ಹೆಣ್ಣು ಭ್ರೂಣ ಹತ್ಯೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು

ಧಾರವಾಡ, ಡಿ.2: ಹೆಣ್ಣು ಭ್ರೂಣ ಹತ್ಯೆಯಂತ ಹೇಯ ಕೃತ್ಯದ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವಂತೆ ಕೆಲವರು ಮಾಡುತ್ತಿದ್ದಾರೆ. 80 ರ ದಶಕದಲ್ಲಿ ಏಡ್ಸ್ ಬಗ್ಗೆ ಇದ್ದ ಕೀಳರಿಮೆ, ತಿರಸ್ಕಾರ ಮನೋಭಾವ, ಭಯ, ಆತಂಕಗಳು ಇಂದು ಆರೋಗ್ಯ ಇಲಾಖೆಯ ಜನಜಾಗೃತಿ ಕಾರ್ಯಕ್ರಮಗಳಿಂದ ದೂರಾಗಿದೆ. ಅದರಂತೆ ಆರೋಗ್ಯ ಇಲಾಖೆ ಲೀಡರಶೀಪ್‍ದಲ್ಲಿ ಇತರ ಇಲಾಖೆಗಳು ಕೈಜೋಡಿಸಿ, ಸಾರ್ವಜನಿಕರಲ್ಲಿ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರುಶರಾಮ ದೊಡಮನಿ ಅವರು ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಆಸ್ಪತ್ರೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸಂಯುಕ್ತವಾಗಿ, ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೃಹತ ಜನಜಾಗೃತಿ ಜಾಥಾ ಹಾಗೂ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಏಡ್ಸ್ ಬಗ್ಗೆ ಸಮಾಜದಲ್ಲಿದ್ದ ಭಯ, ಆತಂಕ ಮತ್ತು ತಿರಸ್ಕಾರದ ಮನೋಭಾವ ಇಂದು ದೂರಾಗಿದೆ. ರಾ?À್ಟ್ರ, ರಾಜ್ಯ, ಜಿಲ್ಲೆಗಳಲ್ಲಿ ಎಚ್.ಐ.ವಿ. ಸೋಂಕಿತರ, ಏಡ್ಸ್ ಬಾಧಿತರ ಸಂಖ್ಯೆ ಇಳಿಮುಖವಾಗಿದೆ. ಇದಕ್ಕೆ ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳು ಮತ್ತು ಆರೋಗ್ಯ ಇಲಾಖೆ ಇದನ್ನು ಆಂದೋಲನ ರೀತಿಯಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಿದ್ದು ಕಾರಣವಾಗಿದೆ ಎಂದರು.

ಹೆಣ್ಣು ಗಂಡು ಸಮ. ಮಕ್ಕಳಲ್ಲಿ ಬೇದಭಾವ ಬೇಡ. ಕೆಲವರು ಕಾನೂನು ಬಾಹೀರವಾಗಿ ಪರೀಕ್ಷಿಸಿಕೊಂಡು ಹೆಣ್ಣು ಭ್ರೂಣಗಳ ಹತ್ಯೆ ಮಾಡುತ್ತಿರುವ ವರದಿಗಳು ಬರುತ್ತಿವೆ. ಇದಕ್ಕೆ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಕೈ ಜೋಡಿಸುತ್ತಿರುವುದು ಸರಿಯಲ್ಲ. ತಪ್ಪಿತಸ್ಥ ರಿಗೆ ಕಠಿಣ ಶಿಕ್ಷೆ ಜೊತೆಗೆ ಸಮಾಜದಲ್ಲಿ ಜಾಗೃತಿ, ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪಾಟೀಲ ಶಶಿ ಅವರು ಮಾತನಾಡಿ, ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ಮತ್ತು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮಾಡುತ್ತಿರುವದರಿಂದ ಜಿಲ್ಲೆಯಲ್ಲಿ ಎಚ್.ಐ.ವಿ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ. 2017-18 ರಲ್ಲಿ 59,219 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 664 ಜನರಲ್ಲಿ ಏಡ್ಸ್ ರೋಗ ಕಂಡು ಬಂದಿತ್ತು. ಆದರೆ 2023 ರಲ್ಲಿ 58,397 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 276 ಜನರಲ್ಲಿ ಏಡ್ಸ್ ರೋಗ ಕಂಡು ಬಂದಿದೆ. 2017 ರಲ್ಲಿ ಶೇ 1.12 ರಷ್ಟಿದ್ದದ್ದು, 2023 ರಲ್ಲಿ ಅದು ಶೇ.0.47 ರ?À್ಟು ಆಗಿದೆ ಎಂದು ಅವರು ಹೇಳಿದರು.

ಪ್ರಸಕ್ತ ಸಾಲಿನಲ್ಲಿ 32,193 ಗರ್ಭಿಣಿ ಮಹಿಳೆಯರನ್ನು ಎಚ್.ಐ.ವಿ. ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 9 ಜನರಲ್ಲಿ ರೋಗ ಕಂಡು ಬಂದಿದೆ. ಹೆಚ್ಚು ಅರಿವಿಗಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಅಯ್ಯನಗೌಡ ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ ತಾಲೂಕು ವೈದ್ಯಾಧಿಕಾರಿ ಡಾ.ತನುಜಾ ಎಚ್.ಎನ್, ಭಾರತೀಯ ರೆಡ್ ಕ್ರಾಸ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಡಾ. ಸತೀಶ ಇರಕಲ್ಲ, ಕಾರ್ಯದರ್ಶಿ ಡಾ.ಉಮೇಶ ಹಳ್ಳಿಕೇರಿ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.