ಹೆದ್ದಾರಿಗೆ ಉರುಳಬಿದ್ದ ಮುಳ್ಳಿನ ಜಾಲಿ, ಸಂಚಾರಕ್ಕೆ ಸಂಕಟ

ದೇವದುರ್ಗ,ಮೇ.೧೮- ಪಟ್ಟಣದಿಂದ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳ ಎರಡೂ ಬದಿಗೆ ಮುಳ್ಳಿನ ಜಾಲಿಬೆಳೆದು ಪ್ರಯಾಣಿಕರು ಹಾಗೂ ವಾಹನ ಸವಾರರ ಜೀವಹಿಂಡುತ್ತಿವೆ. ಹಲವು ಕಡೆ ಅಪಘಾತಕ್ಕೆ ಆಹ್ವಾನಿಸುತ್ತಿದ್ದು ಓಡಾಡಲು ಭಯಪಡುವಂತಾಗಿದೆ.
ಗಲಗ ಚಿಂಚರಕಿ ರಸ್ತೆ ೧೨ಕಿಮೀ, ಗಲಗದಿಂದ ಜಾಲಹಳ್ಳಿ ರೋಡ್ ೧೫ಕಿಮೀ, ಗಲಗದಿಂದ ಅರಕೇರಾ ೧೦ಕಿಮೀ ರಸ್ತೆಯನ್ನು ಎರಡೂ ಕಡೆಯಿಂದ ಮುಳ್ಳಿನ ಜಾಲಿಗಳು ನುಂಗಿದ್ದು ನಿತ್ಯವೂ ಒಂದಿಲ್ಲೊಂದು ಅವಘಡ ನಡೆಯುತ್ತಿವೆ. ಇತ್ತೀಚೆಗೆ ಬಿರುಗಾಳಿ ಬೀಸಿದ್ದರಿಂದ ೧೦-೧೫ಅಡಿ ಬೆಳೆದಿದ್ದ ಜಾಲಿಗಳು ರಸ್ತೆಗೆ ಉರುಳಿಬಿದ್ದಿದ್ದು ದ್ವಿಪಥ ರಸ್ತೆ ಏಕಪಥವಾಗಿವೆ.
ಹಲವು ಕಡೆ ರಸ್ತೆಯ ಎರಡೂ ಬದಿಗೆ ಮುಳ್ಳಿನ ಜಾಲಿಬೆಳೆದಿವೆ. ಝಿಬ್ರಾಕ್ರಾಸ್ ಲೈನ್ ಪಕ್ಕದಲ್ಲಿ ಜಾಲಿಬೆಳೆದಿದ್ದರಿಂದ ಎರಡ್ಮೂರು ಫೀಟ್ ರೋಡ್‌ಅನ್ನು ಅತಿಕ್ರಮಿಸಿವೆ ಎದುರಿಗೆ ಬರುವ ವಾಹನಗಳು ಕಾಣಿಸುತ್ತಿಲ್ಲ. ಎರಡು ದೊಡ್ಡ ವಾಹನ ಎದುರಾದರೆ ಮುಳ್ಳಿನ ಜಾಲಿತೆರೆಸಿಕೊಂಡು ಹೋಗುವ ಸ್ಥಿತಿಯಿದೆ. ಈ ಸಮಸ್ಯೆ ಮೂರು ರಸ್ತೆಗಳಿಗೆ ಸೀಮಿತವಾಗದೆ ಬಹುತೇಕ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಜಾಲಿಮಯವಾಗಿವೆ.
ಕಲ್ಮಲಾದಿಂದ ತಿಂಥಣಿ ಬ್ರೀಡ್ಜ್‌ವರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಹಲವುಕಡೆ ಈ ಸಮಸ್ಯೆಯಿದೆ. ಗಬ್ಬೂರಿನಿಂದ ಗೂಗಲ್ ರಸ್ತೆ, ಗಬ್ಬೂರಿನಿಂದ ಸಿರವಾರಗೆ ಸಂಪರ್ಕಿಸುವ ರಸ್ತೆ, ಸುಂಕೇಶ್ವರಹಾಳದಿಂದ ನದಿದಂಡೆಯ ವಿವಿಧ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ, ಪಟ್ಟಣದಿಂದ ತಾಂಡಾ, ದೊಡ್ಡಿಗಳಿಗೆ ಹೋಗುವ ದಾರಿ, ಜಾಲಹಳ್ಳಿಯಿಂದ ಯಲಗಟ್ಟಾ ಮೂಲಕ ಹಟ್ಟಿಗೆ ಸಂಪರ್ಕಿಸುವ ರಸ್ತೆ, ಜಾಲಹಳ್ಳಿಯಿಂದ ಲಿಂಗದಹಳ್ಳಿಗೆ ಸಂಪರ್ಕಿಸುವ ಅರ್ಧರಸ್ತೆಯನ್ನೇ ಜಾಲಿಗಿಡಗಳು ನುಂಗಿವೆ.
ಸದರಿ ವಿವಿಧ ರಸ್ತೆಮೇಲೆ ನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು ಬೈಕ್‌ಗಳು ದಾರಿಕಾಣದೆ ಮುಳ್ಳಲ್ಲಿ ಬಿದ್ದ, ಸ್ಕಿಡ್‌ಆಗಿ ಮುಗಿಚಿ ಬೀಳುವ ಘಟನೆಗಳು ನಡೆಯುತ್ತಲೇ ಇವೆ. ಹಲವುರು ಮುಳ್ಳು ತೆರಸಿಕೊಂಡಿದ್ದರೆ ಕೆಲವರು ಬಿದ್ದುಗಾಯಗೊಂಡಿದ್ದಾರೆ. ಇತ್ತೀಚೆಗೆ ಭತ್ತದ ರಾಶಿಯಾಗಿ ರೈತರು ಹಲ್ಲುಸಾಗಣೆ ಮಾಡಿದ್ದು ಮುಳ್ಳಿಗೆ ಜಾಲಿಗೆ ಮೇವುಬಿದ್ದು ಮುಂದೆ ದಾರಿಕಾಣದಂತಾಗಿದೆ.

