’ಹೆಲನ್’ ರಿಮೇಕ್ ಗಾಗಿ ಕಠಿಣ ಪರಿಶ್ರಮ ಪಡುತ್ತಿರುವ ಜಾನ್ಹವಿ ಕಪೂರ್, ಹಲವು ಮಲಯಾಳಂ ಫಿಲ್ಮ್ ಗಳ ಹಿಂದಿ ರಿಮೇಕ್ ಗೆ ಸಿದ್ಧತೆ

ರೂಹೀ ಅಫ್ಜಾ ನಂತರ ಜಾನ್ಹವಿ ಕಪೂರ್ ಶೀಘ್ರವೇ ಹೆಲನ್ ಫಿಲ್ಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೆಲನ್ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಮಲಯಾಳಂ ಫಿಲ್ಮ್ ಆಗಿದೆ. ಇದರಲ್ಲಿ ಓರ್ವ ನರ್ಸ್ ಳ ಕಥೆಯನ್ನು ಕಾಣಬಹುದು.


ಫಿಲ್ಮ್ ನಲ್ಲಿ ಜಾನ್ಹವಿ ಕಪೂರ್ ಓರ್ವ ಮಿಡ್ಲ್ ಕ್ಲಾಸ್ ವರ್ಕಿಂಗ್ ಗರ್ಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈ ಫಿಲ್ಮನ್ನು ಜಾನ್ಹವಿ ಕಪೂರ್ ಅವರ ತಂದೆ ಬೋನಿಕಪೂರ್ ನಿರ್ಮಿಸಲಿದ್ದಾರೆ. ಬೋನಿಯವರು ಮಗಳು ಜಾನ್ಹವಿ ಗೆ ಈ ಫಿಲ್ಮ್ ಗಾಗಿ ಕಠಿಣ ಪರಿಶ್ರಮ ಪಡುವಂತೆ ಸೂಚಿಸಿದ್ದಾರೆ. “ನಿನ್ನ ಅಭಿನಯ ನಕಲಿ ಎಂದು ಕಂಡುಬಂದರೆ ಆಡಿಯನ್ಸ್ ಫಿಲ್ಮ್ ನ್ನು ರಿಜೆಕ್ಟ್ ಮಾಡುವರು” ಎಂದಿದ್ದಾರಂತೆ. ಹೆಲನ್ ಹೊರತಾಗಿ ಬಾಲಿವುಡ್ ನಲ್ಲಿ ಇನ್ನೂ ಕೆಲವು ಮಲಯಾಳಂ ಫಿಲ್ಮ್ ಗಳ ರಿಮೇಕ್ ಕಂಡುಬರಲಿದೆ.


ಜಾನ್ ಅಬ್ರಾಹಮ್ ಶೀಘ್ರವೇ ಮಲಯಾಳಂ ಫಿಲ್ಮ್ ಅಯಪ್ಪನ್ ಕೋಶಿಯುಮ್ ರಿಮೇಕ್ ನಲ್ಲಿ ಬರಲಿದ್ದಾರೆ.ಇದು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮತ್ತು ಹವಲ್ದಾರ್ ರ ಕತೆಯ ಆಧಾರಿತವಾಗಿದೆ.ಅದೇ ರೀತಿ ಅಂಜಾಮ್ ಪಾಥಿರಾ ಫಿಲ್ಮ್ ಕೂಡಾ ಬಾಲಿವುಡ್ ನಲ್ಲಿ ರಿಮೇಕ್ ಮೂಡಿ ಬರಲಿದೆ.
ಮಿರ್ಜಾಪುರ್ ನಟ ವಿಕ್ರಾಂತ್ ಮೆಸ್ಸೀ ಶೀಘ್ರವೇ ಮಲಯಾಳಂ ಫಿಲ್ಮ್ ಫಾರೆನ್ಸಿಕ್ ನಲ್ಲಿ ಕಾಣಿಸಲಿದ್ದಾರೆ.


