ಹೆಣ್ಣು ಮಕ್ಕಳನ್ನು ಗೌರವಿಸಿದಲ್ಲಿ ದೇವತೆಗಳ ವಾಸ: ರೂಪಾ ಪಾಟೀಲ್

ಬೀದರ:ಮಾ.31: ಡಾ|| ಬಿ ಆರ್ ಅಂಬೆಡ್ಕರ ಕಲ್ಚರಲ್ ವೆಲಫರ ಸೊಸೈಟಿ ಬೀದರ ವತಿಯಿಂದ ಆಸ್ತಾ ಉದ್ಯೋಗಸ್ಥ ವಿಕಲಚೇತನ ಮಹಿಳೆ ವಿದ್ಯಾರ್ಧಿನಿಯರ ಹಾಗೂ ತರಬೇತಿದಾರ ಮತ್ತು ವಿಶೇಷ ಚೇತನ ಮಕ್ಕಳೊಂದಿಗೆ ಅಂತರ ರಾಷ್ಟ್ರೀಯ ಮಹಿಳಾ ದಿನಾಚರನೆ ಆಚರಿಸಲಾಯಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಷತ್ತ ಮಹಿಳಾ ಘಟಕದ ಅಧ್ಯಕ್ಷರಾದ ರೂಪಾ ಪಾಟೀಲ್ ನೇರವೆರಿಸಿದರು. ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಡಿದ ಅವರು ಎಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳವಾಸ ವಾಗಿರುತ್ತದೆ, ಹೆಣ್ಣು ಗಂಡು ಎನ್ನದೆ ಸಮಾನ ಶಿಕ್ಷಣ ಕಲ್ಪಿಸಿ ಕೋಡಬೇಕು, ಹೆಣ್ಣು ಮಕ್ಕಳು ಮೊದಲು ನಾಲ್ಕು ಗೊಡೆಗಳ ಮಧ್ಯದಲ್ಲಿ ವಾಸವಾಗಿದ್ದರು ಆದರೆ ಇಂದು ಎಲ್ಲಾ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನಿಲಕುಮಾರ ಬೆಲ್ದಾರ ಅವರು ಹೆಣ್ಣು ಮಕ್ಕಳು ಸ್ವತಂತ್ರವಾಗಿ ಶಿಕ್ಷಣವನ್ನು ಪಡೆದು ಹಾಗೂ ಉದ್ಯೋಗವನ್ನು ಮಾಡುತ್ತಿದ್ದಾರೆ ಇದಕ್ಕೆ ಡಾ ಬಾಬಾ ಸಾಹೆಬ ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫುಲೆ ರವರ ಪಾತ್ರ ಅಪಾರವಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ ಡಾ|| ಸುಜಾತಾ ಹೊಸಮನೆ ಇವರು ಹೆಣ್ಣು ದೇಶದ ಕಣ್ಣು ಇವರನ್ನು ಗೌರವಿಸುವದು ಎಲ್ಲರ ಕರರ್ತವ್ಯವಾಗಿದೆ ಎಂದರು.

ಕಾರ್ಯಕ್ರಮ ಅತಿಥಿಗಳಾಗಿ ಮೇನಕಾ ಪಾಟಿಲ್, ಡಾ|| ಶ್ರೇಯಾ, ಡಾ|| ಶ್ರೀಮತಿ ಜೈಶಾಲಿ ವೇದಿಕೆಯನ್ನು ಉಪದೇಶಿಸಿ ಮಾತನಡಿದರು.

ಈ ಸಂದರ್ಭದಲ್ಲಿ ಅನೇಕ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಮಹಿಳೆರವರಾದ ಶ್ರೀಮತಿ ವಿಜಯಲಕ್ಷೀ, ಶ್ರೀಮತಿ ರೇಣುಕಾ, ಶ್ರೀಮತಿ ರೈಚಲ್ ರಾಣಿ, ಶ್ರೀಮತಿ ನಿಲಮ್ಮಾ, ಶ್ರೀಮತಿ ಸಂತೊಷಿ, ಶ್ರೀಮತಿ ಸುಮಂಗಲಾ, ಶ್ರೀಮತಿ ಜೈಶ್ರೀ, ಮಿನಾ, ಜಗದೇವಿ, ಗುರಮ್ಮಾ, ರಾಜೇಶ್ವರಿ, ಶ್ರೀದೇವಿ ಇರವರನ್ನು ಶಾಲು ಹೂ ಮಾಲೆಯೊಂದಿಗೆ ಸನ್ಮಾಸಲಾಯಿತ್ತು.

ಶ್ರೀಮತಿ ರೇಣುಕಾ ಗೋಪಿಚಂದ ತಾಂದಳೆ ರವರು ಕಾರ್ಯಕ್ರಮದ ಸ್ವಾಗತ ಕೋರಿದರೆ ಪ್ರಾಸ್ತಾವಿಕ ಡಾ|| ಶ್ರೀಮತಿ ಜೈಶಾಲಿ ನೇರೆವೆರಿಸದರು, ಕರ್ಯಕ್ರಮದ ನಿರೂಪಣೆಯನ್ನು ವಿಜಯಲಕ್ಷೀರವರು ನೆರವೆರಿಸಿ ಕೊಟ್ಟರು.

ಹಿರಿಯನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕರಾದ ಮಲಾಕಿ ಮೈಕಲ್ , ಆಪ್ತಸಮಾಲೋಚಕರಾದ ಬಾಲಾಜಿ , ರೈಚಲ್ ರಾಣಿ ,ಪ್ರವಿಣ, ಸಂತೋಷ ಭಾಲ್ಕೆ , ನಾಗನಾಥ, ಶ್ರೀಮತಿ ಸುವiಂಗಲಾ, ಶ್ರೀಮತಿ ಜೈಶ್ರೀ, ಮಹಿಳೆಯರು, ವಿದ್ಯಾರ್ಧಿನಿ ವಸತಿ ನಿಲಯದ ಮೆಲ್ವಿಚಾರಕಿರಾದ ಶ್ರೀಮತಿ ನಿಲಮ್ಮಾ, ಶಿಕ್ಷಕರು,ಸಿಬ್ಬಂಧಿಗಳು ಉಪಸ್ಥಿತರಿದ್ದರು.