ಹೆಣ್ಣು ಅತ್ಯಂತ ಕ್ರಿಯಾತ್ಮಕ ಜೀವಿ

ದಾವಣಗೆರೆ.ನ.೧೩;ಜಗತ್ತಿನಲ್ಲಿ ಹೆಣ್ಣೇ ಅತ್ಯಂತ ಕ್ರಿಯಾಶೀಲ ಹಾಗೂ ಕ್ರಿಯಾತ್ಮಕ ಜೀವಿ. ಈ ಕಾರಣದಿಂದಲೇ ಪುರುಷ ಆಕೆಯನ್ನು ದ್ವೇಷಿಸುತ್ತಾನೆ ಮತ್ತು ಆಕೆ ಮೇಲೆ ದೌರ್ಜನ್ಯ ನಡೆಸುತ್ತಾನೆ ಎಂದು ಬಂಡಾಯ ಸಾಹಿತಿ, ಚಿಂತಕ ಡಾ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸೋದರಿ ನಿವೇದಿತಾ ಸಂಭಾಂಗಣದಲ್ಲಿ ಶನಿವಾರ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಮಹಿಳಾ ಪರ ಚಿಂತನೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಮಹಿಳೆ ಇಷ್ಟು ಕ್ರಿಯಾತ್ಮಕವಾಗಿ ಯೋಚಿಸುವುದನ್ನು ಗಂಡಸಿನ ಕೈಲಿ ಸಹಿಸಿಕೊಳ್ಳಲು ಆಗುವುದಿಲ್ಲ.ಘಿಆದ್ದರಿಂದಲೇ ಮಹಿಳೆ ಇಂದಿಗೂ ತುಳಿತಕ್ಕೊಳಗಾಗುತ್ತಿದ್ದಾಳೆ ಎಂದರು.ಋಗ್ವೇದದಲ್ಲಿ ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳೇ ಅಲ್ಲ, ಆಕೆಗೆ ಸ್ವಾತಂತ್ರ್ಯ ನೀಡುವ ಅಗತ್ಯವೂ ಇಲ್ಲ ಎಂದು ಹೇಳಲಾಗಿದೆ. ಬಹಳ ಹಿಂದಿನ ಕಾಲದಿಂದಲೂ ಮಹಿಳೆಯನ್ನು ಅದೇ ರೀತಿ ನಡೆಸಿಕೊಂಡು ಬರಲಾಗುತ್ತಿದೆ. ಇಂದಿಗೂ ಎಷ್ಟೋ ಕಡೆ ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿದೆ. ಇಷ್ಟೆಲ್ಲಾ ಇದ್ದರೂ ಮಹಿಳೆ ಅದನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಆಕೆ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪ್ರಶ್ನೆ ಕೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಣವಾಗಿದ್ದು, ಮಹಿಳೆಯರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಅರ್ಧ ಜನಕೋಟಿ ಸಮಸ್ಯೆಇಂದು ಮಹಿಳೆ ಸಮಸ್ಯೆ ಎದುರಿಸುತ್ತಿದ್ದಾಳೆ ಎಂದರೆ ಅದು ಕೇವಲ ಆ ಹೆಣ್ಣು ಅಥವಾ ಸ್ತ್ರೀ ಸಂಕುಲದ ಸಮಸ್ಯೆಯಲ್ಲಘಿ. ಬದಲಾಗಿ, ಅದು ಇಡೀ ಅರ್ಧ ಜನಕೋಟಿಯ ಸಮಸ್ಯೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಡಾ. ನಾಗವಾರ, ದೇಶಕ್ಕೆ ಸಮಾನತೆಯ ಹಕ್ಕು ಪರಿಚಯಿಸಿದ ಮಹಾತ್ಮ ಡಾ. ಬಿ.ಆರ್. ಅಂಬೇಡ್ಕರ್. ಆದರೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಲು ಸಂಸತ್ ಒಪ್ಪಿಗೆ ನೀಡದಿದ್ದಾಗ, ಸ್ತ್ರೀಯರಿಗೆ ಸಂಪೂರ್ಣ ಸಮಾನತೆ ಕೊಡಿಸಲು ಸಾಧ್ಯವಾಗಲಿಲ್ಲ ಎಂದೆಣಿಸಿ ಅಂಬೇಡ್ಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದು ಒಂದು ಇತಿಹಾಸ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ. ಮಂಜಣ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಿನ್ಸಿಪಾಲ್ ಪ್ರೊ. ಎ.ಎಸ್. ಶೈಲಜಾ ಕಾರ್ಯಕ್ರಮ ಉದ್ಘಾಟಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಶಿವರಾಜ್, ಐಕ್ಯುಎಸಿ ಸಂಚಾಲಕ ಡಾ.ಎಂ.ಪಿ. ಭೀಮಪ್ಪ, ಉಪನ್ಯಾಸಕರಾದ ಡಾ.ಎನ್.ಎಂ. ಅಶೋಕ ಕುಮಾರ, ಟಿ.ಜಿ. ರಾಘವೇಂದ್ರ ಇತರರಿದ್ದರು.