೨೦೧೯ ರಲ್ಲಿ ರಿಲೀಸ್ ಆದ ಮಲಯಾಳಂ ಭಾಷೆಯ ಫಿಲ್ಮ್ ಇಶ್ಕ್ ನ ಹಿಂದಿ ರಿಮೇಕ್ ಫಿಲ್ಮ್ ಬರಲಿದೆ. ಈ ಫಿಲ್ಮ್ ನಲ್ಲಿ ಲೀಡ್ ರೋಲ್ ಗೆ ಅಮೀರ್ ಖಾನ್ ರ ಮಗ ಜುನೈದ್ ಕೂಡಾ ಅಡಿಶನ್ ನೀಡಿದ್ದರು.ಆದರೆ ರಿಜೆಕ್ಟ್ ಆಯ್ತು. ಅಜಯ್ ದೇವಗಣ್ ಮತ್ತು ಟಬ್ಬೂ ದೃಶ್ಯಂ ೨ ರ ಹಿಂದಿ ರಿಮೇಕ್ ನಲ್ಲಿ ಕಾಣಿಸಲಿದ್ದಾರೆ. ಒರಿಜಿನಲ್ ಫಿಲ್ಮ್ ನಲ್ಲಿ ಮೋಹನ್ ಲಾಲ್ ಲೀಡ್ ರೋಲ್ ನಲ್ಲಿ ಕಾಣಿಸಿದ್ದರು.

ಬಾಲಿವುಡ್ ನ ಮೊದಲ ಕೊರೊನಾ ಪಾಸಿಟಿವ್ ಕನಿಕಾ ಕಪೂರ್ ಹೇಳುತ್ತಾರೆ- “ಜನ ಸತ್ಯ ಏನೆಂದು ಅರಿಯದೆ ಏನಾದರೂ ಹೇಳಿ ಬಿಡುತ್ತಾರೆ ಅನ್ನೋದೇ ಬೇಸರ”

