ಹೆತ್ತ ಮಗಳ ಮೇಲೆ ಅತ್ಯಾಚಾರ: ಕಾಮುಕ ತಂದೆಗೆ ಜೀವಿತಾವಧಿ ತನಕ ಜೈಲು ಶಿಕ್ಷೆ

ಸಂಜೆವಾಣಿ ವಾರ್ತೆ
ಚಾಮರಾಜನಗರ: ಜು.25:- ಹೆತ್ತ ಮಗಳನ್ನೇ ಅತ್ಯಾಚಾರ ಮಾಡಿ, ಗರ್ಭಿಣಿ ಮಾಡಿದ್ದ ಕಾಮುಕ ತಂದೆಗೆ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ
ನ್ಯಾಯಾಲಯವು ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿದೆ. ಚಾಮರಾಜನಗರ ಜಿಲ್ಲೆಯ 48 ವರ್ಷದ ತಂದೆ ಶಿಕ್ಷೆಗೊಳಗಾದ ಅಪರಾಧಿ. ಅಪ್ರಾಪ್ತ ಮಗಳನ್ನು ಈತ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿದ್ದ ಈ ಸಂಬಂಧ ಚಾಮರಾಜನಗರ ಠಾಣೆಯೊಂದರಲ್ಲಿ ಪೆÇಳ್ಳೋ ಪ್ರಕರಣ ದಾಖಲಾಗಿತ್ತು.
ವಾದ – ಪ್ರತಿವಾದ ಆಲಿಸಿ ನ್ಯಾ.ನಿಶಾರಾಣಿ ಅವರು, ವ್ಯಕ್ತಿಯ ಆರೋಪ ಸಾಬೀತಾಗಿದ್ದರಿಂದ 48ಛಿ ವರ್ಷದ ಅಪರಾಧಿಗೆ ಆತನ ಜೀವಿತಾವಧಿ ತನಕ ಜೈಲುಶಿಕ್ಷೆ ವಿಧಿಸಿದ್ದಾರೆ.
ಕೆ.ಯೋಗೇಶ್ ವಾದ ಮಂಡಿಸಿದ್ದರು. ಇನ್ನು, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 6 ಲಕ್ಷ ರೂ. ಪರಿಹಾರವನ್ನು 30 ದಿನದೊಳಗಾಗಿ ಕೊಡಬೇಕೆಂದು ನ್ಯಾಯಾಧೀಶರು ಸೂಚನೆ ಕೊಟ್ಟಿದ್ದಾಡೆ.