ಹೆತ್ತವರನ್ನು, ಗುರು -ಹಿರಿಯರನ್ನು ಗೌರವಿಸಬೇಕು

ರಾಯಚೂರು,ಮಾ.೧೧- ಹೆತ್ತ ತಂದೆ ತಾಯಿಯವರನ್ನು ದೇವರ ಸ್ವರೂಪದಲ್ಲಿ ಕಾಣಬೇಕು ಹಾಗೂ ಗುರು ಹಿರಿಯರನ್ನು ಗೌರವದಿಂದ ನೋಡಬೇಕು, ದೇವರನ್ನು ಬೇರೆ, ಬೇರೆ ಕಡೆ ಹುಡುಕುವುದಕ್ಕಿಂತ, ಹೆತ್ತ ತಂದೆ-ತಾಯಿಗಳಲ್ಲಿ ದೇವರನ್ನು ಕಾಣಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಂಕಣ್ಣರವರು ಇಂದು ನಗರದ ಲಲಿತಾ ಹಿರಿಯ ನಾಗರಿಕರ ಮನೆಯಲ್ಲಿ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಅರುಣಾ ವೈದ್ಯಾಧಿಕಾರಿಗಳು, ಪ್ರಾರ್ಥಮಿಕ ಆರೋಗ್ಯ ಕೇಂದ್ರ ಆಶಾಪೂರ್ ರಸ್ತೆ ರವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಒಂದು ವೃದ್ಧಾಶ್ರಮದಲ್ಲಿ ಅದು ಹಿರಿಯರ, ನಡುವೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು. ಮತ್ತು ಈ ಭಾಗದಲ್ಲಿ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ನಾವೆಲ್ಲರೂ ಸ್ಪಂದಿಸಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಜೆ.ಎಲ್ ಈರಣ್ಣರವರು ಮಾತನಾಡಿ, ಇಲ್ಲಿ ಮೂರು ತಲೆಮಾರುಗಳಿವೆ. ಪ್ರಸ್ತುತ ಈ ತಲೆಮಾರುಗಳ ಅಂತರದಲ್ಲಿ ಸಂಬಂಧಗಳು ಅಳಿಸಿ ಹೋಗುತ್ತಿವೆ. ಆದ್ದರಿಂದ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಹಿರಿಯರ, ವೃದ್ಧರ ಬಗೆ ಪ್ರೀತಿ ಗೌರವ ಬರಲು ಕಾರಣವಾಗುತ್ತದೆ ಎಂದರು. ಕಾಲೇಜಿನ ಐಕ್ಯುಎಸಿ ಸಂಯೋಜಕಿಯಾದ ಇಸ್ರತ್ ಬೇಗಂ ಮಾತನಾಡಿ, ತಂದೆ ತಾಯಿಯರನ್ನು ದೇವರೆನ್ನುವ ನಾಡಿನಲ್ಲಿ ನಾವಿದ್ದೇವೆ.
ಇಂಥ ನಾಡಿನಲ್ಲಿ ವೃದ್ಧಾಶ್ರಮ ಬೆಳೆಯುತ್ತಿರುವುದು ಬೇಸರದ ವಿಷಯ, ಆದರಿಂದ ಇಂದಿನ ಯುವಕರು ಮನೆಯಲ್ಲಿ ಹಿರಿಯರನ್ನ ಕಿರಿಯರನ್ನ ಗೌರವದಿಂದ ಕಾಣಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಲ್ಪನಾ ಚಾವ್ಲಾ ಮಹಿಳಾ ಕೇಂದ್ರದ ಸಂಯೋಜಿಕಿಯಾದ ವಿಜಯಶ್ರೀ ಪಾಟೀಲ್ ಹಾಗೂ ಲಲಿತ ಹಿರಿಯ ನಾಗರಿಕರ ಮನೆಯ ಮೇಲ್ವಿಚಾರಕರಾದ ಮರಿಯಪ್ಪ ನವರು ಮಾತನಾಡಿದರು.
ವೇದಿಕೆಯ ಮೇಲೆ ಉಪನ್ಯಾಸಕರಾದ ಮಹಾದೇವಪ್ಪ ಡಾ. ತಿಮ್ಮಪ್ಪ ವಡ್ಡೆಪಲ್ಲಿ, ಮಹಾದೇವಿ ದೈಹಿಕ ನಿರ್ದೇಶಕರಾದ ರಾಜಶೇಖರ, ವಿನೋದ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ವಿದ್ಯಾರ್ಥಿ ರೇಣುಕಾ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಮಹಾದೇವಿ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಉಪನ್ಯಾಸಕ ಮಹಾದೇವಪ್ಪ ನೆರವೇರಿಸಿದರೆ ತಿಮ್ಮಪ್ಪ ವಡ್ಡೆಪಲ್ಲಿ ವಂದಿಸಿದರು.