ಹೆಣ್ಣು ಗಂಡು ಸಮಾನ ನಮ್ಮ ಮಂತ್ರವಾಗಲಿ : ಪಿಡಿಒ ಸಂತೋಷ ಪಾಟೀಲ

ಔರಾದ :ಫೆ.21: ಹೆಣ್ಣು ಮಕ್ಕಳ ರಕ್ಷಣೆ ಮಾಡುವುದು ಎಲ್ಲರ ಆಧ್ಯ ಕರ್ತವ್ಯವಾಗಿದೆ. ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು ಎಂದು ಪಿಡಿಒ ಸಂತೋಷ ಪಾಟೀಲ್ ತಿಳಿಸಿದರು.

ಮಂಗಳವಾರ ತಾಲೂಕಿನ ಸಂತಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) ಕಚೇರಿಯಲ್ಲಿ ಆಶಾ ಕಾರ್ಯಕರ್ತೇಯರಿಗೆ ಆಯೋಜಿಸಿದ ಬೇಟಿ ಪಡಾವೋ ಬೇಟಿ ಪಡಾವೋ ಕಾರ್ಯಕ್ರಮನುದ್ದೇಶಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಜನಿಸಿದಾಗ ಎಲ್ಲರು ಖುಷಿಯಿಂದ ಸಂಭ್ರಮಿಸಬೇಕು. ಎಲ್ಲರು ಹೆಣ್ಣು ಮಕ್ಕಳ ಬಗ್ಗೆ ಒಂದೇ ಅಭಿಮಾನ ಹೊಂದಿರಬೇಕು. 2015ರ ಜ.22ರಂದು ಪ್ರಧಾನಿಯವರು ಹರಿಯಾಣದ ಪಾಣಿಪತ್ ನಲ್ಲಿ ಬೇಟಿ ಬಜಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗು ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ರೂಪಿತವಾಗಿದೆ ಎಂದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಡಿ ಖಲೀಲ್ ಮಾತನಾಡಿ, ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅನುಷ್ಠಾನ ಮತ್ತು ತಾಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತರಬೇತಿ, ವಿಚಾರದ ಅರಿವು, ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುವುದರಿಂದ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಭ್ರೂಣ ಹತ್ಯೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಅರಿವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.

ಡಾ. ಅನೀಲಕುಮಾರ ಗಡ್ಡೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಗೀತಾ ಹಾಲಕೂಡೆ ಮಾತನಾಡಿದರು. ಈ ಸಂದರ್ಭದಲ್ಲಿ ಸುನೀಲ ವಾಘಮಾರೆ, ಬಿಎಚ್ ಇಒ ಅನೀತಾ ಬಿರಾದರ್, ಸಂಗಮೇಶ ಕೂಡ್ಲೆ, ಸಚ್ಚಿದಾನಂದ ಬಿರಾದರ್, ದೇವೇಂದ್ರ , ಬಸವರಾಜ್, ವಲಯ ಮೇಲ್ವಿಚಾರಕಿಯರಾದ ರಾಜೇಶ್ರೀ, ಶೋಭಾ ರಾಠೋಡ್, ಯೋಗೇಶ್ವರಿ, ನಾಗಮ್ಮ, ಶೋಭಾ ಕುಣಿಕೇರೆ ಇತರರಿದ್ದರು. ಚಿಂತಾಕಿ ವಲಯ ಮೇಲ್ವಿಚಾರಕಿ ವಿಜಯಲಕ್ಷ್ಮಿ ನಿರೂಪಿಸಿದರು.