ಹೆಮ್ಮನಹಳ್ಳಿಯಲ್ಲಿ ನರಿಮರಿ ಪತ್ತೆ-ಗ್ರಾಮಸ್ಥರಿಂದ ರಕ್ಷಣೆ

ಮದ್ದೂರು : ತಾಲೂಕಿನ ಹೆಮ್ಮನಹಳ್ಳಿಯ ಮಾಸ್ತಮ್ಮ ದೇವಸ್ಥಾನದ ಬಳಿ ನರಿ ಮರಿ ಪತ್ತೆಯಾಗಿದೆ.
ಜಮೀನು ಕಡೆಗೆ ತೆರಳುತ್ತಿದ್ದ ಗ್ರಾಮಸ್ಥರು ಮಾಸ್ತಮ್ಮ ದೇವಸ್ಥಾನದ ಬಳಿ ನರಿ ಮರಿಯನ್ನು ಕಂಡು ರಕ್ಷಣೆ ಮಾಡಿದರಲ್ಲದೆ, ತಕ್ಷಣ ಅರಣ್ಯಾಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದಾರೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಗ್ರಾಮಸ್ಥರು ರಕ್ಷಿಸಿದ್ದ ನರಿಮರಿಯನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಗೌರೀಶ್, ದಿನಕರ, ಗೌತಮ್, ಸ್ವಾಮಿ, ಕೆಂಪರಾಜು, ಮನೋಜ್‌ಕುಮಾರ್ ಇತರರು ನರಿ ಮರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.