ಹೆಣ್ಣು ಮಗು ಬೇಡವೆಂದು ಪ್ರಾಣವನ್ನೇ ಬಿಟ್ಟ ಗರ್ಭಿಣಿ..!

ಬೆಂಗಳೂರು, ನ.20-ಮೂರನೇ ಬಾರಿಗೂ ಹೆಣ್ಣು ಮಗುವಾಗುತ್ತೆ ಎಂದು ಗರ್ಭಿಣಿಯೊಬ್ಬಳು ಗರ್ಭ ನಿರೋಧಕ ಮಾತ್ರೆ ಸೇವಿಸಿ ಸಾವನ್ನಪ್ಪಿರುವ ದುರ್ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪೂಲವಾರಪಲ್ಲಿ ಗ್ರಾಮದ ನಿವಾಸಿ ಶ್ರೀಕನ್ಯಾ(27) ಮೃತ ಗರ್ಭಿಣಿ ಎಂದು ತಿಳಿದುಬಂದಿದೆ.

ಶ್ರೀಕನ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಆದರೆ, ಮತ್ತೊಂದು ಹೆಣ್ಣು ಮಗು ಬೇಡವೆಂದು ಕಳೆದ ಎರಡು‌ ದಿನಗಳ ಹಿಂದೆ ಗ್ರಾಮದ ಮನೆಯಲ್ಲಿಯೇ ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡಿದ್ದಾರೆ.

ಮಾತ್ರೆ ಸೇವನೆ ಬಳಿಕ ಗರ್ಭಣಿಗೆ ತೀವ್ರ ರಕ್ತಸ್ರಾವವಾಗಿತ್ತು. ಹಾಗಾಗಿ, ಶ್ರೀಕನ್ಯಾರನ್ನು ಕೂಡಲೇ ಬೆಂಗಳೂರಿನ‌ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಶ್ರೀಕನ್ಯಾ ಶುಕ್ರವಾರ ಮೃತಪಟ್ಟಿದ್ದಾರೆ.

ಆದರೆ, ಗರ್ಭಿಣಿ ಮಹಿಳೆಗೆ ಹೆಣ್ಣು ಮಗು ಬಗ್ಗೆ ಸುಳಿವು ಸಿಕ್ಕಿದಾದರೂ ಎನ್ನುವ ಪ್ರಶ್ನೆ ಮೂಡಿದ್ದು, ಭ್ರೂಣ ಲಿಂಗ ಪತ್ತೆಯ ದಂಧೆ ಮತ್ತೇ ಕಾರ್ಯ ನಿರ್ವಹಿಸುತ್ತಿದ್ದೀಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.