ಹೆಬ್ಬಾಳೆಗೆ ಬೆಂಬಲಿಸಲು ಡೋಣಗಾಪುರ ಗ್ರಾಮಸ್ಥರ ನಿರ್ಧಾರ

(ಸಂಜೆವಾಣಿ ವಾರ್ತೆ)
ಬೀದರ:ಎ.19: ಗಡಿ ಭಾಗದಲ್ಲಿ ಕನ್ನಡ ಬೆಳೆಸುವ ಆಸಕ್ತಿ ಹೊಂದಿದ ಮತ್ತು ಯುವ ಉತ್ಸಾಹಿಗಳಾದ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ರಾಜಕುಮಾರ ಹೆಬ್ಬಾಳೆ ಪರ ಮತ ಚಲಾಯಿಸಲು ಸಮಸ್ಥ ಡೋಣಗಾಪುರ ಗ್ರಾಮದ ಕಸಾಪ ಆಜೀವ ಸದಸ್ಯರು ನಿರ್ಧಾರ ತೆಗೆದುಕೊಂಡರು.
ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ರಾಜಕುಮಾರ ಹೆಬ್ಬಾಳೆ ಪರ ಮತ ಯಾಚಿಸಲು ಕರೆದ ಸಭೆಯಲ್ಲಿ ಗ್ರಾಮಸ್ಥರು ಒಕ್ಕೋರಿಲಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದಿನ ಕಸಾಪ ಚುನಾವಣೆಯಲ್ಲಿ ನಾವೆಲ್ಲರೂ ಸುರೇಶ ಚೆನ್ನಶೆಟ್ಟಿ ಅವರಿಗೆ ಬೆಂಬಲ ನೀಡಿದೇವೆ.ಆದರೆ ಗೆದ್ದ ನಂತರ ತಿರುಗಿ ನಮ್ಮ ಗ್ರಾಮದ ಕಡೆ ಮುಖ ಎತ್ತಿ ನೋಡದೆ ನಮ್ಮನ್ನು ಅಪಮಾನ ಮಾಡಿದ್ದಾರೆ.ಕನಿಷ್ಠ ನಮ್ಮೂರಿನ ಆಜೀವ ಸದಸ್ಯರಿಗೆ ತಾಲೂಕು,ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನಮಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ,ಅಂಥ ವ್ಯಕ್ತಿಗೆ ನಾವು ಮತ್ತೋಮ್ಮೆ ಮತ ನೀಡುವುದು ಬೇಡ ಎಂದು ಈಗಾಗಲೇ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಗ್ರಾಮದ ಪ್ರಮುಖರಾದ ಶಾಂತಕುಮಾರ ಬಿರಾದಾರ,ಬಾಬುರಾವ ವೀರಶೆಟ್ಟೆ,ಧನರಾಜ ಹುಗ್ಗೆ,ಸಂಗಮೇಶ ನಾಗೂರೆ,ಅಮೃತ ಪಾಟೀಲ್,ಮಲ್ಲಿಕಾರ್ಜುನ ಕುಂಚಗೆ,ಮಹೇಶ ಮದನೂರೆ,ಗಣಪತಿ ಹೂಗಾರ,ಸೂರ್ಯಕಾಂತ ಮೆಂಗಾ,ಶಂಕರೆಪ್ಪ ವೀರಶೆಟ್ಟೆ,ದಯಾನಂದ ವೀರಶೆಟ್ಟೆ,ವಿಜಯಕುಮಾರ ಕನ್ನಾಲೆ,ಗುರುನಾಥ ಪವಾಡಶೆಟ್ಟೆ,ನಂದಕುಮಾರ ಮದರಗೆ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಶಸಾಪ ಅಧ್ಯಕ್ಷ ಶಂಭುಲಿಂಗ ಕಾಮಣ್ಣ,ಕಜಾಪ ಅಧ್ಯಕ್ಷ ಅಶೋಕ ಮೈನ್ನಳ್ಳೆ,ಪ್ರಾಚಾರ್ಯರಾದ ಅಶೋಕ ರಾಜೋಳೆ,ಜೈಕಾಂತ ಗಂಗೂಜಿ,ಮುಖಂಡರಾದ ಸುಭಾಷ ಹುಲಸೂರೆ,ನಾಗಶೆಟೆಪ್ಪ ಲಂಜವಾಡೆ,ವಿಠಲರಾವ ಮೇತ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.