ಹೆಣ್ಣು ಪುರುಷನಿಗಿಂತ ಕಡಿಮೆಯಿಲ್ಲ:ಸಂಗಣ್ಣ ತುಂಬಗಿ

ಕೆಂಭಾವಿ:ಅ.25:ಎಂತಹ ಕಠಿಣ ಸಮಯದಲ್ಲಿ ಸಹ ಹೆಣ್ಣು ಯಾವುದೇ ವಿಚಾರದಲ್ಲಿ . ಪುರುಷರಿಗಿಂತಲೂ ಯಾವದರಲ್ಲಿಯೂ ಕಮ್ಮಿ ಇಲ್ಲ. ಅಡುಗೆ ಮಾಡುವದಕ್ಕೂ ಬದ್ಧ, ಯುದ್ದಕ್ಕೂ ಸಿದ್ಧ ಎಂದು ತೋರಿಸಿಕೊಟ್ಟವರಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ಅಗ್ರರು ಎಂದು ಹಿರಿಯ ಮುಖಂಡ ಸಂಗಣ್ಣ ತುಂಬಗಿ ಹೇಳಿದರು.
ಸೋಮವಾರ ವೀರರಾಣಿ ಕಿತ್ತೂರ ಚೆನ್ನಮ್ಮಳ 200 ನೆ ಜಯಂತಿ ಅಂಗವಾಗಿ ಪಟ್ಟಣದ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಿತ್ತೂರ ಚನ್ನಮ್ಮಳ ಸ್ನೇಹಮಯಿ ಜೀವನ, ಧೈರ್ಯ ಸಾಹಸ ಕಾರ್ಯಗಳು ನಮ್ಮ ಭಾರತ ದೇಶದ ಪ್ರತಿಯೊಬ್ಬ ಮಹಿಳೆಗೆ ಆದರ್ಶಪ್ರಾಯವಾಗಿದೆ. ಚೆನ್ನಮ್ಮಳ ಜಯಂತಿ ದಿನವನ್ನು ವಿಜಯೋತ್ಸವ ದಿನವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಹೇಳಿದರು.
ಮುಖಂಡರಾದ ಶರಣಪ್ಪ ಬಂಡೋಳಿ, ಶ್ರೀನಿವಾಸರೆಡ್ಡಿ ಯಾಳಗಿ, ಪುರಸಭೆ ಸದಸ್ಯ ರವಿ ಸೊನ್ನದ, ಶಿವಣ್ಣ ಬಳಬಟ್ಟಿ, ರಾಮನಗೌಡ ಪಾಟೀಲ, ಚಂದ್ರು ಮನಗೂಳಿ, ವಿಕಾಸ ಸೊನ್ನದ, ಶಿವನಗೌಡ ಪಾಟೀಲ, ಭೀಮು ಮಲ್ಕಾಪುರ, ಆನಂದ ಆಶಿಂಗಾಳ, ಬಸವರಾಜ ಮಲ್ಕಾಪುರ, ಸೋಮನಾಥ, ವೀರಭದ್ರ ಬೈಚಬಾಳ, ಮಂಜು ದೇಸಾಯಿ, ಬಸ್ಸು ಆಶಿಂಗಾಳ, ಉಮೇಶರೆಡ್ಡಿ, ಸುಭಾಸ ಮುದನೂರ, ಮಲ್ಲು ಕಠಾಣಿ, ಪ್ರಕಾಶ ಬೈಚಬಾಳ, ಶರಣು ಸೇರಿದಂತೆ ಇತರರಿದ್ದರು.