ಹೆಪಟೈಟಿಸ್ ಕುರಿತು ಜಾಗೃತಿ ಅಗತ್ಯ :ಡಾ. ರಾಜಶೇಖರ ಮಾಲಿ

ಕಲಬುರಗಿ ಅ 25: ನಗರದ ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿದು ಹೆಪಟೈಟಿಸ್ ಎ.ಬಿ.ಸಿ.ಡಿ. ಮತ್ತು ಇ ಅನ್ನು ತಡೆಗಟ್ಟುವ, ನಿಯಂತ್ರಣ ಮಾಡುವ ಹಾಗೂ 2030 ರ, ವೇಳೆಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿಯನ್ನಿಟ್ಟು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವವುದು ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜಶೇಖರ ಮಾಲಿ ಹೇಳಿದರು.

ನಗರದ ಕೆ ಬಿ ಎನ್ ವಿಶ್ವವಿದ್ಯಾಲಯದ ಮತ್ತು ಬೋಧನಾ / ಸಾಮಾನ್ಯ ಆಸ್ಪತ್ರೆ ಕಲಬುರಗಿ ಸಭಾಂಗಣದಲ್ಲಿ. ರಾಷ್ಟ್ರೀಯ ಆರೋಗ್ಯ ಅಭಿಯಾನ. ಜಿಲ್ಲಾ ಪಂಚಾಯತಿ ಕಲಬುರಗಿ. ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ ಕಲಬುರಗಿ. ಹಾಗೂ ಕೆ ಬಿ ಎನ್ ವಿಶ್ವವಿದ್ಯಾಲಯ ಬೋಧನಾ / ಜನರಲ್ ಹಾಸ್ಪಿಟಲ್ ಕಲಬುರಗಿ. ಇವುಗಳ ಸಂಯುಕ್ತಾಶ್ರಯದಲ್ಲಿ ಹೆಪಟೈಟಿಸ್ ದಿನಾಚರಣೆಯನ್ನು ಸಸಿಗೆ ನೀರು ಉಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ಹೆಪಟೈಟಿಸ್ ನಿಯಂತ್ರಣ ವಿಧಾನಗಳು ಜೀವನಶೈಲಿ ಮತ್ತು ವರ್ತನೆ ಬದಲಾವಣೆಗೆ ಅರಿವು ಮೂಡಿಸುವುದು ಹೆಪಟೈಟಿಸ್ ಬಿ ಲಸಿಕೆ ಹಾಕಿಸುವಿಕೆ ( ನವಜಾತ ಶಿಶು, ಆರೋಗ್ಯ ಕಾರ್ಯಕ್ರಮಗಳು ಮತ್ತು ಹೆಚ್ಚು ಸೋಂಕಿತ ಅಪಾಯ ಉಳ್ಳವರು ) ಸುರಕ್ಷಿತ ರಕ್ತ ಮತ್ತು ಅವರ ಉತ್ಪನ್ನಗಳ ಬಳಕೆ ಸುರಕ್ಷಿತ ಚುಚ್ಚುಮದ್ದು ನೀಡುವಿಕೆ, ಸುರಕ್ಷಿತ, ನೀರು, ಸ್ವಚ್ಛ ಶೌಚಾಲಯ, ಉಪಯೋಗ ಹಾಗೂ ನೈರ್ಮಲ್ಯ ಕಾಪಾಡುವಿಕೆ, ಈ ವಿಧಾನಗಳಿಂದ ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು. ವೇದಿಕೆ ಮೇಲೆ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ|| ಚಂದ್ರಕಾಂತ ನರಬೋಳಿ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಮಾತನಾಡುತ್ತಾ ರಕ್ತ ಪರೀಕ್ಷೆಗಳಿಂದ ಹೆಪಟೈಟಿಸ್ ಬಿ ವೈರಸ್‌ನ್ನು ಕಂಡು ಹಿಡಿಯಬಹುದು. ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಪತ್ತೆಗಾಗಿ ಜನರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಮುಂದಾಗಬೇಕು, ಈ ವಿಷಯವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಹೆಪಟೈಟಿಸ್ ಬಿ ಮತ್ತು ಸಿ ವೈರಸ್‌ಗಳು 10 ರಿಂದ 15 ವರ್ಷಗಳ ವರೆಗೆ, ಯಾವುದೇ ರೋಗ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಯಕೃತ್ತಿನಲ್ಲಿ ( ಲಿವರ್ ) ಉರಿಯೂತನ್ನುಂಟು ಮಾಡುವ ಲಕ್ಷಣ ಅಥವಾ ರೋಗಗಳನ್ನು ಹೆಪಟೈಟಿಸ್ ಎಂದು ಹೇಳಲಾಗುತ್ತದೆ, ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ವೈರಸ್ ಗಳಿಂದ ಹೆಪಟೈಟಿಸ್ ಅನ್ನು ಹೆಪಟೈಟಿಸ್ ಎ.ಬಿ.ಸಿ. ಮತ್ತು ಡೆಲ್ಟಾ ಫಾಕ್ಟರ್ ಎಂದು ಗುರುತಿಸಲಾಗುವ ವೈರಸ್‌ಗಳಿಂದ ಹರಡಬಹುದು. ಅಂತಿಮವಾಗಿ ಪಿತ್ತಜನಕಾಂಗವು ಸಂಪೂರ್ಣವಾಗಿ ಅಸಮರ್ಥ ವಾಗುತ್ತದೆ ಆ ಹಂತದಲ್ಲಿ ಪಿತ್ತಜನಕಾಂಗದ ಕಸಿ ಹೊರತು ಪಡಿಸಿ ಯಾವುದೇ ಚಿಕಿತ್ಸೆಯನ್ನು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿದರು. ಹಾಗೆ ಜಿಲ್ಲಾ ಸರ್ಕಾರಿ ( ಜಿಮ್ಸ್ ) ಆಸ್ಪತ್ರೆಯಲ್ಲಿ ವಾರ್ಡ ನಂ 62 ( ಕಚೇರಿ ) ಉಚಿತ ಸಲಹಾ ಸೇವಾ ಕೇಂದ್ರ ವಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಡಾ. ಶರಣಬಸಪ್ಪ ಗಣಜಲಖೇಡ ಅವರು ಮಾತನಾಡಿದರು‌. ಕೆಬಿನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ|| ಸಿದ್ದಾರ್ಥ ಕಾಂತಾ ಅವರು ಉಪನ್ಯಾಸ ನೀಡಿದರು.