ಬಾಲಿವುಡ್ ಸಿಂಗರ್ ಕನಿಕಾ ಕಪೂರ್ ಕೊರೊನಾ ವೈರಸ್ ನ ಪಾಸಿಟಿವ್ ಆಗಿದ್ದ ಮೊದಲ ಬಾಲಿವುಡ್ ಸೆಲೆಬ್ರಿಟಿ.
ಕಳೆದ ವರ್ಷ ೨೦೨೦ ರ ಮಾರ್ಚ್ ತಿಂಗಳಲ್ಲಿ ಅವರು ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ರಿಪೋರ್ಟ್ ಬಂದಿತ್ತು.
ಆವಾಗ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕನಿಕಾ ಕಪೂರ್ ಗೆ ಸಾಕಷ್ಟು ಕಿರಿಕಿರಿ ಉಂಟಾಗುವಂತೆ ಪ್ರತಿಕ್ರಿಯೆಗಳು ಬಂದಿತ್ತು .ಈಗ ಒಂದು ಸಂದರ್ಶನದಲ್ಲಿ ಕಳೆದ ವರ್ಷದ ತನ್ನ ಕೆಟ್ಟ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
“ಅದು ಬಹಳ ಕಷ್ಟದ ದಿನಗಳಾಗಿತ್ತು. ಜನ ಸತ್ಯಾಸತ್ಯತೆ ಅರಿಯದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಏನೇನೋ ನನ್ನ ಬಗ್ಗೆ ಹೇಳುತ್ತಿದ್ದರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕನಿಕಾ ಕಪೂರ್ ಗೆ ಕೋವಿಡ್ ಪಾಸಿಟಿವ್ ಆಗಿರುವ ಮಾತು ಮುಂದೆ ಬಂದಿತ್ತು. ಹಾಗೂ ಆಕೆ ಭಾಗವಹಿಸಿದ ಹೈಪ್ರೊಫೈಲ್ ಪಾರ್ಟಿಗಳ ಸುದ್ದಿಗಳು ಮತ್ತೆ ಚರ್ಚೆಯಾಗಿತ್ತು. ಲಂಡನ್ನಿನಿಂದ ಹಿಂತಿರುಗಿದ ನಂತರ ಕನಿಕಾ ಕಪೂರ್ ಐಸೋಲೇಷನ್ ನಲ್ಲಿ ತೆರಳುವ ಬದಲು ಪಾರ್ಟಿಗಳಲ್ಲಿ ಸುತ್ತಾಡುತ್ತಿದ್ದರು ಎಂದು ಟೀಕಿಸಲಾಗಿತ್ರು.
ತನ್ನ ಟ್ರಾವೆಲ್ ಹಿಸ್ಟರಿಯನ್ ಮುಚ್ಚಿಟ್ಟ ಆರೋಪದಲ್ಲಿ ಉತ್ತರಪ್ರದೇಶದಲ್ಲಿ ಅವರ ವಿರುದ್ಧ ಕೇಸು ಕೂಡ ಫೈಲ್ ಮಾಡಲಾಗಿತ್ತು.
ಕನಿಕಾ ಹೇಳುತ್ತಾರೆ —
ಜನರ ಪ್ರತಿಕ್ರಿಯೆಗಳನ್ನು ಕಂಡು ಬಹಳ ದುಃಖವಾಗಿತ್ತು. ಜನ ತಿಳಿದಿದ್ದಾರೆ ನನಗೇನೋ ರೋಗ ಇದೆ ಅಂತ. ನನಗನಿಸಿದಂತೆ ಅದು ನನ್ನ ಕೆರಿಯರ್ ನ ಕೆಟ್ಟ ಕಾಲ ಎಂದು.
“ಕೊರೊನಾ ಮಹಾಮಾರಿ ಆರ್ಟಿಸ್ಟ್ ಗಳಿಗೆ ಬಹಳ ಪ್ರಭಾವ ಗೊಳಿಸಿದೆ. ಇದು ಬಹಳ ಕಷ್ಟದ ದಿನಗಳು. ಆದಾಯ ಇರಲಿಲ್ಲ. ಇದರಲ್ಲೇ ಕಲಾವಿದರು ಬದುಕಬೇಕಿತ್ತು. ನಮ್ಮ ಮ್ಯೂಸಿಕ್ ನ ಎಲ್ಲಾ ಅಧಿಕಾರಗಳು ಮ್ಯೂಸಿಕ್ ಕಂಪನಿಗಳ ಬಳಿ ಇರುತ್ತದೆ .ಹಾಗಾಗಿ ಸಂಗೀತಗಾರರು ತಮ್ಮದೇ ಸ್ವಂತ ಪಬ್ಲಿಷಿಂಗ್ ಮಾಲೀಕರು ಆಗಬೇಕು ಎಂದು ನನ್ನ ಇಚ್ಛೆಯಾಗಿತ್ತು” ಎಂದಿದ್ದಾರೆ.
ಕಳೆದ ವರ್ಷ ಕೊರೊನಾ ಪಾಸಿಟಿವ್ ಆದ ನಂತರ ಮತ್ತೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದನಂತರ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತಿಳಿಸುತ್ತಾ-
“ನನ್ನ ಸಂಪರ್ಕದಲ್ಲಿದ್ದವರೆಲ್ಲ ಈವಾಗ ನೆಗೆಟಿವ್ ರಿಪೋರ್ಟ್ ಪಡೆದಿದ್ದಾರೆ” ಎಂದಿದ್ದರು.
” ನಾನು ಒಂದೂ ಪಾರ್ಟಿಯನ್ನು ಆಯೋಜಿಸಿಲ್ಲ. ನನಗೆ ಈ ರೋಗದ ಬಗ್ಗೆ ಯಾವ ಸಂಗತಿಯೂ ತಿಳಿದಿರಲಿಲ್ಲ. ನನಗೆ ಸಮಸ್ಯೆ ಬಂದಾಗ ಟೆಸ್ಟ್ ಮಾಡಿಸಿದೆ .ಟೆಸ್ಟ್ ಫಲಿತಾಂಶ ಪಾಸಿಟಿವ್ ಬಂದನಂತರ ಆಸ್ಪತ್ರೆಗೆ ಭರ್ತಿಗೊಂಡಿದ್ದೆ. ನನಗೆ ಗೊತ್ತು ನನ್ನ ಕುರಿತಂತೆ ಅನೇಕ ಕಥೆಗಳನ್ನು ಸೃಷ್ಟಿ ಮಾಡಿದ್ದಾರೆ. ಯಾಕೆಂದರೆ ನಾನು ಮೌನವೇ ಇದ್ದೆ. ಯಾಕೆಂದರೆ ಜನ ಸತ್ಯವನ್ನು ಅರಿಯುವ ತನಕ ನಾನು ತಾಳ್ಮೆಯಿಂದ ಇರಬೇಕಾಗಿತ್ತು.ನನ್ನ ಪರಿವಾರ, ಸ್ನೇಹಿತರಿಗೆ ಬಹಳ ಧನ್ಯವಾದಗಳು” ಎಂದು ಶಾಂತರಾಗಿ ಪ್ರತಿಕ್ರಿಯಿಸಿರುವರು.

ಜೀನ್ಸ್ ಪ್ಯಾಂಟ್ ಟೀ-ಶರ್ಟ್ ನಲ್ಲಿ ಅನುಷ್ಕಾ ಶರ್ಮಾರ ಫಿಟ್ನೆಸ್ ನೋಡಿ ಮೂಗಿನ ಮೇಲೆ ಬೆರಳಿಟ್ಟ ಅಭಿಮಾನಿಗಳು!

