
ಶಿವಮೊಗ್ಗ. ಏ.೨; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಅಶೋಕ ಸಂಜೀವಿನ ಆಸ್ಪತ್ರೆಯ ಸಹಯೋಗದೊಂದಿಗೆ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಆಚರಿಸಲಾಯಿತು. ಡಾ.ಸೋನಿಯಾ ಅಮಿತ್ ಕುಮಾರ ಅವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ನಂತರ ಮಾತನಾಡುತ್ತಾ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಮುಕ್ತ ಅವಕಾಶಗಳನ್ನು ನೀಡಲಾಗುತ್ತಿದೆ, ಸಾಹಿತ್ಯ, ಕಲೆ, ಕ್ರೀಡೆ, ಆಧ್ಯಾತ್ಮಾ, ತಾಂತ್ರಿಕವಾಗಿ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಮುಂದು ವರೆದಿದ್ದಾರೆ ಮತ್ತು ಮಿಂಚುತಿದ್ದಾರೆ. ಅಲ್ಲದೆ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಿ ಜ್ಯೋತಿಯಾಗಿ ಪ್ರಜ್ವಲಿಸಿ ತನ್ನತನವನ್ನು ಮೇರಿಯುವುದೇ ಸ್ತಿçÃಯಾಗಿ ಹೊರಹೊಮ್ಮಿದ್ದಾಳೆ ಎಂದು ನುಡಿದರು. ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತಿç ಯವರು ಹಾಗೂ ಜಿಲ್ಲಾ ಸ್ಕೌಟ್ ಆಯುಕ್ತರಾದ ಕೆ.ಪಿ.ಬಿಂದುಕುಮಾರ ಮಾತನಾಡುತ್ತಾ ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಕೋರಿ ವೀರಮಹಿಳೆಯರ ಉದಾಹರಣೆ ತೆಗೆದುಕೊಂಡು ಅವರಂತೆ ಮುಂದುವರೆಯಲು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ರವರು ಮಾತನಾಡುತ್ತಾ ಒಂದು ವಾಕ್ಯ ಅರ್ಥಪೂರ್ಣ ವಾಗಲು ಪದಗಳು ಎಷ್ಟು ಮುಖ್ಯವೋ, ಲೇಖನಾ ಚಿಹ್ನೆಗಳು ಅಷ್ಟೇ ಮುಖ್ಯ. ಪುರುಷರು ಪದಗಳಾದರೆ, ಮಹಿಳೆಯರು ಲೇಖನ ಚಿಹ್ನೆಯಂತೆ. ನಮ್ಮ ಜೀವನ ಅರ್ಥಪೂರ್ಣವಾಗಬೇಕಾದರೆ, ಪುರುಷರು- ಸ್ತಿçಯರು ಸಮಾನ ರಂತೆ ಕಾಣಬೇಕು. ಮಹಿಳೆಯರ ಅನುಕೂಲಕ್ಕಾಗಿ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ, ಆ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ತಿç-ಪುರುಷ ಸಮಾನತೆಯ ಕುರಿತು ಹೆಚ್ಚಿನ ಗಮನ ಕೊಡಬೇಕು. ಮಹಿಳೆಯರ ರಕ್ಷಣೆ ಅತ್ಯವಶ್ಯಕ, ಕಾನೂನು ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಅರಿವು ಅವಶ್ಯಕ. ಹೆಣ್ಣು ಮಕ್ಕಳು ದೌರ್ಜನ್ಯ ಮುಕ್ತವಾಗಬೇಕು. ಅರಿವಿನ ಶಿಕ್ಷಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅನಿವಾರ್ಯ ಎಂದರು ಈಗಿನ ಕಾಲದ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ, ಸಾಧಕ ಮಹಿಳೆಯರು ಎಲ್ಲೆಲ್ಲೂ ಇದ್ದರೆ ಅವರನ್ನು ಗುರುತಿಸಬೇಕು ಹಾಗೂ ಗೌರವಿಸಬೇಕು ಎಂದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್‌ಎಲ್.ಟಿ ರವರು ನಿರೂಪಣೆಯನ್ನು ಹಾಗೂ ಪ್ರಾಸ್ತಾವಿಕ ನುಡಿಯನ್ನು ನುಡಿದರು ಸ್ವಾಗತವನ್ನು ಲಕ್ಷಿ÷್ಮà ರಾವಿ ಕೋರಿದರು, ವಂದನೆಯನ್ನು ಹೇಮಲತಾ ನಿರ್ವಹಿಸಿದರು, ಈ ಸಮಾರಂಭಕ್ಕೆ ಜಿಲ್ಲಾ ಖಜಾಂಚಿ ಚೂಡಾಮಣಿ ಪವಾರ, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಪಿ.ಆರ್.ಒ ಶ್ರೀ ವಿಜಯಕುಮಾರ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎ.ವಿ.ರಾಜೇಶ, ಹಿರಿಯ ಸ್ಕೌರ‍್ಸ್ ಗೈರ‍್ಸ್ಗಳು ನವಸಂಜೀವಿನಿಯ ಅಶೋಕಸಂಜೀವಿನ ಆಸ್ಪತ್ರೆಯ ಶಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.