ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಿ- ಕೆ.ಅನಂತರಾಜ ನಾಯಕ

ಅರಕೇರಾ.ಜು.೧೭- ದೇಶದ ಜನ ಸಂಖ್ಯೆಯ ಅರ್ದದಷ್ಟು ಇರುವ ಮಹಿಳೆಯರನ್ನು ಯಾವುದೇ ಕಾರಣಕ್ಕೂ ಉದಾಸೀನದಿಂದ ಕಾಣಬಾರದು.
ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೇ ಇಡೀ ಕುಟುಂಬ ಹಾಗೂ ಹಳ್ಳಿಗಳು ಅಭಿವೃದ್ದಿಹೊಂದಲು ಸಾಧ್ಯವೆಂದು ಬಿಜೆಪಿ ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕ ಹೇಳಿದರು. ಅವರು ಗ್ರಾಮದಲ್ಲಿನ ಸರಕಾರಿ ಬಾಲಕಿಯರ ವಸತಿ ನೀಲಯದಲ್ಲಿ ೨೦೨೨-೨೩ ನೇಸಾಲಿನ ಮಕ್ಕಳಿಗೆ ನೋಟ್ ಪುಸಕ್ತ, ಗಣಿತ ಸಾಮಾಗ್ರಿಗಳು ಸೆರಿದಂತೆ ಪೆನ್ನ್‌ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಸರಕಾರ ನೀಡುತ್ತಿರುವ ಪ್ರೋತ್ಸಾಹ ಪ್ರಯೋಜನ ಪಡೆದುಕೊಂಡು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಂದೆ,ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದೆ ಬರುವಂತೆ ತಿಳಿಸಿದರು.
ವಿದ್ಯಾರ್ಧಿಗಳು ಪ್ರೌಢ ಶಿಕ್ಷಣ ಮತ್ತು ವಸತಿ ನಿಲಯದಲ್ಲಿ ಪ್ರವೇಶ ಪಡೆದುಕೊಂಡು ಬಳಿಕ ವಿದ್ಯಾರ್ಥಿಗಳ ಜೀವನದಲ್ಲಿ ಸಮಯ ವ್ಯರ್ಥಮಾಡದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ವಿಯಾಗಬೇಕೆಂದರು.
ವಸತಿ ನಿಯದಲ್ಲಿ ಪ್ರತಿ ದಿನ ನೀಡುವ ಉಪಹಾರ ಮತ್ತು ಊಟದ ಬಗ್ಗೆ ವಿದ್ಯಾರ್ಥಿಗಳ ಜೋತೆಯಲ್ಲಿ ಚರ್ಚಿಸಿ ನಂತರ ಊಟಮಾಡಿ ಸವಿರುಚಿ ನೋಡಿದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬೂದೇಪ್ಪಯಾದವ, ಗ್ರಾ.ಪಂ.ಸ ವಿರೇಶಬೇರಿ ವಸತಿ ನಿಲಯದ ಮೇಲ್ವಿಚಾರಕಾರದ ವಿಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.