ಹೆಣ್ಣು ಸಮಾಜದ ಕಣ್ಣು  

ಸಂಜೆವಾಣಿ ವಾರ್ತೆ

 ಹಿರಿಯೂರು : ಏ. –   2  ಹೆಣ್ಣು ಸಮಾಜದ ಕಣ್ಣು ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದು ಸಮಾಜಮುಖಿ ಚಿಂತಕರಾದ ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿದರು. ನಗರದ ರೋಟರಿ ಸಭಾಭವನದಲ್ಲಿ ಶ್ರೀ ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತ ಕಲಾಸಂಘ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಮನೆಯಿಂದ ಹಿಡಿದು ಇಡೀ  ದೇಶ ಅಲ್ಲದೆ‌ ಪ್ರಪಂಚದ ವರೆಗೂ ಮಹಿಳೆಯರು ಸಮಾಜವನ್ನು ತಿದ್ದಿ ತಿಡಿ ಒಂದು ಹಂತಕ್ಕೆ ತರುವಲ್ಲಿ ತುಂಬಾ ಪರಿಶ್ರಮ ಇದೆ ಎಂದರು ಇಂದು ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇನ್ನೂ ಅಡಿಗೆ ಮನೆಗೆ ಸೀಮಿತವಾದಂತಹ ಹೆಣ್ಣು ಮಕ್ಕಳು ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಹೇಳಿದರು.ಏಕನಾಥೇಶ್ವರಿ   ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ಶ್ರೀಮತಿ ಮಂಜಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ರೋಟರಿ ಕ್ಲಬ್ ಅಧ್ಯಕ್ಷರಾದ ದೇವರಾಜ ಮೂರ್ತಿ, ಜಾನಪದ ಪರಿಷತ್ ಅಧ್ಯಕ್ಷರಾದ ಸಕ್ಕರ ರಂಗಸ್ವಾಮಿ, ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ನಿಜಲಿಂಗಪ್ಪ, ಸಂಗೀತ ವಿದ್ವಾನ್ ಆರ್ ತಿಪ್ಪೇಸ್ವಾಮಿ, ಸಂಗೀತ ವಿದುಷಿ ಜಗದಾಂಬ , ಬಿ ಕೆ ನಾಗಣ್ಣ ಆರ್ ಪ್ರಕಾಶ್ ಕುಮಾರ್, ಮಹಾಸ್ವಾಮಿ, ಮತ್ತಿತರು ಪಾಲ್ಗೊಂಡಿದ್ದರು. ಮಹಿಳಾ ಸಾಧಕಿಯರಾದ ಸುಲೋಚನಮ್ಮ, ಶಶಿಕಲಾ ರವಿಶಂಕರ್, ಶಶಿಪ್ರಕಾಶ್, ಗೀತಾ ರಾಧಾಕೃಷ್ಣ, ಎನ್. ರೇಖಾ, ಕೃಷ್ಣ ಕುಮಾರಿ, ವಿದುಷಿ ತ್ರಿವೇಣಿ, ನಾಗಸುಂದರಮ್ಮ ಮತ್ತು ಮಂಜಮ್ಮ ಇವರಿಗೆ ಸನ್ಮಾನಿಸಲಾಯಿತು.