ಹೆದ್ದಾರಿ: ರೈತರು ಹೊಲಗಳಿಗೆ ರಸ್ತೆ ರೂಪ್ ವೇ ನಿರ್ಮಿಸಿ – ದದ್ದಲ್

ರಾಯಚೂರು,ಜು.೨೫-
ರೈತರು ಹೊಲಗಳಿಗೆ ಹೋಗಲು ಯಾವುದೇ ತೊಂದರೆಯಾಗದಂತೆ, ರಸ್ತೆಯ ರೂಪ್ ವೇ ನಿರ್ಮಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗೆ ಮತ್ತು ಗುತ್ತಿಗೆದಾರಿಗೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಸೂಚಿಸಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸೂರತ್- ಚೆನೈ ರಾಷ್ಟ್ರೀಯ ಹೆದ್ದಾರಿ ರಸ್ತೆ ಯ ಕಾಮಗಾರಿಯನ್ನು ಮಂಡಲ ತಮ್ಮ ಜಮೀನುಗಳಿಗೆ ಹೋಗಲು ಯಾವುದೇ ರೀತಿಯ ತೊಂದರೆ ಯಾಗದಂತೆ ರಸ್ತೆಯ ರೂಪ್ ವೇ ನಿರ್ಮಾಣ ಮಾಡಿ ಅವರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಸಂಬಂಧ ಗೇರಾದಿಂದ ಬೇವಿನಬೆಂಚಿ ವರೆಗೆ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದ ನಂತರ ಅವರು ಈ ಸೂಚನೆ ಪಟ್ಟ ಅಧಿಕಾರಿಗೆ ಮತ್ತು ಗುತ್ತಿಗೆದಾರಿಗೆ ನೀಡಿದರು.
ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಾರ್ಗದಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಯಾವುದೇ ರೀತಿಯ ತೊಂದರೆಯಾಗದಂತೆ ರಸ್ತೆಯ ರೂಪ್ ವೇ ನಿರ್ಮಾಣ ಮಾಡಿ ಅವರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ತಹಸಿಲ್ದಾರ್ ಚೆನ್ನಮಲ್ಲಪ್ಪ ಘಂಟೆ, ಮುಖಂಡರಾದ ಶ್ರೀನಿವಾಸ ಗ್ಯಾಸ್, ನಾಗೇಂದ್ರಪ್ಪ ಮಟಮಾರಿ, ಬಸವ ರಾಜ ವಕೀಲ, ಶ್ರೀನಿವಾಸ ರೆಡ್ಡಿ, ಮಾರೆಪ್ಪ, ಹಂಪನ ಗೌಡ, ಶಂಕರ ಪಾಟೀಲ್, ವೆಂಕಟೇಶ್, ಕೊಂಬಿನ, ಆಂಜನೇಯ್ಯ, ಲಕ್ಷಣ ಸಗಮಕುಂಟ, ಹನುಮಂತಪ್ಪ, ಈರಣ್ಣ ವಿಶ್ವನಾಥ ರೆಡ್ಡಿ ಗುರ್ಜಾಪೂರ, ಮಂಜುನಾಥ, ಬಸವ ರಾಜ, ಮನ್ಸಲಾಪೂರ, ಯಂಕನಗೌಡ, ನರಸಿಂಹ ಉಡಮಗಲ್, ಶಶಿಕಲಾ ಭೀಮರಾಯ ಸೇರಿದಂತೆ ಇನ್ನಿತರ ಮುಖಂಡರುಗಳು, ಅಧಿಕಾರಿಗಳು ರೈತರು ಉಪಸ್ಥಿತರಿದ್ದರು.