ಹೆಣ್ಣು ನಾಲ್ಕು ಗೋಡೆಗೆ ಸೀಮಿತವಾಗಬಾರದು

ಕಲಬುರಗಿ.ಡಿ.21:ವಿಶ್ವಗುರು ಅಣ್ಣ ಬಸವಣ್ಣನವರ ಕನಸು ನನಸಾಗಬೇಕೆಂದರೆ ಪ್ರಸ್ತುತ ಸಮಯದಲ್ಲಿ ಹೆಣ್ಣು ನಾಲ್ಕು ಗೋಡೆಗೆ ಸೀಮಿತವಾಗದೇ ಅದರಿಂದ ಹೊರಗೆ ಬಂದು ದೇಶಿ ಸಂಸ್ಕøತಿಯನ್ನು ಮೆರೆಯಬೇಕೆಂದು ಜಗದ್ಗುರು ಡಾ. ಸಾರಂಧರ್ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಸುಲಫಲ್ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಿದ ಮಹಿಳಾ ಸಾಂಸ್ಕೃತಿಕ ಉತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಹಿಳೆ ಮನಸ್ಸು ಮಾಡಿದರೆ ಯಾವುದೇ ಸಾಧನೆಯನ್ನು ಮಾಡಬಹುದಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಜಿಲ್ಲಾ ಖಚಾನೆ ಅಧಿಕಾರಿ ದತ್ತಪ್ಪಾ ಗೊಬ್ಬುರ್ ಅವರು ಮಾತನಾಡಿ, ಅವರು ಇಂದಿನ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬಂದು ಪುರುಷ ಪ್ರಧಾನವಾದ ಈ ರಾಷ್ಟದಲ್ಲಿ ಮಹಿಳೆಯ ಪಾತ್ರ ಹಿರಿದು ಎಂದು ಸಾಬೀತು ಪಡಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸುರೇಶ್ ಬಡಿಗೇರ್ ಅವರು ಮಾತನಾಡಿ, ಹೆಣ್ಣು ಅಬಲೆಯಲ್ಲ ಶಕ್ತಿಯ ನೆಲೆಯಾಗಿದ್ದಾರೆ ರಾಜಕೀಯದಲ್ಲಿ ಮುಂದೆ ಬಂದರೆ ಅವರಿಗೆ ಇಂದಿನ ಪುರುಷರು ಸ್ವಾಗತಿಸಬೇಕು ಎಂದರು.
ಕಾರ್ಯಕ್ರಮದ ಆರಂಭಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ವೇದಿಕೆ ಮೇಲೆ ರಾಜಶೇಖರ್ ಶಿವಾಚಾರ್ಯರು, ಶಿವಾನಂದ್ ಶಿವಾಚಾರ್ಯರು, ಸಿದ್ದಲಿಂಗ್ ಶಿವಾಚಾರ್ಯರು, ಮಡಿಕಿ ಶಿವಾನಂದ್ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಧ್ಯಾಹ್ನ ಮಹಿಳೆ ಕವಿಗೋಷ್ಠಿ ಜರುಗಿತು, ಇದೇ ಸಂದರ್ಭದಲ್ಲಿ ದೇಶಾದ್ಯಂತ ಬಸವತತ್ವ ಪ್ರಚಾರ ಮಾಡಲು ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಶಿವಾನಂದಸ್ವಾಮಿ ಅವರಿಗೆ ಸುಲಫಲ ಮಠದ ವತಿಯಿಂದ ಸತ್ಕರಿಸಲಾಯಿತು.