ಹೆಣ್ಣು ಜ್ಞಾನ ಮತ್ತು ದಿವ್ಯತೆಯ ಸಂಕೇತ

ರೋಣ,ಜ25 : ಹೆಣ್ಣು ಜ್ಞಾನ ಮತ್ತು ದಿವ್ಯತೆಯ ಸಂಕೇತ ಈ ಅರಿವು ಸಮಾಜದ ಎಲ್ಲ ಹಂತದಲ್ಲೂ ಕಂಡು ಬರಬೇಕಾದ ಆವಶ್ಯಕತೆ ಇದೆ ಎಂದು ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ.ಎ.ಎನ್ ಅಭಿಪ್ರಾಯಪಟ್ಟರು.

ರೋಣ ಪಟ್ಟಣದ ಗುರು ಭವನದಲ್ಲಿ ಕೂಸಿನ ಮನೆ ಆರೈಕೆದಾರರಿಗೆ ನಡೆದ ಎರಡನೇ ದಿನದ ತರಬೇತಿಯಲ್ಲಿ ಕೇಕ್ ಕಟ್ ಮಾಡುವ ಮೂಲಕ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೆಣ್ಣು ತನ್ನ ಗರಿಷ್ಠ ಸಾಮರ್ಥ್ಯವನ್ನು ಪ್ರಕಟಪಡಿಸಲು ಅನುಕೂಲಕರವಾದ ವಾತಾವರಣ ಸೃಷ್ಟಿ ಮಾಡಲು ಎಲ್ಲರೂ ಪ್ರಯತ್ನ ಮಾಡಬೇಕು. ಆರೋಗ್ಯ,ಶಿಕ್ಷಣ, ಸ್ವಚ್ಛತೆ ಮುಂತಾದ ಎಲ್ಲಾ ಆಯಾಮಗಳಲ್ಲೂ ಕೂಡ ಹೆಣ್ಣಿನ ಶ್ರೇಯೋಭಿವೃದ್ಧಿಗಾಗಿ ಬೇಕಾದ ಕ್ರಮಗಳನ್ನು ಸಮಾಜ ಆಲೋಚಿಸಿ ಕಾರ್ಯಪ್ರವೃತ್ತವಾಗಬೇಕು ಎಂದರು.

21 ನೇ ಶತಮಾನದಲ್ಲಿ ಇನ್ನು ಸಹ ಹೆಣ್ಣು ಮಕ್ಕಳ ಸಲುವಾಗಿ ಕಾರ್ಯಕ್ರಮ ರೂಪಸಿಬೇಕಾಗಿದೆ ಅಂದರೆ ಅದು ಹೆಣ್ಣು ಮಕ್ಕಳು ಹಿಂದುಳಿದಿದ್ದಾರೆ ಅಂತಾ ಅರ್ಥ ಆದಷ್ಟು ಬೇಗ ಈ ಬೇದ-ಬಾವ ಹೋಗಬೇಕು, ಎಲ್ಲರೂ ಸಮಾನ ಅನ್ನುವ ಹಾಗೆ ಸಮಾಜದಲ್ಲಿ ಬದಲಾವಣೆ ಆಗಬೇಕು ಹಾಗಾಗಿ ಅಂತಹ ಸವಾಲನ್ನು ಸಮರ್ಪಕವಾಗಿ ಮತ್ತು ಧೈರ್ಯವಾಗಿ ಎದುರಿಸುವ ಶಕ್ತಿ ಹೆಣ್ಣು ಮಕ್ಕಳಿಗೆ ಬರಬೇಕು ಎಂದರೇ ಹೆಣ್ಣು ಶಿಕ್ಷಣದಿಂದ ವಂಚಿತರಾಗಬಾರದು. ಓರ್ವ ಹೆಣ್ಣು ಪುರುಷರಿಗಿಂತ ನಾನೇನು ಕಡಿಮೆ ಇಲ್ಲ ಎಂಬ ಮನೋಭಾವನೆಯಿಂದ ಸಮಾಜದ ವಿವಿಧ ಸ್ತರಗಳಲ್ಲಿ ಸಾಧನೆಗೈಯುವ ಮನಸ್ಥಿತಿ ಹೊಂದಿರಬೇಕು. ಹೆಣ್ಣು ಮಕ್ಕಳು ಕ್ರೀಡೆ, ಶಿಕ್ಷಣ, ವಿಜ್ಞಾನ, ಸಂಸ್ಕೃತಿ, ಆಡಳಿತ, ರಾಜಕೀಯ ಮುಂತಾದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವ ಹಾಗೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ ಮಾತನಾಡಿ
ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ವಿಚಾರದಲ್ಲಿ ಹೆಣ್ಣು ಹೆತ್ತ ಪಾಲಕರಲ್ಲಿ ಕೀಳರಮೆ ಬೇಡ. ಹೆಣ್ಣು ಭೂತಾಯಿಗೆ ಸರಿಸಮ ವಾಗಿದ್ದು. ಹೆಣ್ಣುನ್ನು ಗೌರವಿಸಿ ಉಳಿಸಿಕೊಂಡು ಹೋಗುವ ಕೆಲಸ ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ರಿಯಾಜ ಖತೀಬ್ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಶಿವಯೋಗಿ ರಿತ್ತಿ ಸಹಾಯಕ ನಿರ್ದೇಶಕರು (ಪಂಚಾಯತ ರಾಜ್), ಶ್ರೀಮತಿ ಮಂಜುಳಾ ಗುರಾಣಿ ಹಿರಿಯ ಮೇಲ್ವಿಚಾರಕರು ಮಹಿಳಾ, ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಣ, ಖಿಒIS ಪ್ರವೀಣಕುಮಾರ ಗಾಮನಗಟ್ಟಿ, ಅಬ್ಬಿಗೇರಿ, ಹೊಸಳ್ಳಿ, ಕುರಹಟ್ಟಿ, ಕೌಜಗೇರಿ, ಬೆಳವಣಿಕಿ, ಹೊಳೆ ಆಲೂರು, ಹೊಳೆಮಣ್ಣೂರು,ಸವಡಿ, ಯಾವಗಲ್ ಗ್ರಾಮ ಪಂಚಾಯತಿಯ ಕೂಸಿನ ಮನೆ ಆರೈಕೆದಾರರು ಭಾಗವಹಿದ್ದರು. ತಾಲೂಕು ಪಂಚಾಯತ ಐಇಸಿ ಕೊ ಅರ್ಡಿನೇಟರ್ ಮಂಜುನಾಥ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.