ಹೆಣ್ಣಿಗೆ ಸಬಲೀಕರಣ ಬೇಕು:ಪ್ರೊ.ಘಂಟಿ

ಕಲಬುರಗಿ ಏ 21:ಕನಿಕರಕ್ಕಿಂತಲು ಹೆಣ್ಣಿಗೆ ಸಬಲೀಕರಣ, ಸ್ವಾತಂತ್ರ್ಯ, ಹಕ್ಕು ಹಾಗೂ ಅವಕಾಶಗಳನ್ನು ನೀಡಬೇಕೆಂದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ. ಮಲ್ಲಿಕಾ ಘಂಟಿ ಹೇಳಿದರು.ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಮತ್ತು ಮಹಿಳೆ ಎಂಬ ವಿಷಯ ಕುರಿತು ಅವರು ಮಾತನಾಡಿದರು. ಜ್ಞಾನ
ಮಹಿಳೆಯರಿಗೂ ಸಿಗಬೇಕು. ಜ್ಞಾನ ದೊರಕಿದಾಗ ಮೋಕ್ಷ
ಸಾಧ್ಯ. ಜ್ಞಾನ ಮೂಲದಿಂದ ಹೊರಗಿಡುವಂತದ್ದು ದುರಂತದ
ಸಂಗತಿ ಎಂದರು. ಹೆಣ್ಣಿಗೆ ಬೇಕಾದ ಜ್ಞಾನ ಸಂಪತ್ತು ವಂಚಿಸಿದ
ಕಾರಣಕ್ಕೆ ಮಹಿಳೆಯರು ಅಕ್ಷರ ಜ್ಞಾನದಿಂದ ವಂಚಿತರಾದರು.
ಮಹಿಳೆಯರು ಸಾಮಾಜಿಕವಾಗಿ ತಮ್ಮ ನೋವು ಕಷ್ಟ ಕಾರ್ಪಣ್ಯ, ಸಮಾಜದ ಪ್ರತಿಬಿಂಬಎನ್ನುವಂತೆ ಹೆಣ್ಣಿನ ಸಾಮಥ್ರ್ಯವನ್ನು ವಿಶ್ಲೇಷಿಸುವಂತಹ ಕೆಲಸ ಆಧುನಿಕ ಸಂದರ್ಭದಲ್ಲಿ ನಡೆಯಿತು. ಕಾರ್ಮಿಕ ಹೋರಾಟದಲ್ಲಿ ಕೂಡ ಮಹಿಳೆಯರು ತೊಡಗಿಸಿಕೊಂಡರು ಎಂಬುದು ಕಾಣಬಹುದು.
ಮಹಿಳೆಯರು ಸಹ ಪುರುಷರ ಗ್ರಹಿಕೆಯಂತೆ ಬರೆದದ್ದು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ ಹಲವಾರು ಜನ
ಮಹಿಳಾ ಲೇಖಕಿಯರು ಹೊಸಗನ್ನಡ ಸಾಹಿತ್ಯ ಘಟ್ಟದಲ್ಲಿ ಬಂಡಾಯ
ಸಾಹಿತ್ಯ ಸಂದರ್ಭದಲ್ಲಿ ತೊಡಗಿಸಿಕೊಂಡದ್ದು ಚರಿತ್ರೆ.ಕನ್ನಡ
ಅಧ್ಯಯನ ಸಂಸ್ಥೆಯ ನಿರ್ದೇಶಕ, ಕಲಾನಿಕಾಯದ ಡೀನ್
ಪೆÇ್ರ. ಎಚ್.ಟಿ. ಪೆÇೀತೆ ಅಧ್ಯಕ್ಷತೆವಹಿಸಿದರು.ವೇದಿಕೆಯ ಮೇಲೆ ಸಿಯುಕೆ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಉಪಸ್ಥಿರಿದ್ದರು. ಕಾರ್ಯಕ್ರಮದಲ್ಲಿ ಡಾ. ಸೂರ್ಯಕಾಂತ ಸುಜ್ಯಾತ್,
ಡಾ. ಶ್ರೀಶೈಲ ನಾಗರಾಳ, ಡಾ. ಎಚ್.ಎಸ್. ಹೊಸಮನಿ, ಡಾ. ಶಾಂತಪ್ಪ
ಡಂಬಳ ಮತ್ತು ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕರು, ಸಂಶೋಧನ, ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು. ಡಾ. ಎಂ.ಬಿ. ಕಟ್ಟಿ ಸರ್ವರನ್ನು ಸ್ವಾಗತಿಸಿದರು, ಡಾ.ಸಂತೋಷಕುಮಾರ ಕಂಬಾರ ನಿರೂಪಿಸಿದರು, ಡಾ. ಹಣಮಂತ ಮೇಲಕೇರಿ ವಂದಿಸಿದರು.