ಹೆಣ್ಣು ಅಬಲೆಯಲ್ಲ ಸಬಲೆ; ಶೈಲಜಾ ಪಾಟೀಲ

ವಿಜಯಪುರ:ಮಾ.22: ಹೆಣ್ಣು ಅಬಲೆಯಲ್ಲ ಸಬಲೆ ಎಂದು ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ಅಧ್ಯಕ್ಷೆ ಶೈಲಜಾ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ಕಲಾಭವನದಲ್ಲಿ ಬುಧವಾರ ಸಮಸ್ತ ವಿಜಯಪುರ ಮಹಿಳೆಯರ ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದು ಪುರುಷನಿಗಿಂತ ಒಂದು ಕೈ ಮೇಲೆ ಎನ್ನುವಷ್ಟರ ಮಟ್ಟಿಗೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದೇ ಸಾಕ್ಷಿ ಎಂದರು.
ಕಣ್ಮರೆ ಆಗುತ್ತಿರುವ ವಚನ, ಪ್ರವಚನಗಳನ್ನು ಪ್ರಸಕ್ತ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸಲು, ಶ್ರೀ ಸಿದ್ದೇಶ್ವರ ಅಕ್ಕನ ಬಳಗ ಪ್ರತಿ ಸೋಮವಾರ ಸಿದ್ದೇಶ್ವರ ದೇವಸ್ಥಾನ ಸಭಾಭವನದಲ್ಲಿ ಕಾರ್ಯಕ್ರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಅಕ್ಕಮಹಾದೇವಿ ಬುರ್ಲಿ ಅಮ್ಮನವರು ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿ ಸಜ್ಜನ, ಮೀನಾಕ್ಷಿ ಉಟಗಿ, ಸುನಂದಾ ಹೊನವಾಡ, ಶಕುಂತಲಾ ಚಿಂತಾಮಣಿ, ರೇಣುಕಾ ಪಾಟೀಲ, ಮಮತಾ ಪರಗೊಂಡೆ, ಸಾವಿತ್ರಿ ಮಠ ಸೇರಿದಂತೆ ಅಕ್ಕನ ಬಳಗದ ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು.
ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ವಿಜಯಲಕ್ಷ್ಮೀ ಕೌಲಗಿ, ಜಯಶ್ರೀ ನಾಲವಾರ ಪರಿಚಯಿಸಿದರು. ರುದ್ರಾಂಬಿಕಾ ಕೊಪ್ಪದ ನಿರೂಪಿಸಿದರು. ಶೈಲಜಾ ಸೊಂಪೂರ ವಂದಿಸಿದರು.