
ವಿಜಯಪುರ,ಮಾ ೯- ಹೆಣ್ಣು ಈ ಸಮಾಜದ ಕಣ್ಣು, ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಆಕೆ. ಮಹಿಳೆ ಎಲ್ಲ ರಂಗಗಳಲ್ಲೂ ಇವತ್ತು ತನ್ನದೇ ಆದಂತಹ ಛಾಪನ್ನು ಮೂಡಿಸುತ್ತಿದ್ದಾಳೆ. ಉದಾಹರಣೆಗೆ ಪ್ರಾಥಮಿಕ ಶಾಲೆಗಳಲ್ಲಿ ಶೇಕಡ ೧೦೦% ಶಿಕ್ಷಕರಲ್ಲಿ, ೭೫% ಮಹಿಳಾ ಶಿಕ್ಷಕರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.” ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ, ಹೆಣ್ಣಿಂದಲೇ ಬಾಳು ಬಂಗಾರ”. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಇರತಕ್ಕಂತ ಎಲ್ಲಾ ಹೆಣ್ಣು ಮಕ್ಕಳಿಗೂ ಗೌರವವನ್ನು ನೀಡಬೇಕು ಎಂದು ಪ್ರಗತಿ ಆಂಗ್ಲ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜೆ.ಎನ್ ಪ್ರಕಾಶ್ ತಿಳಿಸಿದರು.
ಪಟ್ಟಣದ ಪ್ರಗತಿ ಆಂಗ್ಲ ಶಾಲೆಯಲ್ಲಿ ಬುಧವಾರದಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಕುರಿತು ಮಾತನಾಡಿದರು.
ಹಿರಿಯ ಶಿಕ್ಷಕ ಶಾಂತ ಮೂರ್ತಿ ಅವರು ಮಾತಾಡಿ ಹೆಣ್ಣು ಸೃಷ್ಟಿಯ ಅದ್ಭುತ ರೂಪ, ಭಾವನೆಗಳ ಒಡತಿ, ಸಾಧನೆಯ ಮೂರ್ತಿ ಹಾಗಾಗಿ ಎಲ್ಲಾ ಮಹಿಳೆಯರಿಗೂ ನಾವೆಲ್ಲರೂ ಸೇರಿ ಗೌರವವನ್ನು ಸೂಚಿಸೋಣ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಸಹಶಿಕ್ಷಕ ಆನಂದ್ ರವರು ಮಾತಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಯಾವಾಗ, ಎಲ್ಲಿ ಆಚರಿಸಲಾಯಿತು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಹಾಗೆ ಈ ಬಾರಿ ೨೦೨೩ರಲ್ಲಿ “ಸುಸ್ಥಿರ ನಾಳೆ ಗಾಗಿ ಇಂದು ಲಿಂಗ ಸಮಾನತೆ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟರು.
ಸಹ ಶಿಕ್ಷಕ ರಿಯಾಜ್ ಅಹಮದ್ ಮಾತಾಡಿ ಹೆಣ್ಣಾಗಿ ಹುಟ್ಟಿದಂತಹ ಈಕೆ ಯಾವ ರೀತಿ ಈ ಸಮಾಜದಲ್ಲಿ ಒಬ್ಬ ಮಗಳಾಗಿ ,ಸಹೋದರಿಯಾಗಿ ,ಗೆಳತಿಯಾಗಿ, ಹೆಂಡತಿಯಾಗಿ, ಮತ್ತು ತಾಯಿಯಾಗಿ, ತನ್ನದೇ ಆದಂತಹ ಕಾರ್ಯಗಳನ್ನು ನಿರ್ವಹಿಸುತ್ತಾಳೆ ಎಂಬುದನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳಿಸಿಕೊಟ್ಟರು.
ಏಳನೇ ತರಗತಿಯ ವಿದ್ಯಾರ್ಥಿನಿಯರು ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರಾಣಿ ಚೆನ್ನಮ್ಮ ಒನಕೆ ಓಬವ್ವ, ಸಾವಿತ್ರಿಬಾಯಿ ಪುಲೆ ,ಸುಧಾ ಮೂರ್ತಿ, ಪಿ .ಟಿ ಉಷಾ ಕಲ್ಪನಾ ಚಾವ್ಲಾ ಎಂಬ ಹಲವಾರು ರೀತಿಯ ಮಹಿಳೆಯರ ವೇಷ ಭೂಷಣಗಳನ್ನು ಹಾಕಿದ್ದರು.
ಕಾರ್ಯಕ್ರಮದ ಪ್ರಯುಕ್ತ ಎಲ್ಲಾ ಮಹಿಳಾ ಶಿಕ್ಷಕಿಯರಿಗೆ ಆಟಗಳನ್ನು ಆಡಿಸಲಾಯಿತು ಗೆದ್ದಂತ ಮಹಿಳೆಯರಿಗೆ ಬಹುಮಾನವನ್ನು ಕೂಡ ವಿತರಿಸಲಾಯಿತು.