ಹೆದ್ದಾರಿ ತಡೆದು ಸರ್ಕಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು

(ಸಂಜೆವಾಣಿ ವಾರ್ತೆ)
ಇಂಡಿ:ಜು.31:ತಾಲೂಕಿನ ಸಂಪೂರ್ಣ ರಸ್ತೆಗಳು ಹಾಳಾಗಿದ್ದು, ಹಲವಾರು ರಸ್ತೆ ಅಪಘಾತಗಳು ಸಂಭವಿಸುತ್ತಿವೆ, ಪ್ರತಿನಿತ್ಯ ಒಂದಿಲ್ಲ ಒಂದು ಅಪಘಾತಗಳು ಸಂಭವಿಸುತ್ತಿವೆ, ಗೃಹಿಣಿ ಮಹಿಳೆಯರಿಗೆ ಆಸ್ಪತ್ರೆಗೆ ಸಾಗಿಸುವುದು ದುಸ್ತರವಾಗಿದೆ, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಅಸಾಧ್ಯ.ಹಿಂತಾ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಇಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಝಳಕಿಯಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರನ್ನುದ್ದೇಶಿಸಿ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಅವರು ಮಾತನಾಡಿ ತಾಲೂಕಿನ ಪ್ರತಿಯೋಂದು ರಸ್ತೆಗಳು ಹಾಳಾಗಿದ್ದು, ಬೆಳಿಗ್ಗೆ ಎದ್ದರೆ ಸಾಕು ಒಂದಿಲೋಂದು ಅಪಘಾತಗಳ ಸುದ್ದಿ ಸಾಮಾನ್ಯ ವಾಗಿದೆ.ಗೃಬಿಣಿ ಮಹಿಳೆಯರಿಗೆ ಆಸ್ಪತ್ರೆಗೆ ಸಾಗಿಸುವುದು ದುಸ್ತರವಾಗಿದೆ.ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಹೋಗದೆ ತೋಂದರೆ ಅನುಭವಿಸುವಂತಾಗಿದೆ.ಕುರಡು ಸರ್ಕಾರಕ್ಕೆ ಎಚ್ಚರಿಕ್ಕೆ ನೀಡಲು ಹಿಂತಾ ಹೋರಾಟಗಳು ಅನಿವಾರ್ಯ ಎಂದು ಹೇಳಿದರು .ಮಾಜಿ ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ ಮಾತನಾಡಿ ಸರ್ಕಾರ ಕೇವಲ ಮತೀಯ ವಿಷಯಗಳನ್ನು ಮುಂದು ಮಾಡಿಕೋಂಡು ಆಡಳಿತ ನಡೆಸುತ್ತಿದೆ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ, ಗೃಹ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ ಇದ್ಯಾವುದರ ಪರಿವೆಯೇ ಇಲ್ಲದೆ ಜಾಣಕೂರಡತನ ತೋರಿಸುತ್ತಿದ್ದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಜೆಡಿಎಸ್ ಮುಖಂಡರಾದ ಶ್ರೀ ಶೈಲಗೌಡ ಪಾಟೀಲ, ಅಯೂಬ್ ನಾಟೀಕರ, ಮರೆಪ್ಪ ಗಿರಣಿವಡ್ಡರ,ಸಿದ್ದಣಗೌಡ ಬಿರಾದಾರ,ಮಜಿದ್ ಸೌದಾಗರ ಮಾತನಾಡಿದರು.ಹೋರಾಟದಲ್ಲಿ ಬಸಗೋಂಡ ಪಾಟೀಲ,ಅರವೀಂದ ಪೂಜಾರಿ, ಸಿದ್ದು ಡಂಗಾ, ಭೀಮರಾಯ ಪೂಜಾರಿ, ಸಂತೋಷ ಬಿರಾದಾರ,ರವಿ ಕೆಂಗೆರಿ, ಮಾಳಪ್ಪ ಉಮರಾಣಿ, ಬೀರಪ್ಪ ಸಗಾಯಿ,ಮುಬಾರಕ ಪಠಾಣ, ಮಹಿಬೂಬ ಬೇವನೂರ, ವಿಠ್ಠಲ ಶಿರಶ್ಯಾಡ,ರಾವುಜ ಸಗಾಯಿ, ಕಾಮಣ್ಣ ಗೌಡ ಬಿರಾದಾರ,ಗಾಳೇಪ್ಪ ಚೌಡಿಹಾಳ,ರವಿ ಕೆಂಗೆರಿ, ಕುಮಾರ್ ನಿಂಬರಗಿ,ಮಲ್ಲು ಹೂಗಾರ, ನಿಯಾಝ್ ಅಗರಖೇಡ ಇರ್ಫಾನ್ ಪಠಾಣ್ ರಾಜು ಮುಲ್ಲಾ ಬಸವರಾಜ ಹಂಜಗಿ,ಮನೋಹರ ನಾವಿ, ಬಾಲಕೃಷ್ಣ ಭೋಸಲೆ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು