಅಜರ್‌ಬೈಜಾನ್‌ನ ಗಡಿಯಿಂದ ಹಿಂದಿರುಗಿದ ನಂತರ ಅಧ್ಯಕ್ಷ ರೈಸಿ ತಬ್ರಿಜ್ ಅವರು ಹುಸೇನ್ ಜೊತೆ ನಗರಕ್ಕೆ ತೆರಳುತ್ತಿದ್ದಾಗ ಹಾರ್ಡ್ ಲ್ಯಾಂಡಿಂಗ್ ಸಂಭವಿಸಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಮಾಧ್ಯಮ ಹೇಳಿದೆ.ಹೆಲಿಕಾಪ್ಟರ್‌ನಲ್ಲಿ ತಬ್ರಿಜ್ ನಗರದಲ್ಲಿ ಶುಕ್ರವಾರದ ಪ್ರಾರ್ಥನೆಯ ಇಮಾಮ್ ಅಯತೊಲ್ಲಾ ಮೊಹಮ್ಮದ್ ಅಲಿ ಅಲ್-ಎ ಹಶೆಮ್ ಮತ್ತು ಇರಾನಿನ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಜನರಲ್ ಮಾಲೆಕ್ ರಹಮತಿ ಕೂಡ ಇದ್ದರು ಎನ್ನಲಾಗಿದೆ. ಹೆಲಿಕಾಪ್ಟರ್ ದಟ್ಟ ಮಂಜಿನಿಂದಾವೃತವಾದ ಪರ್ವತ ಪ್ರದೇಶವೊಂದರ ಮೇಲೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.“ಹೆಲಿಕಾಪ್ಟರ್ ಪತ್ತೆಯಾದರೂ ಅದರಲ್ಲಿದ್ದ ಪ್ರಯಾಣಿಕರು ಜೀವಂತವಾಗಿರುವ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ,” ಎಂದು ಇರಾನ್ ಟಿವಿ ಆರಂಭದಲ್ಲಿ ವರದಿ ಮಾಡಿತ್ತು. ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಇರಾನ್‌ನ ತಬ್ರೀಝ್ ನಗರದಲ್ಲಿ ಆಝರ್‌ಬೈಜಾನ್ ನ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆಗೂಡಿ ಖಿಝ್ ಖಲಾಸಿ ಅಣೆಕಟ್ಟನ್ನು ಎರಡೂ ದೇಶಗಳು ಹಂಚಿರುವ ಗಡಿ ಸ್ಥಳದಲ್ಲಿ ಉದ್ಘಾಟಿಸಿ ವಾಪಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ.ಹೆಲಿಕಾಪ್ಟರ್ ಪತನಗೊಂಡ ಸ್ಥಳದ ವೀಡಿಯೋ ಫುಟೇಜ್ ಕೂಡ ಲಭ್ಯವಾಗಿದೆ. ಹೆಲಿಕಾಫ್ಟರ್ ನಲ್ಲಿ ಅಧ್ಯಕ್ಷ ರಯೀಸಿ, ವಿದೇಶ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿ ಮತ್ತು ಇತರ ಅಧಿಕಾರಿಗಳಿದ್ದರು. ಹಾರಾಟ ಆರಂಭಿಸಿದ ಸುಮಾರು ೩೦ ನಿಮಿಷಗಳಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತ್ತು.ಆರಂಭಿಕ ವರದಿಗಳ ಪ್ರಕಾರ ಇದೊಂದು ಅಪಘಾತವೆಂದು ಇರಾನ್ ಸ್ಟೇಟ್ ಮಾದ್ಯಮ ವರದಿ ಮಾಡಿದೆ. ಅಧ್ಯಕ್ಷರ ತಂಡದಲ್ಲಿದ್ದ ಇಬ್ಬರು ರಕ್ಷಣಾ ತಂಡವನ್ನು ಸಂಪರ್ಕಿಸಿದ್ದರು ಎಂದ ಎಕ್ಸಿಕ್ಯುಟಿವ್ ಅಫೇರ್ಸ್ ಉಪಾಧ್ಯಕ್ಷ ಮುಹ್ಸಿನ್ ಮನ್ಸೂರಿ ಹೇಳಿದ್ದಾರೆ.ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂಬ ಸುದ್ದಿಗಳ ಬೆನ್ನಲ್ಲಿ ೬೦ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕಠಿಣ ಹವಾಮಾನ ಪರಿಸ್ಥಿತಿಗಳ ನಡುವೆ ಶೋಧ ನಡೆಸಿದ್ದವು.ಇರಾನ್‌ನ ಸುದ್ದಿ ಸಂಸ್ಥೆ ಐಆರ್‌ಎನ್ ಎ ಅಧ್ಯಕ್ಷರ ಪತನಗೊಂಡ ಹೆಲಿಕಾಪ್ಟರ್ ಫುಟೇಜ್ ಬಿಡುಗಡೆಗೊಳಿಸಿದೆ.ಹೆಲಿಕಾಪ್ಟರ್‌ನ ಸಂಪೂರ್ಣ ಕ್ಯಾಬಿನ್ ಸುಟ್ಟು ಹೋಗಿದೆ. ಕೆಲ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿವೆ ಎಂದು ವರದಿಯಾಗಿದೆ. ಇನ್ನು ರೈಸಿಯವರು ಹೋಗುತ್ತಿದ್ದ ವಿಮಾನ ಅಪಘಾತವಾಗಿದೆ ಎಂಬ ಸುದ್ದಿ ಕೇಳಿ ಸಾವಿರಾರು ಸಂಖ್ಯೆಯ ಅವರ ಬೆಂಬಲಿಗರು ತೆಹ್ರಾನ್‌ನಲ್ಲಿ ಅವರ ಫೊಟೋ ಹಿಡಿದು ಪ್ರಾರ್ಥನೆ ನಡೆಸಿದ್ದರು.

ಮೋದಿ ಸಂತಾಪ
ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾg.
ಇರಾನ್‌ನ “ದುಃಖದ ಸಮಯದಲ್ಲಿ” ಭಾರತ ಜೊತೆಗೆ ನಿಲ್ಲಲಿದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಡಾ. ಸೆಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾದದ್ದು ಎಂದಿದ್ದಾರೆ.
ಇಬ್ರಾಹಿಂ ರೈಸಿ ಕುಟುಂಬ ಮತ್ತು ಇರಾನ್ ಜನತೆಗೆ ಹೃತ್ಪೂರ್ವಕ ಸಂತಾಪ. ಈ ದುಃಖದ ಸಮಯದಲ್ಲಿ ಭಾರತ ಇರಾನ್‌ನೊಂದಿಗೆ ನಿಂತಿದೆ” ಎಂದು ಹೇಳಿದ್ದಾರೆ.
ಭಾರತ ಮೇ ೧೩ ರಂದು ಮಧ್ಯ ಏಷ್ಯಾದೊಂದಿಗೆ ವ್ಯಾಪಾರವನ್ನು ವಿಸ್ತರಿಸಲು ಸಹಾಯ ಮಾಡುವ ಆಯಕಟ್ಟಿನ ಇರಾನಿನ ಚಾಬಹಾರ್ ಬಂದರನ್ನು ನಿರ್ವಹಿಸಲು ೧೦ ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.
ಜೈಶಂಕರ್ ಸಂತಾಪ
ಇರಾನ್ ಅಧ್ಯಕ್ಷ ಮತ್ತು ವಿದೇಶಾಂಗ ಸಚಿವರ ದುರಂತ ಸಾವಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಂತಾಪ ಸೂಚಿಸಿ ಮತ್ತು ಅವರೊಂದಿಗಿನ ಭೇಟಿ ನೆನಪಿಸಿಕೊಂಡರು.
“ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್‌ನ ಅಧ್ಯಕ್ಷ ಡಾ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹೆಚ್. ಅಮೀರ್-ಅಬ್ದುಲ್ಲಾಹಿಯಾನ್ ಅವರ ನಿಧನದ ಬಗ್ಗೆ ಕೇಳಿ ತೀವ್ರ ಆಘಾತವಾಗಿದೆ. ಇತ್ತೀಚೆಗೆ ಜನವರಿ ಅವರೊಂದಿಗೆ ನನ್ನ ಅನೇಕ ಸಭೆಗ ನಡೆಸಿದ್ದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.