ಹೆಣ್ಣು ಮಕ್ಕಳ ವಿವಿಧ ಬೇಡಿಕೆಗಳ ಪರಿಹಾರಕ್ಕೆ ಆಗ್ರಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.29: ಹೆಣ್ಣು ಮಕ್ಕಳ ಘನತೆ ಎತ್ತಿಹಿಡಿದ ಈಶ್ವರಚಂದ್ರ ವಿದ್ಯಾಸಾಗರ್‍ಅವರ 131ನೇ ಸ್ಮರಣ ದಿನದ ಸಂದರ್ಭದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ.ಐ.ಎಂ.ಎಸ್.ಎಸ್)ಯ ಜಿಲ್ಲಾ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷರಾದ ಈಶ್ವರಿಯವರು ಮಾಲಾರ್ಪಣೆ ಮಾಡಿದರು. ನಂತರ ಹಲವಾರು ಬೇಡಿಕೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗೆ ವಿಧವಾ, ವೃದ್ದಾಪ್ಯ ವೇತನಗಳು ಸರಿಯಾಗಿಸಿಗುತ್ತಿಲ್ಲ. ಸರಿಯಾದ ಆರೋಗ್ಯ ಸೌಲಭ್ಯಗಳು ದೊರಕದೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಹೆಣ್ಣುಮಕ್ಕಳು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೆಣ್ಣುಮಕ್ಕಳು ಮತ್ತು ಮಕ್ಕಳ ಮೇಲೆ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ.
ಜೊತೆಗೆ, ಕೇಂದ್ರ ಮತ್ತುರಾಜ್ಯ ಸರ್ಕಾರಗಳು ದಿನೇ ದಿನೇ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಮಾಡುತ್ತಿವೆ.
ಹೀಗೆಯೆ ಸಮಸ್ಯೆಗಳು ಸಾಕಷ್ಟಿವೆ.ಈ ನಿಟ್ಟಿನಲ್ಲಿಬೆಲೆಯೇರಿಕೆಯನ್ನುತಡೆಗಟ್ಟಿ ಮತ್ತುಜೀವನಾವಶ್ಯಕ ವಸ್ತುಗಳ ಮೇಲೆ ಹೇರಿರುವಜಿ.ಎಸ್.ಟಿಯನ್ನು ಹಿಂತೆಗೆದುಕೊಳ್ಳಿ,ಎಲ್.ಪಿ.ಜಿ ಸಿಲಿಂಡರ್ ದರಏರಿಕೆಯನ್ನುಕೈಬಿಡಿ,ವೃದ್ದಾಪ್ಯ, ವಿಧವಾ ಮತ್ತುಅಂಗವಿಕಲರ ವೇತನವನ್ನು ಹೆಚ್ಚಿಸಿ ಮತ್ತು ನಿಯಮಿತವಾಗಿತಲುಪುವಂತೆಕ್ರಮ ಕೈಗೊಳ್ಳಿ,ಅಶ್ಲೀಲ ಸಿನಿಮಾ ಸಾಹಿತ್ಯವನ್ನು ನಿಷೇಧಿಸಿ, ಅಶ್ಲೀಲ ಪೋಸ್ಟರ್‍ಗಳಿಗೆ ಕೊನೆಹಾಕಿ ಎಂಬ ಹಲವಾರು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಮ್ಮಅಧೀನದಲ್ಲಿ ಬರುವ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೂಡಲೇ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿಎಐಎಂಎಸ್‍ಎಸ್ ನ ಪದಾಧಿಕಾರಿಗಳಾದ ಈಶ್ವರಿ, ವಿಜಯಲಕ್ಷ್ಮೀ, ಗಿರಿಜಾ,ಪದ್ಮಾ, ವಿದ್ಯಾವತಿ, ರೇಖಾ ಉಪಸ್ಥಿತರಿದ್ದರು.