
ಗದಗ, ಮಾ. 14 : ಮಹಿಳೆಯರು ಸಂಕುಚಿತ ಮನೋಭಾವ ತೊರೆದು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಬೇಕೆಂದು ನಿವೃತ್ತ ಪ್ರಾಚಾರ್ಯರಾದ ಶ್ರೀಮತಿ ಪ್ರೇಮಾ ಹಿರೇಮಠ ಅಭಿಪ್ರಾಯಪಟ್ಟರು.
ಅವರು ಗದುಗಿನ ಅಕ್ಕನ ಬಳಗದಲ್ಲಿ ಎರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.
ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು. ಪಾಲಕ ಪೋಷಕರು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಅಂದಾಗ ಅವರ ಬದುಕು ಸುಂದರವಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಮಹಿಳೆಯರು ಬಿಡುವಿನ ವೇಳೆಯಲ್ಲಿ ಉತ್ತಮ ಹವ್ಯಾಸಗಳನ್ನು ರೂಢೀಸಿಕೊಳ್ಳಬೇಕು. ಸ್ವಯಂ ಉದ್ಯೋಗಕ್ಕೆ ಪೂರಕವಾಗುವ ಕಲೆಗಳನ್ನು, ಮನೋಲ್ಲಾಸಕ್ಕಾಗಿ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕøತಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಆರೋಗ್ಯ ದೃಷ್ಠಿಯಿಂದ ಲಘು ವ್ಯಾಯಾಮ, ವಾಯುವಿಹಾರ, ಯೋಗ, ಧ್ಯಾನಗಳಲ್ಲಿ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯನಿ ಶಾರದಾ ಕಾತರಕಿ ಅವರು ಮಹಿಳಾ ಜಾಗೃತಿ ಕುರಿತು ಉಪನ್ಯಾಸ ನೀಡುತ್ತ ಆಧುನಿಕ ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಎಲ್ಲದಕ್ಕೂ ಶಿಕ್ಷಣವೊಂದೇ ಸಾಧನೆಗೆ ಕಾರಣವಾಗಿದ್ದು ಆದ್ದರಿಂದ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಣ ಅವಶ್ಯ. ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.
ಅಕ್ಕನ ಬಳಗದ ಅಧ್ಯಕ್ಷೆ ಸುವರ್ಣಾ ಹೊಸಂಗಡಿ ಸ್ವಾಗತಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಅಕ್ಕನ ಬಳಗದ ಸದಸ್ಯನಿಯರಿಗೆ ಎರ್ಪಡಿಸಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಶಾರದಾ ಬಮ್ಮಸಾಗರ, ನಿರ್ಮಲಾ ಹುಬ್ಬಳ್ಳಿಮಠ, ಗಿರಿಜಾ ನಾಲತ್ವಾಡಮಠ ವಿಜೇತರಾಗಿ ಬಹುಮಾನ ಪಡೆದುಕೊಂಡರು. ಸುಜಾತಾ ಮಾನ್ವಿ ಮಹಿಳಾ ದಿನಾಚರಣೆ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಖಜಾಂಚಿ ಜಯಶ್ರೀ ಹುಬ್ಬಳ್ಳಿ, ಟ್ರಸ್ಟ ಅಧ್ಯಕ್ಷೆ ಉಷಾ ದಢೂತಿ, ಭಕ್ತಿ ಸೇವೆ ವಹಿಸಿಕೊಂಡಿದ್ದ ಶಶಿಕಲಾ ಹಿರೇಮಠ ಉಪಸ್ಥಿತರಿದ್ದರು. ರೇಣುಕಾ ಅಮಾತ್ಯ ಪ್ರಾರ್ಥಿಸಿದರು ಶೈಲಜಾ ಕವಲೂರ ನಿರೂಪಿಸಿದರು ಕೊನೆಗೆ ಅಕ್ಕನ ಬಳಗದ ಕಾರ್ಯದರ್ಶಿ ಶಿವಲೀಲಾ ಅಕ್ಕಿ ವಂದಿಸಿದರು.
ಸಮಾರಂಭದಲ್ಲಿ ಮೀನಾಕ್ಷಿ ಸಜ್ಜನರ, ಪಾರ್ವತಿ ಮಾಳೇಕೊಪ್ಪಮಠ, ಬೀನಾ ಮಾನ್ವಿ, ಶಾಂತಾ ಸಂಕನೂರ, ಮಂಜುಳಾ ತಂಗೋಡಿ, ಶಿವಲೀಲಾ ಕುರಡಗಿ, ಜಯಶ್ರೀ ಪಾಟೀಲ, ಸುಜಾತಾ ಗುಡಿಮನಿ, ಸುರೇಖಾ ಪಿಳ್ಳೆ, ವಿದ್ಯಾ ಹುಲಬನ್ನಿ, ಲಲಿತಾ ಇಂಗಳಳ್ಳಿ, ಪ್ರಭಾ ಜುಕ್ತಿಮಠ, ಸಂಧ್ಯಾ ಕೋಟಿ, ಸುಶೀಲಾ ಕೋಟಿ, ಕವಿತಾ ಹಿರೇಮಠ, ಮಂಗಳಾ ಗೋಡಚಿ, ಸುನೀತಾ ಪಾಟೀಲ, ಜಯಲಕ್ಷ್ಮೀ ಗುಗ್ಗರಿ, ದಾಕ್ಷಾಯಣಿ ಗುಗ್ಗರಿ, ಸವಿತಾ ಮಾನ್ವಿ, ಪುಷ್ಪಾದೇವಿ ಬಳ್ಳಾರಿ, ಸುವರ್ಣ ವಸ್ತ್ರದ, ಪಾರ್ವತಿ ಶಾಬಾದಿಮಠ, ಮಂಜುಳಾ ಹುಬಳೀಮಠ, ಶಾಂತಾ ಗೌಡರ, ವಿಜಯಾ ಹಳ್ಳಿಕೇರಿ, ಪವಿತ್ರಾ ಬಿರಾದಾರ, ಪ್ರೇಮಾ ಮೇಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.