ಹೆಮ್ಮರವಾಗಿ ಬೆಳೆದ ಬಿಜೆಪಿ

ಕೆ.ಆರ್.ಪುರ,ಏ.೬- ಶ್ಯಾಮಾ ಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದಿನ್ ದಯಾಳ್ ಉಪಾಧ್ಯಾಯ ಅವರಂತ ಮಹಾನ್ ನಾಯಕರು ಕಟ್ಟಿ ಬೆಳೆಸಿದ ಪಕ್ಷ ಇಂದು ವಿಶ್ವದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಹೆಮ್ಮೆಯ ವಿಚಾರ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮನೋಹರರೆಡ್ಡಿ ಅವರು ತಿಳಿಸಿದರು.
ಮಾರತ್ತಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯರ ತ್ಯಾಗ ಮತ್ತು ಬಲಿದಾನಗಳಿಂದಲೇ ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ.
ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ವಿಶೇಷ ಸ್ಥಾನವಿದ್ದು ಪಕ್ಷ ಇಷ್ಟು ಎತ್ತರಕ್ಕೆ ಬೆಳೆಯಲು ಕಾರ್ಯಕರ್ತರಿಗೆ ನೀಡುವ ಗೌರವ ಮತ್ತು ಸ್ಥಾನಮಾನವೇ ಮುಖ್ಯ ಕಾರಣ ಎಂದರು.
ಬಿಜೆಪಿ ಪಕ್ಷ ವಿಶ್ವದ ಅತಿದೊಡ್ಡ ಪಕ್ಷವಾಗಿ ಬೆಳೆದಿರುವುದು ಸಂತಸದ ವಿಚಾರ ಅದರಂತೆ ನಮ್ಮ ಪಕ್ಷದ ಮಹಾನ್ ನಾಯಕರು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಪುಷ್ಪ ಮಂಜುನಾಥ್,
ಬಿಜೆಪಿ ಮುಖಂಡರಾದ ವರ್ತೂರು ಬಿ.ಎಸ್.ಶ್ರೀಧರ್,ನಾಗೇಶ್ ರೆಡ್ಡಿ,
ಲೋಕೆಶ್,ಯೋಗೆಶ್ ಆರಾಧ್ಯ ಇದ್ದರು.