ಹೆಣ್ಣಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯ

ಚಿತ್ರದುರ್ಗ: ಮಾ.9; ಹೆಣ್ಣು ಮನೆಯ ಸಂಸ್ಕಾರ.ತಾಳ್ಮೆ ಸಹನೆಯ ಪ್ರತೀಕ,ಅವಳನ್ನು ಭೂತಾಯಿಗೆ ಹೋಲಿಸಲಾಗುತ್ತದೆ. ಹೆಣ್ಣಲ್ಲಿ ಭೂತಾಯಿಯ ಸಹನೆ ತಾಳ್ಮೆ ಮೈಗೂಡಲು ಹಣ್ಣಿಗೆ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡುವುದೂ ಅವಶ್ಯವಾಗಿದೆ.    ಸಂಸಾರದ ಜವಾಬ್ದಾರಿಯ ಜೊತೆಗೆ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಸ್ತ್ರೀಯ ಪಾತ್ರ ಮಹತ್ವದ್ದು.ಈ ನಿಟ್ಟಿನಲ್ಲಿ ಪುರುಷ ಮತ್ತು ಸ್ತ್ರೀ ಒಬ್ಬರಿಗೊಬ್ಬರೂ ಪರಸ್ಪರ ಹೊಂದಾಣಿಕೆ ಯಿಂದ ಬೆರೆತು ಅರಿತು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದೆಕೆ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ದಯಾವತಿ ಪುತ್ತೂರ್ಕರ್ ಅಭಿಪ್ರಾಯ ಪಟ್ಟರು.ಅವರು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ನಗರದ ತುರುವನೂರು ರಸ್ತೆಯ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಂತರದಲ್ಲಿ ಸಂಸ್ಥೆಯ ಸಂಘಟಕರು ಹಾಗೂ ವಿಂಡ್ಮಿಲ್ ಹಿರಿಯ ವ್ಯವಸ್ಥಾಪಕ ಸುರೇಶ್ ಹಾಲುಮಜಲು ಮಾತನಾಡಿ ” ಒಬ್ಬ ಪುರುಷನ ಏಳು-ಬೀಳುಗಳಲ್ಲಿ ತಾಯಿಯಾಗಿ ಸೋದರಿಯಾಗಿ, ಹೆಂಡತಿಯಾಗಿ ಗೆಳತಿಯಾಗಿ ಮಗಳಾಗಿ ಹೀಗೆ ವಿವಿಧ ಪಾತ್ರಗಳಲ್ಲಿ ಗಂಡಿಗೆ ಸಹಾಯ ಮಾಡುತ್ತಾಳೆ ಹೆಣ್ಣಿಲ್ಲದ ಗಂಡಿನ ಬದುಕು ಅಪೂರ್ಣ ” ಎಂದು ಹೇಳಿದರು.ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಪರವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಶುಭಾಷಯಗಳನ್ನು ಕೋರಲಾಯಿತು. ನಂತರ ಎಲ್ಲಾ ಮಹಿಳೆಯರು ಸೇರಿ ಕೇಕ್ ಕತ್ತರಿಸುವುದರ ಮೂಲಕ ಮಹಿಳಾ ದಿನಾಚರಣೆಯ ಸಂಭ್ರಮಕ್ಕೆ ಮೆರುಗು ನೀಡಿದರು.