ಹೆಣ್ಣು ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಅರಿವು ಇರಬೇಕು.

ಚಿತ್ರದುರ್ಗ. ಅ.೧೮;  ಹೆಣ್ಣು ಮಕ್ಕಳಲ್ಲಿ ಸ್ವಚ್ಛತೆಯ ಅರಿವಿರಬೇಕು, ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಜ್ಞಾನವನ್ನು ಹೆಚ್ಚಿಸಿ ಅವರು ಸ್ವಚ್ಛತೆ ಬಗ್ಗೆ ಗಮನ ಹರಿಸಿದಾಗ ಮಾತ್ರ ಮುಂದಿನ ಜನಾಂಗ ಆರೋಗ್ಯಪೂರ್ಣವಾಗಿರುತ್ತದೆ. ಬಡ ಮಹಿಳೆಯರಿಗೆ ಮತ್ತು ಅವಿದ್ಯಾವಂತ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಉಪಯೋಗಿಸುವುದರ ಬಗ್ಗೆ ಮತ್ತು ಅದರ ವಿಸರ್ಜನೆ ಬಗ್ಗೆ ಜ್ಞಾನ ತುಂಬಬೇಕು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ನಾಗರತ್ನ ಬದ್ರಿನಾಥ್ ನುಡಿದರು.ಅವರು ನಗರದ ತಮಟಕಲ್ಲು ರಸ್ತೆಯಲ್ಲಿರುವ ಸುಡುಗಾಡು ಸಿದ್ದರ ಕಾಲೋನಿಯಲ್ಲಿ ಇನ್ನರ್ ವೀಲ್ ಕ್ಲಬ್ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ “ಮಹಿಳೆಯರು ಮತ್ತು ಸ್ವಚ್ಛತೆ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಲಂನಲ್ಲಿ ವಾಸ ಮಾಡುತ್ತಿರುವ ಜನರಿಗೆ ವಿದ್ಯುತ್ ಕೊರತೆ ಇರುವುದರಿಂದ ಅವರಿಗೆ ವಿದ್ಯುಚ್ಛಕ್ತಿಯ ವ್ಯವಸ್ಥೆ ಕಲ್ಪಿಸಿಕೊಡಬೇಕಾಗುತ್ತದೆ, ಸಣ್ಣ ಸೋಲಾರ ದೀಪಗಳನ್ನಾದರೂ ನೀಡಬೇಕಾಗುತ್ತದೆ, ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕಾಗುತ್ತದೆ, ಮಕ್ಕಳು ಹದಿನಾರು ವರ್ಷ ತುಂಬುವುದರೊಳಗಾಗಿ ಅವರಿಗೆ ಎಲ್ಲಾ ದೇಹದ ಆರೋಗ್ಯದ ಬಗ್ಗೆ ತಿಳಿವಳಿಕೆಯನ್ನು ಮೂಡಿಸಬೇಕಾಗಿದೆ ಎಂದರು. ಸ್ತಿçÃಶಕ್ತಿ ಚೇರ್ಮನ್ ಭಾಗ್ಯ ಬ್ರಹ್ಮಾನಂದಗುಪ್ತಮಾತನಾಡಿ ಸ್ಲಂಗಳಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಶೌಚಾಲಯದ ಕೊರತೆ ಇರುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಶೀಘ್ರವಾಗಿ ನಾವು ಎಲ್ಲಾ ಮಹಿಳೆಯರಿಗೂ ಶೌಚಾಲಯ ಒದಗಿಸಿ, ಅವರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಬೇಕಾಗಿದೆ, ಸ್ಲಮ್ ಗಳಲ್ಲಿ ನಡೆಯುವ ಇಂಥ ಕಾರ್ಯಕ್ರಮಗಳು ಅವರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ, ಇನ್ನು ಹೆಚ್ಚಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.ಕಾರ್ಯದರ್ಶಿ ಸುಜಾತಾ ಪ್ರಕಾಶ್ ಮಾತನಾಡಿ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಅವರ ಆರೋಗ್ಯಕ್ಕೆ ಅನುಕೂಲಕರವಾದ ಎಲ್ಲಾ ಪೌಷ್ಟಿಕಾಂಶಗಳ ಬಗ್ಗೆ, ಸ್ವಚ್ಚತೆಯ ಬಗ್ಗೆ ಹಾಗೂ ಅವರ ಬದುಕಿಗೆ ಆಸರೆ ನೀಡುವಂತಹ ಗುಡಿ ಕೈಗಾರಿಕೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಅವರಿಗೆ ದುಡಿಮೆಗೆ ಆಸ್ಪದ ಕಲ್ಪಿಸಬೇಕು, ಹಾಗೂ ಗರ್ಭಿಣಿ ಸ್ತಿçÃಯರಿಗೆ ಪೌಷ್ಟಿಕಾಂಶಗಳ ಬಗ್ಗೆ ಅರಿವು ಮೂಡಿಸಬೇಕು. ಆಶಾ ಕಾರ್ಯಕರ್ತರು ಸ್ಲಂಗಳಿಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಬೇಕಾದ ಮಾಹಿತಿಗಳನ್ನು ನೀಡಬೇಕು. ಸೊಳ್ಳೆಗಳ ಬಗ್ಗೆ ಅವರು ವಾಸ ಮಾಡುವ ಸ್ಥಳದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ. ಎಲ್ಲಾ ಮಹಿಳೆಯರು ದಿನನಿತ್ಯ ಹೊರಗಡೆ ಕೆಲಸಕ್ಕೆ ಹೋಗುತ್ತಿರುವುದರಿಂದ ಮಕ್ಕಳ ಬಗ್ಗೆ ಅವರಿಗೆ ಕಾಳಜಿ ವಹಿಸಲು ಸಮಯದ ಅಭಾವ ವಿರುತ್ತದೆ ಅಂಥ ಶಾಲಾ ಮಕ್ಕಳಿಗೆ ಅಂಗನವಾಡಿಗಳ ಸೌಲಭ್ಯಗಳನ್ನು ಕಲ್ಪಿಸಿ ಅವರ ಹೆಚ್ಚಿನ ಗುಣಮಟ್ಟದ ಶಿಕ್ಷಣಕ್ಕೆ ಒಳಪಡಿಸಬೇಕಾಗಿದೆ ಎಂದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ಮಾತನಾಡುತ್ತಾ ಪ್ಲಾಸ್ಟಿಕ್ ಬಳಕೆಯಿಂದ ಸ್ಲಂಗಳ ಸುತ್ತಮುತ್ತ ಗಲೀಜು ವಾತಾವರಣ ನಿರ್ಮಾಣವಾಗಿದೆ, ಅವರಿಗೆ ಪರಿಸರ ಸ್ನೇಹಿ ವಸ್ತುಗಳ ಬಳಕೆ ಬಗ್ಗೆ ಜ್ಞಾನ ಹೆಚ್ಚಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಹ್ಯಾಂಡ್ ವಾಶ್, ಸಾಬೂನು, ಸ್ಯಾನಿಟರಿ ನ್ಯಾಪ್ಕಿನ್, ಬಿಸ್ಕತ್, ಮಕ್ಕಳಿಗೆ ಚಪ್ಪಲಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಉಮಾ ರಾಮಾಂಜನೇಯ, ಬ್ರಹ್ಮಾನಂದಗುಪ್ತ, ಸುಮಾ ಅನಂತ್, ಎಚ್. ಎಸ್. ರಚನ, ಎಚ್. ಎಸ್. ಪ್ರೇರಣಾ ಭಾಗವಹಿಸಿದ್ದರು.