ಹೆಣ್ಣು ಮಕ್ಕಳು ಪ್ರಭಲ ಮನಸುಳ್ಳವರಾಗಬೇಕು –ರಜನಿ ಶೋಭಾಧಾಸ್


ಸಂಜೆವಾಣಿ ವಾರ್ತೆ
ಸಂಡೂರು :ನ:9: ಹೆಣ್ಣು ಮಕ್ಕಳು ಪ್ರಭಲ ಮನಸುಳ್ಳವರಾಗಬೇಕು ಕಾರಣ ಅವರು ಇಡೀ ಸಂಸಾರದ ಶಕ್ತಿಯಾಗಿ, ಮಗುವಿನ ತಾಯಿಯಾಗಿ ಆರೋಗ್ಯ ರಕ್ಷಕಿಯಾಗಿ ಕಾರ್ಯನಿರ್ವಹಿಸುವ ಮಹತ್ತರ ಅಂಶ ಅವಳಿಗಿದೆ ಎಂದು ಪ್ರಾಂಶುಪಾಲೆ ರೆಜಿನಾ ಶೋಭಾ ದಾಸ್ ತಿಳಿಸಿದರು.
ಅವರು ತಾಲೂಕಿನ ಒ.ಪಿ ಜಿಂದಾಲ್ ನಸಿರ್ಂಗ್ ಕಾಲೇಜಿನ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಮತ್ತು ನಸಿರ್ಂಗ್ ಕಾಲೇಜಿನ ಸಹಯೋಗದಲ್ಲಿ “ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ”ಯನ್ನು ಉದ್ಘಾಟಿಸಿ ಮಾತನಾಡಿ ಆತ್ಮಹತ್ಯೆ ಒಂದೇ ಎಲ್ಲದಕ್ಕೂ ಪರಿಹಾರ ವಲ್ಲ, ಮಹಿಳೆಯರು ಪ್ರಭಲವಾದ ಮನಸ್ಸನ್ನು ಹೊಂದಿರಬೇಕು, ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಅಂಕೆ ಸಂಖ್ಯೆ ಹೆಚ್ಚಾಗಿರುವುದು ತಿಳಿಯುತ್ತಿದೆ, ಇತ್ತಿಚಿನ ದಿನಗಳಲ್ಲಿ ಪುರುಷರು ಆತ್ಮಹತ್ಯೆಗೆ ಶರಣಾಗುವುದು ಖೇದದ ಸಂಗತಿ, ಈಸ ಬೇಕು-ಇದ್ದು ಜೈಯಿಸ ಬೇಕು, ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸನ್ನು ಹತೋಟಿಯಲ್ಲಿ ಇಟ್ಟು ಕೊಳ್ಳಬೇಕು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮಾತನಾಡಿ ಅಂದಾಜು 8 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡ ಸಾವಿನ ಪ್ರಮಾಣ ಇದ್ದು ಒಂದು ಲಕ್ಷ ಜನರಲ್ಲಿ ಹತ್ತರಷ್ಟು ಜನರು ಆತ್ಮಹತ್ಯೆ ಪ್ರಯತ್ನಗಳನ್ನು ಮಾಡುವರು, ರ್ಯಾಗಿಂಗ್,ಸಾಲ,ರೈತ,ಲವ್,ಅಂತರ್ಜಾತಿ ವಿವಾಹ,ವಿಚ್ಛೇದನ, ಸಂತಾನ ರಹಿತ,ಕೌಟುಂಬಿಕ ಕಾರಣಗಳು,ವರದಕ್ಷಿಣೆ ಕಿರುಕುಳ,ಅನೈತಿಕ ಸಂಬಂಧ, ಅನಾರೋಗ್ಯ, ಖಿನ್ನತೆ,ಜಿಗುಪ್ಸೆ,ಗುರಿ ಸಾಧನೆ ವಿಫಲ,ಲೈಂಗಿಕ ಕಿರುಕುಳ,ಅಪಮಾನ,ರೇಪ್,ಬಡತನ,ನಿರುದ್ಯೋಗ ಮತ್ತು ಕುಟುಂಬದಲ್ಲಿ ಆತ್ಮಹತ್ಯೆ ಇತಿಹಾಸ ಹೊಮದಿದ ಹಿನ್ನೆಲೆಯಿಂದ ಆತ್ಮಹತ್ಯೆಗಳು ಆಗುತ್ತವೆ, ಇವೆಲ್ಲವಕ್ಕೂ ಖಿನ್ನತೆ, ಮಾನಸಿಕ ತೊದರೆಗಳೇ ಕಾರಣ ಇದಕ್ಕೆಲ್ಲ ಸೂಕ್ತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆಗೆ ಒಳಗಾದರೆ ಆತ್ಮಹತ್ಯೆ ಗಳನ್ನು ತಡೆಯಬಹುದಾಗಿದೆ, ನಾವೆಲ್ಲ ಮೆಡಿಕಲ್ ಫೀಲ್ಡ್ ನಲ್ಲಿ ಇರುವುದರಿಂದ ಮಾನಸಿಕ ತೊಂದರೆ ಇರುವರನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸೋಣ, 14416 ಟೆಲಿ ಮನಸ್ ಗೆ ಉಚಿತ ಕರೆ ಮಾಡಿ ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆಯಬಹುದು, ಈ ಎಲ್ಲಾ ಪ್ರಯತ್ನಗಳಿಂದ ಆತ್ಮಹತ್ಯೆ ತಡಗಟ್ಟಿ ಉತ್ತಮ ಸಮಾಜ ರೂಪಿಸಲು ಸರ್ವರೂ ಕೈಜೋಡಿಸೋಣ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಮಾತನಾಡಿ ಸ್ನೇಹಾ ಕ್ಲಿನಿಕ್ ನಲ್ಲಿ ಆಪ್ತ ಸಮಾಲೋಚನೆ ಮಾಡಲಾಗುತ್ತದೆ ಸಮುದಾಯಲ್ಲಿ ಅಂತವರನ್ನು ಕಂಡಾಗ ಆಸ್ಪತ್ರೆಗೆ ಕಳಿಸಿ ಕೊಡಲು ಸೂಚಿಸಿದರು,
 ಕಾರ್ಯಕ್ರಮವನ್ನು ಸಹ ಪ್ರಾಧ್ಯಾಪಕಿ ಪ್ರಮೀಳಾ ನಡೆಸಿಕೊಟ್ಟರು, ಭಾಗ್ಯ ಶ್ರೀ ಮತ್ತು ನೇತ್ರ ಪ್ರಾರ್ಥನೆ ಹಾಡಿದರು,
 ಈ ಸಂದರ್ಭದಲ್ಲಿ ನಸಿರ್ಂಗ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ವಿಂದ್ಯಾ, ರಾಜೇಶ್ವರಿ, ಕೀರ್ತಿ ವಿದ್ಯಾರ್ಥಿಗಳಾದ ಭುವನೇಶ್ವರಿ, ಜ್ಯೋತಿ, ಪಾರ್ವತಿ,ಕೃತಿಕಾ, ತಿಪ್ಪಮ್ಮ, ಶಿಲ್ಪಾ, ಚೈತ್ರ, ತೇಜಸ್ವಿನಿ, ಮಮತಾ,ಅನುಷಾ, ಪಲ್ಲವಿ, ಶ್ವೇತಾ, ಸುಜಾತ, ಮೊಹಮ್ಮದ್ ಮತ್ತು ಹರ್ಷವರ್ಧನ್ ಇತರರು ಹಾಜರಿದ್ದರು

One attachment • Scanned by Gmail