ಬಾಕ್ಸ್====

ಕಣ್ಣುಮುಚ್ಚಿ ಕುಳಿತ ಇಲಾಖೆ
ರಾಜ್ಯ ಹಾಗೂ ಗ್ರಾಮೀಣ ಭಾಗದ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ ತನಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ. ಗಲಗಗೆ ಸಂಪರ್ಕಿಸುವ ಮೂರೂ ರಸ್ತೆಗಳ ಬದಿಮುಳ್ಳು ಬೆಳೆದು ವರ್ಷಗಳು ಕಳೆದಿವೆ. ಮಳೆಗಾಗಿ ಜಾಲಿರಸ್ತೆ ಉರುಳಿ ತಿಂಗಳು ಕಳೆದರೂ ತೆರವುಕಾರ್ಯ ಮಾಡಿಲ್ಲ. ಸ್ಥಳೀಯ ಗ್ರಾಪಂಕೂಡ ಕ್ಯಾರೆ ಎನ್ನುತ್ತಿಲ್ಲ. ಗಲಗ ಮೂಲಕ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕವಿದ್ದು, ಇಲ್ಲಿನ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಮುಳ್ಳು ತೆರೆಸಿಕೊಳ್ಳುತ್ತಾ ಹೋಡಾಡುತ್ತಿದ್ದಾರೆ. ಜಾಲಹಳ್ಳಿ ಲಿಂಗದಹಳ್ಳಿಯಲ್ಲಿ ರಸ್ತೆಯಾವುದೋ ಜಾಲಿಯಾವುದೋ ಎನ್ನುವಂತಿದೆ.

ಕೋಟ್=====

ರಸ್ತೆ ಅಕ್ಕಪಕ್ಕದ ಮುಳ್ಳಿನ ಜಾಲಿ ತೆರವು ಮಾಡಲಾಗುತ್ತಿದೆ. ಗಲಗದಿಂದ ಚಿಂಚರಕಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮುಳ್ಳಿನ ಜಾಲಿ ತೆರವಿಗೆ ಕ್ರಮಕೈಗೊಳ್ಳುತ್ತೇವೆ. ಬಿರುಗಾಳಿ ಸಹಿತ ಮಳೆಬಿದ್ದದ್ದರಿಂದ ರಸ್ತೆ ಜಾಲಿಬಿದ್ದಿದ್ದು ಎಲ್ಲಿಯೂ ರಸ್ತೆ ಬಂದ್‌ಆಗಿಲ್ಲ.
-ನಶ್ರತ್‌ಅಲಿ
ಪಿಡಬ್ಲ್ಯುಡಿ ಎಇಇ

೧೮-ಡಿವಿಡಿ-೧