ಹೆಣ್ಣಿಗೆ ಸಾಕ್ಷರತೆಯ ಬೆಳಕು ತೋರಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ -ಬಿ ಬಿ ಶಿವಾನಂದ.

ಕೂಡ್ಲಿಗಿ.ಜ. 4:-ಸಂಪ್ರದಾಯವಾದಿಗಳನ್ನು ದಿಟ್ಟವಾಗಿ ಎದುರಿಸಿ ಹೆಣ್ಣಿಗೆ ಶಿಕ್ಷಣ ಕೊಡುವ ಮೂಲಕ ಅಕ್ಷರದ ಬೆಳಕು ಚೆಲ್ಲಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಬಿ ಶಿವಾನಂದ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಟ್ಟಣದ ಮೇನ್ ಬಾಯ್ಸ್ ಶಾಲೆಯಲ್ಲಿ ಭಾನುವಾರ ರಂದು ‘ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ತಾಲೂಕು ಘಟಕ ಕೂಡ್ಲಿಗಿ’ ವತಿಯಿಂದ ‘ಭಾರತದ ಪ್ರಥಮ ಶಿಕ್ಷಕಿ, ಅಕ್ಷರದ ಅವ್ವ, ಬಾಲಕಿಯರ ಶಿಕ್ಷಣದ ಮಹತ್ವ ಸಾರಿದ “ಮಾತೆ ಸಾವಿತ್ರಿ ಬಾ ಫುಲೆ ಜನ್ಮ ದಿನಾಚರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳಯರಿಗೆ ಶಿಕ್ಷಣವನ್ನು ಕೊಡುವ ಮೂಲಕ ಅಂಧ ಶ್ರದ್ಧೆಯನ್ನು ತೊಡೆದು, ಸಂಪ್ರದಾಯಿವಾದಿಗಳನ್ನು ದಿಟ್ಟವಾಗಿ ಎದುರಿಸಿ ಅಕ್ಷರದ ಬೆಳಕನ್ನು ಮಹಿಳೆಯರಾದಿಯಾಗಿ ದೀನ-ದಲಿತರಿಗೂ ನೀಡಿದ ಮಹಾತಾಯಿ ಸಾವಿತ್ರಿ ಬಾ ಫುಲೆ ಅವರು ನಮಗೆಲ್ಲಾ ಪೂಜ್ಯನಿಯರು. ಅವರ ಆದರ್ಶಗಳು ನಮ್ಮ ಶಿಕ್ಷಕರಿಗೆ ಹಾಗೂ ಸಮಾಜಕ್ಕೆ ಸದಾ ದಾರಿದೀಪವಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಕೊಟ್ರೇಶ್ ಗೌಡ, ಜಿಲ್ಲಾ ಉಪಾಧ್ಯಕ್ಷರಾದ ಗೀತಾ ವಿ ಉಪಾಧ್ಯಕ್ಷರಾದ ಹನುಮಂತಪ್ಪ ಹೆಚ್.ಜಿ, ಹೆಚ್. ಇಂದಿರ, ಸಹ ಕಾರ್ಯದರ್ಶಿಗಳಾದ ಗೀತಾ ಭಾಪ್ರಿ, ಪ್ರತಿನಿಧಿಗಳಾದ ಪಿ ವಿ ಕೊತ್ಲಪ್ಪ , ಕೆ ಜಿನಾಬಿ ಪುಟ್ಟಪ್ಪ, ಎನ್. ಎನ್.ಪಿ.ಎಸ್. ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್ ದಯಾನಂದ ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.