ಹೆತ್ತ ಮಕ್ಕಳ ಮದುವೆ ಮಾಡಬೇಕಿದ್ದ 57 ವರ್ಷದ ವ್ಯಕ್ತಿ 2ನೇ ವಿವಾಹವಾದ!

ಕಲಬುರಗಿ.ಜ.9:ಆಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ. ಬರೋಬ್ಬರಿ ಎಂಟು ಮಕ್ಕಳ ತಾಯಿ. ಆಕೆಯ ಪತಿಗೆ ಐವತ್ತೇಳು ವರ್ಷ. ಆದಾಗ್ಯೂ, ಪತಿ ಐವತ್ತೇಳು ವರ್ಷದಲ್ಲಿ ಮಕ್ಕಳಿಗೆ ಮದುವೆ ಮಾಡಬೇಕಾಗಿತ್ತು. ಆದಾಗ್ಯೂ, ತಾನೇ ಬೇರೊಂದು ಮದುವೆಯಾಗಿದ್ದಾನೆ.
ಪತಿಯ ವಂಚನೆಯಿಂದ ಬೀದಿಗೆ ಬಿದ್ದಿರುವ ಮಹಿಳೆ ಹೆಸರು ಮಾಲೀಯಾ ಸುಲ್ತಾನ್. ಅವರು ಮೂಲತ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾವೂರ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯಾಗಿದ್ದವರು. ಎಂಟು ಮಕ್ಕಳ ತಾಯಿಯಾಗಿರುವ ಮಾಲಿಯಾ ಸುಲ್ತಾನ್ ಅವರಿಗೆ ಇದೀಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಜೀವನ ಹೇಗೆ ನಡೆಸೋದು ಎಂಬ ಚಿಂತೆ ಕಾಡುತ್ತಿದೆ. ಅದಕ್ಕೆ ಕಾರಣ ಅವರ ಪತಿಯಂತೆ.
ಮಾಲೀಯಾ ಸುಲ್ತಾನರ ವಿವಾಹ ಕಳೆದ ಮೂವತ್ತು ವರ್ಷಗಳ ಹಿಂದೆ ಚಿತ್ತಾಪುರ ತಾಲ್ಲೂಕಿನ ಹಲಕರ್ಟಾ ಗ್ರಾಮದ ನಿವಾಸಿ ಇಬ್ರಾಹಿಂ ಪಟೇಲ್ ಅವರೊಂದಿಗೆ ಆಗಿತ್ತು. ದಂಪತಿಗೆ ಒಟ್ಟು ಎಂಟು ಮಕ್ಕಳಿದ್ದಾರೆ. ಅವರಲ್ಲಿ ಐವರು ಪುತ್ರಿಯರು ಮತ್ತು ಇಬ್ಬರು ಪುತ್ರಿಯರು. ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಮಕ್ಕಳಿಗೆ ಮದುವೆ ಮಾಡುವ ವಯಸ್ಸಿನಲ್ಲಿ ಇದೀಗ ಮಾಲಿಯಾ ಸುಲ್ತಾನ್ ಅವರ ಪತಿ ಇಬ್ರಾಹಿಂ ಪಟೇಲ್ ಅವರು ಮತ್ತೊಂದು ಮದುವೆಯಾಗಿದ್ದಾರೆ.
ಮದುವೆಯಾದ ನಂತರ ಮಾಲಿಯಾ ಸುಲ್ತಾನ್ ಕುಟುಂಬಕ್ಕೆ ಖರ್ಚು ವೆಚ್ಚಕ್ಕೂ ಸಹ ಹಣ ನೀಡುತ್ತಿಲ್ಲವಂತೆ. ಪ್ರತಿ ತಿಂಗಳು 50,000ರೂ.ಗಳನ್ನು ನೀಡುವುದಾಗಿ ಇಬ್ರಾಹಿಂ ಪಟೇಲ್ ಅವರು ಹೇಳಿದ್ದರಂತೆ. ಇರುವ ಬಾಡಿಗೆ ಮನೆಯನ್ನೂ ಸಹ ಖಾಲಿ ಮಾಡುವಂತೆ ಧಮಕಿ ಹಾಕುತ್ತಿದ್ದಾರೆ. ಮನೆ ಖರ್ಚು, ಮಕ್ಕಳ ಶಿಕ್ಷಣದ ಖರ್ಚು ತಾನು ಹೇಗೆ ನಿಭಾಯಿಸೋದು ಎಂದು ಮಾಲೀಯಾ ಸುಲ್ತಾನ್ ಅವರ ಚಿಂತೆಯಾಗಿದೆ.
ಒಂದೆಡೆ ಪತ್ನಿಯ ಆರೋಪ ಒಂದು ಕಡೆಯಾದರೆ, ಇನ್ನೊಂದು ಕಡೆ ಪತಿಯ ಆರೋಪವೇ ಬೇರೆ ಇದೆ. ಇಬ್ರಾಹಿಂ ಪಟೇಲ್ ಅವರು ಈ ಹಿಂದೆ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಜಿಲ್ಲಾ ಪಂಚಾಯಿತಿ ಸದಸ್ಯೆಯನ್ನಾಗಿ ಮಾಡಿದ್ದರು. ಜೊತೆಗೆ ಮಕ್ಕಳಿಗೆ ವೈದ್ಯಕೀಯ ಹಾಗೂ ಇಂಜನಿಯರಿಂಗ್ ಓದಿಸಿದ್ದಾರೆ. ಆದಾಗ್ಯೂ, ಕಳೆದ ಕೆಲ ತಿಂಗಳಿಂದ ಕುಟುಂಬದಲ್ಲಿ ವಿರಸ ಹೆಚ್ಚಾಗಿದೆ. ಅದಕ್ಕೆಲ್ಲ ಕಾರಣ ತನ್ನ ಪತ್ನಿ ಮಾಲಿಯಾ ಸುಲ್ತಾನ್ ಎನ್ನುವುದು ಇಬ್ರಾಹೀಂ ಪಟೇಲ್ ಅವರ ಆರೋಪ. ಸದ್ಯ ನ್ಯಾಯಕ್ಕಾಗಿ ಮಾಲಿಯಾ ಸುಲ್ತಾನ್ ಅವರು ರಾಘವೇಂದ್ರ ನಗರ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.