ಕೆ ಬಿ ಎನ್ , ವಿಶ್ವವಿದ್ಯಾಲಯದ ಡಿನ್ ಡಾ. ಸಿದ್ದೇಶ್ವರ ಶಿರವಾರ, ಮತ್ತು ಎಂ ಎಸ್ , ಹೆಚ್ಓಡಿ, ಡಾ. ಸಿದ್ದಲಿಂಗ ಚೆಂಗಟಾ,
ಜಿಲ್ಲಾ ಜಿಮ್ಸ್ ಹೆಪಟೈಟಿಸ್ ನೋಡಲ್ ಅಧಿಕಾರಿ ಡಾ|| ಮಹಾದೇವಪ್ಪ ಮೂಲಗೆ , ಆರ್ ಸಿ ಹೆಚ್ ಓ. ಅಧಿಕಾರಿ ಡಾ|| ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕಾಲರ ನಿರ್ಮೂಲನಾಧಿಕಾರಿ ಡಾ. ವಿವೇಕಾನಂದ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ರಾಜಕುಮಾರ ಕುಲಕರ್ಣಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮಾರುತಿ ಕಾಂಬಳೆ , ವೇದಿಕೆ ಮೇಲೆ ಇದ್ದರು.
ಇದೆ ಸಂದರ್ಭದಲ್ಲಿ ಹೆಪಟೈಟಿಸ್ ವೈರಸ್‌ನ ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ಕೆಬಿಎನ್ ವಿಶ್ವವಿದ್ಯಾಲಯದ, ಮೆಡಿಸಿನ್ ಹೆಚ್ ಓ ಡಿ ಡಾ. ಚಂದ್ರಕಲಾ. ಕೆ ಬಿ ಎನ್, ಟಿಬಿ ನೋಡಲ್ ಅಫೀಸರ್, ಡಾ. ಗಿರೀಶ್ ರೋಣಾದ್, ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ .
ಎಸ್ ಟಿ ಎಸ್. ಶಿವಕುಮಾರ ಪಾಟೀಲ್ ಸ್ವಾಗತಿಸಿದರು. ಡಿ‌ಪಿಎಸ್ ಸುರೇಶ್ ದೊಡ್ಡಮನಿ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ಟಿಬಿ ಮೇಲ್ವಿಚಾರಕ ಸಂತೋಷ ಕುಡಳ್ಳಿ ಸರ್ವರಿಗೂ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕೆಬಿಎನ್
ಖಾಸಗಿ ವೈದ್ಯಾಧಿಕಾರಿಗಳು , ವೈದ್ಯಕೀಯ ವಿದ್ಯಾರ್ಥಿಗಳು, ಹಾಗೂ ಎನ್ ಟಿ ಇ ಪಿ / ಡ್ಯಾಪ್ಕೋ ಸಿಬ್ಬಂದಿ ವರ್ಗದವರು, ಸರ್ಕಾರಿ ಆರೋಗ್ಯ ಸಿಬ್ಬಂದಿಗಳು‌ ಸೇರಿದಂತೆ ಇತರರು ಇದ್ದರು.