ಹೆಣ್ಣಿಗೆ ಧೈರ್ಯ, ಆತ್ಮ ಸ್ಥೈರ್ಯವೇ ಅಸ್ತ್ರಗಳು

ಸಂಜೆವಾಣಿ ನ್ಯೂಸ್
ಮೈಸೂರು. ಮೇ.30- ಅನ್ಯಾಯ, ಅಸಮಾನತೆಯ ವಿರುದ್ಧ ಹೋರಾಡಿ, ಸಮಾಜದಲ್ಲಿ ಭದ್ರವಾಗಿ ಬೇರೂರಲು ಹೆಣ್ಣಿಗೆ ಧೈರ್ಯ ಮತ್ತು ಆತ್ಮ ಸೈರ್ಯ ಅವಶ್ಯಕ ಅಸ್ತ್ರಗಳು ಎಂದು ವಿಮರ್ಶಕ ಪೆÇ್ರ.ಒ.ಎಲ್.ನಾಗಭೂಷಣಸ್ವಾಮಿ ತಿಳಿಸಿದರು.
ನಗರದ ಹೊಸಮಠದಲ್ಲಿರುವ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ, ಸಾಂಸ್ಕøತಿಕ ಮತ್ತು ಕ್ರೀಡಾ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಹೆಣ್ಣು ಮಕ್ಕಳ ಜೀವನ ಬಹುತೇಕ ಅತಂತ್ರ ಸ್ಥಿತಿಯಲ್ಲಿದ್ದು, ಸ್ವತಂತ್ರವಾಗಿ ಓಡಾಡಲು ಭಯಪಡುವಂತಾಗಿದೆ. ಆದರೆ, ಹೆಣ್ಣು ಯಾವುದರಲ್ಲೂ ಹೀನಳಲ್ಲ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬಲ್ಲ ಸಾಮಥ್ರ್ಯ ಉಳ್ಳವಳು ಎಂಬುದು ಇಡೀ ಸಮಾಜಕ್ಕೆ ತಿಳಿಯಬೇಕೆಂದರೆ, ಇಂದಿನ ಜನಾಂಗದ ವಿದ್ಯಾವಂತ ಹೆಣ್ಣು ಮಕ್ಕಳಾದ ನೀವು ಸವಾಲುಗಳೊಂದಿಗೆ ಮುನ್ನುಗ್ಗಬೇಕು. ಛಲ ಹಾಗೂ ಆತ್ಮಸ್ಥೈರ್ಯದಿಂದ ಗೆಲುವೆಂಬುದು ಸಾಧ್ಯ. ಮನಸ್ಸಿನ ಕಲ್ಪನೆಗಳು ನಿಜವಾಗಿರಬೇಕೆಂದಿಲ್ಲ. ಒಳಿತು ಕೆಡುಕುಗಳನ್ನು ಪರಿಗಣಿಸಿ, ಸೂಕ್ತ ಯೋಚನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಲೋಕ ಎಲ್ಲರಂದುಕೊಂಡಂತಿಲ್ಲ. ಯಾರ ಸಂತೋಷ ದುಃಖವನ್ನು ಯಾರೂ ಪರಿಗಣಿಸುವುದೇ ಇಲ್ಲ. ಎಲ್ಲವನ್ನು ಅನುಭವಿಸಿ, ಎದುರಿಸಬೇಕಾದವರು ನೀವೇ. ಸಮಾಜದಲ್ಲಿನ ಅನಗತ್ಯ ವಿಷಯ, ಜನರ ಅನಗತ್ಯ ಮಾತುಗಳಿಗೆ ಕಿವಿಗೊಡದೇ ಭವಿಷ್ಯದ ಬಗ್ಗೆ ನೀವೇ ಚಿಂತಿಸಬೇಕೆಂದು ಕಿವಿ ಮಾತು ನೀಡಿದರು.
ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾವಿದೆ ವಿದೂಷಿ ಸೌಮ್ಯ ಶ್ರೀಧರ್ ಜೈನ್ ಮಾತನಾಡಿ, ಕನಸುಗಳು ತುಂಬಿದ ನೂರಾರು ಮುಖಗಳು ಈ ಕಾಲೇಜಿನಲ್ಲಿವೆ. ಅತ್ಯಂತ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ಇರುವುದು ಸಂತಸದ ಸಂಗತಿ. ಅಂಕಗಳಿಗಾಗಿ ಓದಬೇಡಿ. ಜ್ಞಾನ ವೃದ್ಧಿಗಾಗಿ, ಬದುಕಿನ ನಿರ್ವಹಣೆಗಾಗಿ ಓದಿ. ಪುಸ್ತಕವನ್ನು ಸ್ನೇಹ ಭಾವದಿಂದ ನೋಡಿದಾಗ ನಿಮ್ಮ ಆಸಕ್ತಿ ಹೆಚ್ಚುತ್ತದೆ. ನಿರ್ವಹಿಸುವ ಕೆಲಸದೆಡೆಗೆ ಶ್ರದ್ಧೆವಹಿಸಿ ಕಾರ್ಯಪ್ರವೃತ್ತರಾಗಿ. ಆಗ ಸೋಲೆಂಬುದು ಬಳಿಯೂ ಸುಳಿಯುವುದಿಲ್ಲ. ಎಂತಹ ಸಮಸ್ಯೆ ಬಂದರೂ ಸೋಲಿಗೆ ಅಂಜದೇ ಮುಂದೆ ಸಾಗಿ. ಸೋಲದೇ ಗೆದ್ದವರಿಲ್ಲ. ಮುಂದಿನ ಜವಾಬ್ದಾರಿಯುತ ಜೀವನದ ಬಗ್ಗೆ ಚಿಂತಿಸಿ ಮುನ್ನಡೆಯಿರಿ. ಅವಕಾಶಗಳು ತಾವಾಗಿಯೇ ಬರುವುದಿಲ್ಲ. ನೀವೇ ರೂಪಿಸಿಕೊಂಡು, ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜೀವನವನ್ನು ಭಾರವೆಂದು, ನಿರುತ್ಸಾಹದಿಂದ ಕಳೆಯದೇ ಆನಂದದಿಂದ ಅನುಭವಿಸಿ. ಪ್ರತೀ ಕ್ಷಣವೂ ನಮಗೆ ಹೊಸತನ್ನು ಕಲಿಸುತ್ತದೆ. ಜೀವನವೇ ಇಂದು ಸುಂದರ ಪಯಣ. ಸೋಲೇ ಗೆಲುವಿನ ಮೆಟ್ಟಿಲಾಗಬೇಕೇ ಹೊರತು ಸೋಲಿನಿಂದ ಹಿಂಜರಿಯಬೇಡಿ. ಶಿಕ್ಷಣದ ಜತೆಗೆ, ಕಲೆ, ನೃತ್ಯ, ಕ್ರೀಡೆಯಂತಹ ಬೇರೆ ಕೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು, ಉತ್ತಮ ಕೆಲಸಗಳನ್ನು ಮಾಡಿ ಸಮಾಜಕ್ಕೆ ಕೀರ್ತಿ ತರುವ ಉನ್ನತ ಸಾಧನೆಯ ಗರಿ ನಿಮ್ಮದಾಗಲಿ ಎಂದು ಶುಭಕೋರಿದರು.
ಸಾಂಸ್ಕøತಿಕ ಸಮಿತಿಯ ವತಿಯಿಂದ ಕಾಲೇಜಿನಲ್ಲಿ ನಡೆಸಲಾಗಿದ್ದ ವಿವಿಧ ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಲಾಯಿತು.
ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪೆÇ್ರ.ಎಸ್.ಶಿವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ, ಕಾಲೇಜು ಸಾಂಸ್ಕøತಿಕ ವೇದಿಕೆಯ ಸಂಚಾಲಕಿ ಎಂ.ಎಸ್.ಸಂಧ್ಯಾರಾಣಿ, ದೈಹಿಕ ಶಿಕ್ಷಣ ಶಿಕ್ಷಕಿ ಕೆ. ಹೇಮಾವತಿ, ಅಧ್ಯಾಪಕ ಹಾಗೂ ಅಧ್ಯಾಪಕೇತರ ವರ್ಗ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.