ಹೆತ್ತ ತಾಯಿ, ಹೊತ್ತ ಭೂಮಿಗೆ ಋಣಿಯಾಗಿರಬೇಕು: ಸೋಮಶೇಖರ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.3: ಹೆತ್ತ ತಾಯಿ, ಹೊತ್ತ ಭೂಮಿಗೆ ಎಂದಿಗೂ ನಾವು  ಋಣಿಯಾಗಿರಬೇಕೆಂದು ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ನಿನ್ನೆ ನಗರದ ಶ್ರೀ ಮೇಧ ಪದವಿ ಕಾಲೇಜಿನಲ್ಲಿ. ಕಾಲೇಜಿನ‌ಸಹಕಾರದೊಂದಿಗೆ
ಕನ್ನಡ ಸಾಹಿತ್ಯ ಪರಿಷತ್ತಿನ‌ ಜಿಲ್ಲಾ ಘಟಕ ಹಮ್ನಿಕೊಂಡಿದ್ದ  ದಿ. ರುಕ್ಮಿಣಮ್ಮ ಮತ್ತು ದಿ. ಚಂಗಾರೆಡ್ಡಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೆತ್ತ ತಾಯಿಯ ಒಡಲು ಮತ್ತು ನಾವು ಇರುವ ಭೂಮಿ ಸ್ವರ್ಗಕ್ಕೆ ಮಿಗಿಲಾಗಿದ್ದು. ಅದರ ರಕ್ಷಣೆಗೆ ನಾವು ಸದಾ ಕಂಕಣಬದ್ಧರಾಗಿ ಇರಬೇಕೆಂದರು.
ಉಪನ್ಯಾಸ ನೀಡಿದ ವೀರಶೈವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜಿ ಶ್ಯಾಮೂರ್ತಿ, ಕನ್ನಡ ನಾಡಿನ ಇತಿಹಾಸ ಮತ್ತು  ಸಾಹಿತ್ಯವನ್ನು ವಿದ್ಯಾರ್ಥಿಗಳು ಮನನ ಮಾಡಿಕೊಂಡು ಕನ್ನಡ ನಾಡು ನುಡಿ ಸೇವೆಗೆ ತೊಡಗಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ. ರಾಮಕಿರಣ್, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಮ್ಮ ಕಾಲೇಜು ಸದಾ ಪ್ರೋತ್ಸಾಹ ನೀಡುತ್ತದೆಂದರು.
ಕೆಎಂಎಫ್ ನ ಮಾಜಿ ನಿರ್ದೇಶಕ ವೀರಶೇಖರ ರೆಡ್ಡಿ, ಶ್ರೀಮೇಧಾ ಸಂಗೀತ ವಿದ್ಯಾಲಯದ ಕೆ ಸುನಿತಾ, ಕನ್ನಡ ಚೈತನ್ಯ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ  ಜ್ಯೋತಿ ಪ್ರಕಾಶ್, ನಿವೃತ್ತ ಪಿಎಸ್ಐ ಹುಸೇನ್ ಸಾಬ್, ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರ್ನೂರು ಕೊಟ್ರಪ್ಪ, ಬಿ.ಎಸ್. ಪ್ರಭುಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಭಾವಗೀತೆಗಳನ್ನು ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶ್ರೀ ಮೇಘ ಸಂಗೀತ ವಿದ್ಯಾಲಯದ ಕೆ. ಸುನಿತಾ ಪುರಂದರ ದಾಸರ ಕೀರ್ತನೆಯನ್ನು ಹಾಡಿದರು. ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಬಸವರಾಜ ಗದುಗಿನ ಸ್ವಾಗತ ಕೋರಿದರು. ಡಾ ವೈ. ಸುಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.