ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ತರಬೇತಿ

ಬೀದರ:ಫೆ.21:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ ಶಿಶು ಅಭಿವೃದ್ಧಿ ಯೋಜನೆ ಬೀದರ, ತಾಲೂಕು ಪಂಚಾಯತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೆÇೀಲಿಸ್ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಮನ್ನಳ್ಳಿ ವಲಯದ ಸರಿಕಾರಿ ಪ್ರೌಢ ಶಾಲೆ ಮನ್ನಳ್ಳಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಕಾರ್ಯಕ್ರಮ ಯೋಜನೆಯಡಿ “ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ತರಬೇತಿ ಹಾಗೂ ಶಾಲೆ ತೊರೆದ ಹೆಣ್ಣು ಮಕ್ಕಳನ್ನು ಮರಳಿ ತರುವ ಕಾರ್ಯಕ್ರಮ”ವನ್ನು ಆಯೋಜನೆ ಮಾಡಲಾಗಿರುತ್ತದೆ. ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದ ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಗುರುರಾಜ ಜಿಲ್ಲಾ ನಿರೂಫಣಾಧಿಕಾರಿಗಳು, ಮಹಿಲಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ ಅಧ್ಯಕ್ಷಕತೆ ಶ್ರೀಯುತ ವಿಜಯಕುಮಾರ ಮಾನ್ಯ ಮುಖ್ಯೋಪಾಧ್ಯಾರು ಸರಕಾರಿ ಪ್ರೌಢ ಶಾಲೆ ಮನ್ನಳ್ಳಿ, ಮುಖ್ಯ ಅಥಿತಿಗಳು ಶ್ರೀಮತಿ ಕಾಶಿಬಾಯಿ ಮಾನ್ಯ ಅಧ್ಯಕ್ಷಕರು, ಗ್ರಾಮ ಪಂಚಾಯತ ಮನ್ನಳ್ಳಿ, ಶ್ರೀಮತಿ ಕನಕರಾಯ ಮಾನ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ ಮನ್ನಳ್ಳಿ, ಶ್ರೀಯುತ ಸೂರ್ಯಕಾಂತ ನೌಬಾದೆ ಮಾನ್ಯ ವೈಧ್ಯಾಧಿಖಾರಿಗಳು ಆರೋಗ್ಯ ಉಪ ಕೇಂದ್ರ ಮನ್ನಳ್ಳಿ ಮತ್ತು ಶ್ರೀಯುತ ಸುಕಾನಂದ ಸಿಂಗೆ ಮಾನ್ಯ ಆರಕ್ಷಕ ಉಪ ನಿರೀಕ್ಷಕರು, ಮನ್ನಳ್ಳಿ ಪೆÇೀಲಿಸ್ ಠಾಣೆ, ಅಥಿತಿಗಳಾಗಿ ಗ್ರಾಮ ಪಂಚಾಯತ ಸದಸ್ಯರುಗಳಾದ ಶ್ರೀಮತಿ ನಿರ್ಮಲಾ ಬಸವರಾಜ, ಶ್ರೀಯುತ ಪೃಥ್ವಿರಾಜ ಶಾಂತಕುಮಾರ, ಶ್ರೀಮತಿ ರುಕ್ಮಿಣಿ ಪಂಢರಿ ಹಾಗೂ ಶ್ರೀಯುತ ರಾಜಕುಮಾರ ಬಸವಣಪ್ಪಾ ಮಡಕಿ ಹಾಜರಿದ್ದರು,
ಶ್ರೀಮತಿ ಶಾರದಾ ಎನ್ ಕಲ್ಮಲಕರ್ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬೀದರ ರವರು
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಕಾರ್ಯಕ್ರಮ ಯೋಜನೆಯಡಿ “ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ತರಬೇತಿ ಹಾಗೂ ಶಾಲೆ ತೊರೆದ ಹೆಣ್ಣು ಮಕ್ಕಳನ್ನು ಮರಳಿ ತರುವ ಕಾರ್ಯಕ್ರಮ”ದಲ್ಲಿ ಹೆಣ್ಣು ಮಕ್ಕಳ ತಮ್ಮಿಂದ ತಾವು ರಕ್ಷಣೆ ಮಾಡಿಕೊಳ್ಳುವ ಕುರಿತು ತಿಳಿ ಹೇಳಿದರು, ಅದೇ ರೀತಿ ಬಾಲ್ಯವಿವಾಹ, ಹೆಣ್ಣು ಮಕ್ಕಳ ಭ್ರೂಣ ಹತ್ಯ, ಹೆಣ್ಣು ಮಕ್ಕಳ ಕುರಿತು ತಿಳಿಸಿದರು.
ಅಧ್ಯಕ್ಷಕತೆವಹಿಸಿದ ಶ್ರೀಯುತ ವಿಜಯಕುಮಾರ ಮಾನ್ಯ ಮುಖ್ಯೋಪಾಧ್ಯಾಯರು, ಸರಕಾರಿ ಪ್ರೌಢ ಶಾಲೆ ಮನ್ನಳ್ಳಿ ಇವರು ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಯ ಕುರಿತು ವಿವಧ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿದ್ದರೂ ಹೆಣ್ಣು ಮಗು ಬಹುಮುಖಿ ಸವಾಲುಗಳನ್ನು ಎದುರಿಸುತ್ತಲೇ ಇದೆ ಸಾಂಸ್ಕøತಿಕ, ಸಾಮಾಜಿಕ ಮತ್ತು ಆರ್ಥಿಕ ಇನ್ನು ಹೆಚ್ಚು ಮುಂದುವರಿಯುದು ಅತೀ ಮುಖ್ಯ ಎಂದು ಹೇಳಿದರು.
ಅದೇ ರೀತಿ ಮನ್ನಳ್ಳಿ ಪೆÇೀಲಿಸ್ ಠಾಣೆಯ ಸಿಬ್ಬಂದಿಯವರಾದ ಶ್ರೀಯುತ ದಯಾನಂದ ರವರು ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶ್ರೀಮತಿ ಸುರೇಖಾ ರವರು ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಕುರಿತು ಶಾಲಾ ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿಯವರಾದ ಶ್ರೀಮತಿ ಭಾಗ್ಯವತಿ ಸ್ವಾಗತ ಮಾಡಿದರು, ಶ್ರೀಮತಿ ಅಂಬಿಕಾ ಅಂಗನವಾಡಿ ಕಾರ್ಯಕರ್ತೆ ನಿರೂಪಣೆ ಮಾಡಿದರೆ ವಂದನಾರ್ಪಣೆಯನ್ನು ಶ್ರೀಮತಿ ಮಂಗಲಾ ಅಂಗನವಾಡಿ ಕಾರ್ಯಕರ್ತೆ ನೇರವೆರಿಸಿದರು. ಶಿಶು ಅಭಿವೃದ್ಧಿ ಯೋಜನೆಯ ಶ್ರೀಮತಿ ಪ್ರೇಮಲತಾ, ಶ್ರೀಮತಿ ಸಾಮುಕಿಬಾಯಿ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದರು.