ಹೆಲಿಕಾಪ್ಟರ್ ಪತನ:ಕೀನ್ಯಾ ರಕ್ಷಣಾ ಪಡೆ ಮುಖ್ಯಸ್ಥ ಸೇರಿ ೧೦ ಮಂದಿ ಸಾವು

ನೈರೋಬಿಯಾ,ಏ.೧೯:ಕೀನ್ಯಾದಲ್ಲಿ ಹೆಲಿಕಾಪ್ಟರ್ ಪತನಗೊಂಡು ರಕ್ಷಣಾ ಮುಖ್ಯಸ್ಥ ಸೇರಿದಂತೆ ೧೦ ಮಂದಿ ಸೇನಾ ಉನ್ನತಾಧಿಕಾರಿಗಳು ಮೃತಪಟ್ಟಿದ್ದಾರೆ. ಈ ಕುರಿತು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಮಾಹಿತಿ ನೀಡಿದ್ದಾರೆ.
ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಎಂದು ಕೀನ್ಯಾ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಓಮೊಂಡಿ ಒಗೊಲ್ಲ ಅವರ ನಿಧನವನ್ನು ಘೋಷಿಸಲು ನಾನು ತೀವ್ರ ದುಃಖಿತನಾಗಿದ್ದಾನೆ ಎಂದು ರುಟೊ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ನೈರೋಬಿಯಿಂದ ೪೦೦ ಕಿ.ಮೀ ದೂರದಲ್ಲಿರುವ ಎಲ್ಜಿಯೊ ಮರಕ್ವೆಟ್ ಕೌಂಟಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ಭೀಕರ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ತನಿಖಾ ತಂಡ ರವಾನಿಸಲಾಗಿದ್ದು, ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ.
ಹೆಲಿಕಾಪ್ಟರ್ ಮೇಲಕ್ಕಾರಿದ ಕೆಲ ಸಮಯದ ಬಳಿಕ ರಾಜಧಾನಿ ನೈರೋಬಿಯಾ ವಾಯುವ್ಯ ದಿಕ್ಕಿನ ೪೦೦ ಕಿ.ಮೀ ದೂರದಲ್ಲಿ ಹೆಲಿಕಾಪ್ಟರ್ ಪತನವಾಗಿದೆ.
ಒಗಲ್ಲ ಅವರು ವಾಯುಪಡೆಯ ಕಮಾಂಡರ್ ಮತ್ತು ರಕ್ಷಣಾ ಪಡೆಗಳ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕೀನ್ಯಾ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.