ಬಾಲಿವುಡ್ ನಲ್ಲಿ ಇಬ್ಬರು ನಟಿಯರಾದ ಕರೀನಾ ಕಪೂರ್ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ತಾಯಿಯಾದವರು. ಆದರೆ ತಾಯಿ ಎನಿಸಿಕೊಂಡ ಒಂದೆರಡು ತಿಂಗಳಲ್ಲೇ ಇಬ್ಬರು ನಟಿಯರೂ ತಮ್ಮ-ತಮ್ಮ ತಮ್ಮ ಫಿಲ್ಮ್ ಶೂಟಿಂಗ್ ಗೆ ಮರಳಿ ಬಂದಿದ್ದಾರೆ.
ಸೋಶಲ್ ಮೀಡಿಯಾದಲ್ಲಿ ಬಂದ ಫೋಟೋಗಳಲ್ಲಿ ಇವರ ಫಿಟ್ನೆಸ್ ಕಂಡು ಅಭಿಮಾನಿಗಳು ಮೂಗಿಗೆ ಬೆರಳು ಇಡುವಂತಾಗಿದೆ .ಕರೀನಾ ಕಪೂರ್ ಅವರ ಅನೇಕ ಫೋಟೋಗಳು ಈಗಾಗಲೇ ವೈರಲ್ ಆಗಿವೆ.


ಇತ್ತೀಚೆಗೆ ಅನುಷ್ಕಾ ಶರ್ಮಾರ ಫೋಟೋಗಳು ಕೂಡ ವೈರಲ್ ಆಗುತ್ತಿವೆ. ಒಂದು ಫೋಟೋದಲ್ಲಿ ಅನುಷ್ಕಾ ಶರ್ಮಾ ಶೂಟಿಂಗ್ ವ್ಯಾನ್ ನಿಂದ ಇಳಿಯುವ ಫೋಟೋ ವೈರಲ್ ಆಗಿದೆ.ಇದರಲ್ಲಿ ವೈಟ್ ಕಲರ್ ಟಿ-ಶರ್ಟ್ ಮತ್ತು ಡೇನಿಮ್ ಜೀನ್ಸ್ ಧರಿಸಿದ್ದಾರೆ. ಮುಖಕ್ಕೆ ಬಿಳಿ ಬಣ್ಣದ ಮಾಸ್ಕ್ ಕಟ್ಟಿದ್ದಾರೆ.ಈ ಫೋಟೋದಲ್ಲಿನ ಫಿಟ್ನೆಸ್ ಕಂಡು ಅಭಿಮಾನಿಗಳು ಮೂಗಿಗೆ ಬೆರಳಿಟ್ಟು ಆಶ್ಚರ್ಯ ಪಟ್ಟಿದ್ದಾರೆ.
ಆದರೆ ಕೆಲವರು ಮಾತ್ರ “ಎರಡು ತಿಂಗಳ ಮಗುವಿಗೆ ಅಮ್ಮನ ಅಗತ್ಯವಿದೆ” ಎಂದು ನೆನಪಿಸಿದ್ದಾರೆ .ಅನುಷ್ಕಾ ಶರ್ಮಾ ಜನವರಿ ೧೧ ಕ್ಜೆ ಮಗಳಿಗೆ ಜನ್ಮ ನೀಡಿದ್ದಾರೆ.


ಅನುಷ್ಕಾ ಬಹಳ ಸಮಯದಿಂದ ಫಿಲ್ಮ್ ನಿಂದ ದೂರವೇ ಇದ್ದಾರೆ. ೨೦೧೮ ರಲ್ಲಿ ಬಂದ ಜೀರೋ ಫಿಲ್ಮ್ ನಲ್ಲಿ ಶಾರುಖ್ ಖಾನ್ ಜೊತೆಗೆ ಕಾಣಿಸಿದ್ದರು.ಆದರೆ ಅದು ಪ್ಲಾಪ್ ಆಗಿತ್ತು. ಇತ್ತೀಚೆಗೆ ಓಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿರುವ ಸೀರೀಸ್ ಪಾತಾಳಲೋಕ್, ಬುಲ್ಬುಲ್ ಇವುಗಳನ್ನು ಅನುಷ್ಕಾ ಶರ್ಮಾ ಅವರೇ ಪ್ರೊಡ್ಯೂಸ್ ಮಾಡಿದ್ದರು.