ಹೆಣ್ಣು ಮಗುಗೆ ೫ ಸಾವಿರ ಠೇವಣಿ ಬಾಂಡ್ ವಿತರಣೆ

ಸಿರವಾರ,ಮಾ.೧೨- ಜನಪ್ರತಿನಿಧಿಗಳು ಸಭೆ ಸಮಾರಂಭ, ಇನ್ನಿತರ ಕಾರ್ಯಕ್ರಮದಲ್ಲಿ ಆಶ್ವಾಸನೆಗಳ ನೀಡಿ ಮರೆತು ಬಿಡುತ್ತಾರೆ.
ಆದರೆ ಪಟ್ಟಣದ ಜೆಡಿಎಸ್ ಮುಖಂಡ ಹಾಗೂ ವಾಣೀಜ್ಯೋದ್ಯಮಿ ಜಿ.ಲೋಕರೆಡ್ಡಿ ಯವರು ಈ ಹಿಂದೆ ನೀಡಿದ ಆಶ್ವಾಸನೆಯಂತೆ ಹೆಣ್ಣು ಮಗುವಿನ ಹೆಸರಿಗೆ ಬಾಂಡ್‌ನ್ನು ನೀಡಿದರು.
ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಏಷ್ಟೇ ಜನ ಹೆಣ್ಣು ಮಕ್ಕಳಾದರೂ ೫ ಸಾವಿರ ಠೇವಣಿ ಇಡುವುದಾಗಿ ಹೇಳಿ ಆಸ್ಪತ್ರೆಗೆ ತೆರಳಿದರು. ಅಂದು ನಾಗರತ್ನ ಗಂಡ ನಾಗರಾಜ ಯಂಕನಗಡ್ಡೆ ಕ್ಯಾಂಪ್( ಕುಲಕರ್ಣಿ ಕಾಲೋನಿ) ದಂಪತಿಗೆ ಹೆಣ್ಣು ಮಗು ಜನಿಸಿತು. ಮಗುವನ್ನು ನೋಡಿ ಆರೋಗ್ಯವಿಚಾರಿಸಿ ಮಗುವಿನ ನಾಮಕರಣವಾದ ನಂತರ ತಿಳಿಸಿ ೫ ಸಾವಿರ ರೂ ಬಾಂಡ್ ವಿತರಣೆ ಮಾಡುವುದಾಗಿ ಹೇಳಿದರು.
ಅದರಂತೆ ಇಂದು ಬೆಳಗ್ಗೆ ಆ ಮಗುವಿನ ಹೆಸರಿನ ಬಾಂಡ್ ಹಾಗೂ ಬಟ್ಟೆಗಳನ್ನು ಒಂದು ಬಡಕುಟುಂಬದ ಹೆಣ್ಣು ಮಗುವಿಗೆ ಆರ್ಥಿಕವಾಗಿ ನೇರವಾಗಿದ್ದಾರೆ. ನಂತರ ಮಾತನಾಡಿದ ಅವರು ಹೆಣ್ಣು ಜನಿಸಿದರೆಂದರೆ ಅನೇಕರು ನಿರ್ಲಕ್ಷ, ಅಸಡ್ಯಭಾವನೆ ತೊರಿಸುತ್ತಾರೆ. ಕೆಲವರು ಭ್ರೂಣ ಹತ್ಯೆ ಮಾಡಿಸುತ್ತಾರೆ. ಹೆಣ್ಣು ಈ ಜಗದ ಕಣ್ಣು, ಸೃಷ್ಠಿಯ ಮೂಲ, ಹೆಣ್ಣು ಸಂಸಾರದ ಕಣ್ಣು, ಇಂದು ಅನೇಕ ರಂಗದಲ್ಲಿ ಅವರು ಸಾಧನೆ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಮಕ್ಕಳ ಹೆಸರಲ್ಲಿ ಪ್ರತಿ ವರ್ಷ ಐದು ಸಾವಿರ ಬ್ಯಾಂಕಲ್ಲಿ ಠೇವಣಿ ಮಾಡುವುದಾಗಿ ನಿರ್ಧಾರ ಕೈಗೊಂಡಿದೆ.
ಅಕ್ಟೋಬರ್ ೧೧ ರಂದು ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದಾಗ ಒಂದು ಹೆಣ್ಣು ಮಗು ಜನಿಸಿತು. ಅಂದೇ ೫ ಸಾವಿರ ರೂ ಚೇಕ್ ನೀಡುವುದಾಗಿ ಹೇಳಿದೆ ಅದರಂತೆ ಇಂದು ಬಾಂಡ್ ವಿತರಣೆ ಮಾಡಿರುವ ೧೮ ವರ್ಷಕ್ಕೆ ೪೦ ಸಾವಿರ ರೂ ಆಗುತ್ತದೆ. ಆಗ ಶೈಕ್ಷಣಿಕಕ್ಕೆ, ವಿವಾಹ ಕಾರ್ಯಕ್ರಮಕ್ಕೆ ಆಸರೆಯಾಗುತ್ತದೆ. ವಿಶ್ವ ಹೆಣ್ಣುಮಕ್ಕಳ ದಿನದಂದು ಸರ್ಕಾರಿ ಆಸ್ಪತ್ರೆಯಲ್ಲಿ ಏಷ್ಟೇ ಹೆಣ್ಣುಮಕ್ಜಳು ಜನಿಸಿದೂ ಅವರ ಹೆಸರಿಗೆ ಠೇವಣಿ ಇಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ನಾಗರಾಜ, ರಂಜಿತ್ ಕುಮಾರ, ಹೆಚ್.ಕೆ.ಕರಿಯಪ್ಪ ಸೇರಿದಂತೆ ಇನ್ನಿತರರು ಇದ್ದರು.